Viral Video: ಆಕ್ಟಿಂಗ್‌ ಬಿಟ್ಟು ಜ್ಯೂಸ್‌ ಅಂಗಡಿ ಇಟ್ರಾ ಹೃತಿಕ್‌ ರೋಷನ್‌? ಇದೇನು ಹೊಸ ಕಥೆ

ಜಗತ್ತಿನಲ್ಲಿ ಒಂದೇ ರೂಪವನ್ನು ಹೊಂದಿರುವ ಏಳು ಜನರಿರುತ್ತಾರೆ ಎಂಬ ನಂಬಿಕೆಯಿದೆ. ಆದ್ರೆ ನಿಜವಾಗಿಯೂ ಈ ಒಂದೇ ರೀತಿ ಕಾಣುವ ಏಳು ಜನ ಇದ್ದಾರೋ ಇಲ್ವೋ ಗೊತ್ತಿಲ್ಲ, ಆದರೀಗ ಬಾಲಿವುಡ್‌ ಸ್ಟಾರ್‌ ನಟ ಹೃತಿಕ್‌ ರೋಷನ್‌ ಅವರನ್ನು ಹೋಲುವ ತದ್ರೂಪಿಯೊಬ್ಬರು ಸಿಕ್ಕಿದ್ದು, ಈ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.

Viral Video: ಆಕ್ಟಿಂಗ್‌ ಬಿಟ್ಟು ಜ್ಯೂಸ್‌ ಅಂಗಡಿ ಇಟ್ರಾ ಹೃತಿಕ್‌ ರೋಷನ್‌? ಇದೇನು ಹೊಸ ಕಥೆ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2024 | 5:59 PM

ಈ ಪ್ರಪಂಚದಲ್ಲಿ ಒಬ್ಬರಂತೆ ಏಳು ಮಂದಿ ಇರುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಒಬ್ಬರಂತೆ ಕಾಣುವ ಮತ್ತೊಬ್ಬರು ಸಿಕ್ಕಿದ್ದೂ ಉಂಟು. ಅದರಲ್ಲೂ ಯಾರಾದರೂ ಸಿನೆಮಾ ತಾರೆಗಳ ಹೋಲಿಕೆ ಹೊಂದಿದ್ದರೆ ಅವರು ಬಹಳ ಬೇಗ ಗುರುತಿಸಲ್ಪಡುವುದರ ಜೊತೆಗೆ ಸಖತ್‌ ಫೇಮಸ್‌ ಕೂಡಾ ಅಗುತ್ತಾರೆ. ಅದೇ ರೀತಿ ಇದೀಗ ಬಾಲಿವುಡ್‌ ಸ್ಟಾರ್‌ ನಟ ಹೃತಿಕ್‌ ರೋಷನ್‌ ಅವರನ್ನೇ ಹೋಲುವ ತದ್ರೂಪಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್‌ ಖ್ಯಾತ ನಟ ಹೃತಿಕ್‌ ರೋಷನ್‌ ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದವರು. ಇದೀಗ ಈ ನಟನನ್ನೇ ಹೋಲುವ ತದ್ರೂಪಿಯೊಬ್ಬರು ಸಿಕ್ಕಿದ್ದಾರೆ. ಈ ವ್ಯಕ್ತಿ ಮಹರಾಷ್ಟ್ರದ ತಾಸ್ಗಾಂವ್‌ ಎಂಬಲ್ಲಿ ಜ್ಯೂಸ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವರನ್ನು ನೋಡಿ ಅರೇ ಹೃತಿಕ್‌ ರೋಷನ್‌ ನಟನೆ ಬಿಟ್ಟು ಜ್ಯೂಸ್‌ ಮಾರೋ ಕೆಲಸಕ್ಕೆ ಏನಾದ್ರೂ ಸೇರ್ಕೊಂಡ್ರಾ ಎಂದು ನೋಡುಗರು ಫುಲ್‌ ಕನ್ಫ್ಯೂಷನ್‌ ಆಗಿದ್ದಾರೆ.

bramha_juice_tagaon ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡಲು ಥೇಟ್‌ ಬಾಲಿವುಡ್‌ ಸ್ಟಾರ್‌ ಹೃತಿಕ್‌ ರೋಷನ್‌ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಗ್ರಾಹಕರಿಗೆ ಜ್ಯೂಸ್‌ ಸರ್ವ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇದು ವಿಶ್ವದ ಮೊದಲ ಎಐ ಬಟ್ಟೆ; ಹೇಗಿದೆ ನೋಡಿ ಈ ರೋಬೋಟಿಕ್‌ ಸ್ನೇಕ್‌ ಡ್ರೆಸ್‌

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 21.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಹೃತಿಕ್‌ ರೋಷನ್‌ ತದ್ರೂಪಿಯನ್ನು ನೋಡಿ ಅಚ್ಚರಿ ಪಟ್ಟರೆ ಇನ್ನೂ ಹಲವರು ಇದು ಎಐ ಜನರೇಟೆಡ್‌ ವಿಡಿಯೋ ಎಂದು ಕಾಮೆಂಟ್ಸ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್