Shocking News: ಬೃಹತ್ ಹೆಬ್ಬಾವಿನ ಬಾಯೊಳಗೆ ಪ್ರೇಯಸಿಯ ಕಾಲು ನೋಡಿ ಪ್ರೇಮಿ ಶಾಕ್

ಬೃಹತ್ ಹೆಬ್ಬಾವೊಂದು ಮಹಿಳೆಯನ್ನು ನುಂಗಿ ಕೊಂದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಆಕೆಯ ಪ್ರೇಮಿ ಹೆಬ್ಬಾವಿನ ಬಾಯೊಳಗೆ ತನ್ನ ಪ್ರೇಯಸಿಯ ಕಾಲುಗಳು ಕಾಣುತ್ತಿರುವುದನ್ನು ಕಂಡು ಶಾಕ್ ಆಗಿದ್ದಾನೆ. ಈ ವೇಳೆ ಆಕೆಯನ್ನು ಹಾವು ತಿಂದಿರುವ ವಿಷಯ ಬೆಳಕಿಗೆ ಬಂದಿದೆ.

Shocking News: ಬೃಹತ್ ಹೆಬ್ಬಾವಿನ ಬಾಯೊಳಗೆ ಪ್ರೇಯಸಿಯ ಕಾಲು ನೋಡಿ ಪ್ರೇಮಿ ಶಾಕ್
ಹೆಬ್ಬಾವು
Follow us
ಸುಷ್ಮಾ ಚಕ್ರೆ
|

Updated on: Jul 03, 2024 | 7:03 PM

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ಮಂಗಳವಾರ ಕಾಡಿನ ಮಾರ್ಗದಲ್ಲಿ ಪೇಟೆಗೆ ಹೊರಟಿದ್ದ ಮಹಿಳೆ ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಅವಳನ್ನು ಹುಡುಕುತ್ತಾ ಬಂದ ಪ್ರೇಮಿ ಕಾಡಿನಲ್ಲಿ ಹೆಬ್ಬಾವಿನ ಬಾಯಿಯೊಳಗೆ ತನ್ನ ಪ್ರೇಯಸಿಯ ಕಾಲುಗಳನ್ನು ಕಂಡು ಭಯಭೀತನಾಗಿದ್ದಾನೆ. ಆಗ ಆತನಿಗೆ ತನ್ನ ಪ್ರೇಯಸಿಯನ್ನು ಹೆಬ್ಬಾವು ನುಂಗಿರುವ ಆಘಾತಕಾರಿ ವಿಷಯ ಗೊತ್ತಾಗಿದೆ.

36 ವರ್ಷ ವಯಸ್ಸಿನ ಸಿರಿಯಾತಿ ತನ್ನ ಸಹೋದರನನ್ನು ಭೇಟಿ ಮಾಡಲು ಕಾಡಿನ ಮಾರ್ಗದಲ್ಲಿ ಹೊರಟಿದ್ದಳು. ಸೌತ್ ಸುಲವೇಸಿಯ ಲುವು ರೀಜೆನ್ಸಿಯಲ್ಲಿ ಔಷಧಿಯನ್ನು ಖರೀದಿಸಲು ಹೊರಟಿದ್ದಳು. ಆದರೆ, ಅಂಗಡಿಗೆ ಹೋಗಲು ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದಾಗ 30 ಅಡಿ ಎತ್ತರದ ಹೆಬ್ಬಾವು ಅವಳ ಕಾಲನ್ನು ತನ್ನ ಹಲ್ಲುಗಳಿಂದ ಹಿಡಿದುಕೊಂಡು ದಾಳಿ ಮಾಡಿತು.

ಇದನ್ನೂ ಓದಿ: ಬಾಯ್​ಫ್ರೆಂಡ್ ಜೊತೆ ಬದುಕಲು ಗಂಡನೇ ದುಡ್ಡು ಕೊಡಬೇಕು!; ಹೆಂಡತಿಯ ಬೇಡಿಕೆಗೆ ಪತಿ ಶಾಕ್

ನಂತರ ಅವಳನ್ನು ನುಂಗಲಾರಂಭಿಸಿತು. ಆಕೆಯನ್ನು ಗಟ್ಟಿಯಾಗಿ ಸುತ್ತಿಕೊಂಡು ಸಾಯಿಸಿತು. ಬೃಹತ್ ಹಾವು ಸುತ್ತಿಕೊಂಡಿದ್ದರಿಂದ ಆಕೆಯ ಮೂಳೆಗಳೆಲ್ಲ ಮುರಿದುಹೋಗಿದ್ದವು. ಆಕೆ ಎಷ್ಟು ಹೊತ್ತಾದರೂ ಪೇಟೆಗೆ ಬರದಿದ್ದರಿಂದ ಆಕೆಯ ಸಹೋದರ ಮನೆಗೆ ಫೋನ್ ಮಾಡಿ ವಿಚಾರಿಸಿದ್ದ. ಈ ವಿಷಯ ತಿಳಿದು ಆಕೆಯ ಪ್ರೇಮಿ ಅವಳನ್ನು ಹುಡುಕುತ್ತಾ ಕಾಡಿನೊಳಗೆ ಬಂದಿದ್ದ. ಆಗ ಆ ಮಹಿಳೆಯ ಪ್ರೇಮಿ ಅಡಿಯಾನ್ಸಾ ಅವಳನ್ನು ಹುಡುಕುತ್ತಾ ಕಾಡಿನೊಳಗೆ ಬಂದಾಗ ಅಲ್ಲಿ ಆಕೆಯ ಚಪ್ಪಲಿಯನ್ನು ನೋಡಿದನು.

ಆಕೆಯ ಚಪ್ಪಲಿ ಬಿದ್ದಿದ್ದ ಜಾಗದ ಪಕ್ಕದಲ್ಲಿ ಹೊಟ್ಟೆ ಊದಿಕೊಂಡಿದ್ದ ಬೃಹತ್ ಹೆಬ್ಬಾವು ಬಿದ್ದುಕೊಂಡಿತ್ತು. ಆತ ಬೇರೆಡೆ ನೋಡಿಕೊಂಡು ಹೋಗುತ್ತಿದ್ದಾಗ ನೆಲದ ಮೇಲೆ ಸುಸ್ತಾಗಿ ಮಲಗಿದ್ದ ಬೃಹತ್ ಹೆಬ್ಬಾವಿನ ಮೇಲೆ ಎಡವಿ ಬಿದ್ದನು.

ಇದನ್ನೂ ಓದಿ: Shocking News: ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್; ಶಾಕ್ ಆದ ಮಾಲೀಕ

ಆಗ ಹೆಬ್ಬಾವಿನ ಬಾಯಿಯಿಂದ ಸಿರಿಯಾತಿಯ ಕಾಲುಗಳು ಹೊರಬರುವುದನ್ನು, ಅವಳ ಚಪ್ಪಲಿಗಳು ಮತ್ತು ಪ್ಯಾಂಟ್ ನೆಲದ ಮೇಲೆ ಬಿದ್ದಿರುವುದನ್ನು ನೋಡಿದ ಆತನಿಗೆ ತನ್ನ ಪ್ರೇಯಸಿಯನ್ನು ಹಾವು ನುಂಗಿದೆ ಎಂಬುದು ಗೊತ್ತಾಯಿತು. ಇದರಿಂದ ಆಘಾತಕ್ಕೀಡಾದ ಆತ ದೊಡ್ಡ ಮರದ ಕೋಲನ್ನು ತೆಗೆದುಕೊಂಡು ಹಾವಿನ ದೇಹವನ್ನು ಚುಚ್ಚಿದನು. ಬಳಿಕ ಪಕ್ಕದ ಗ್ರಾಮಸ್ಥರ ನೆರವಿನಿಂದ ಆ ಹಾವಿನ ಹೊಟ್ಟೆಯನ್ನು ಬಗೆದು ನೋಡಿದಾಗ ಅದರೊಳಗೆ ಸಿರಿಯಾತಿಯ ಶವ ಪತ್ತೆಯಾಗಿದೆ.

ಶವವನ್ನು ಹೆಬ್ಬಾವಿನ ಹೊಟ್ಟೆಯಿಂದ ಹೊರತೆಗೆದು ಮರುದಿನ ಬೆಳಿಗ್ಗೆ ಸಿತೇಬ್ ಗ್ರಾಮದಲ್ಲಿ ಹೂಳಲಾಯಿತು. ಆ ಹಾವು ಆ ಮಹಿಳೆಯನ್ನು ನುಂಗಿ, 5 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಸಂತ್ರಸ್ತೆಯ ಕಾಲಿನಲ್ಲಿ ಹಾವು ಕಚ್ಚಿದಂತೆ ಕಾಣಿಸಿಕೊಂಡ ಗಾಯವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ