Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್

ಮಹಾರಾಷ್ಟ್ರದ ಲೋನಾವಾಲಾ ಬಳಿಯ ಜಲಪಾತವೊಂದರ ದುರಂತ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಭೂಶಿ ಅಣೆಕಟ್ಟಿನ ನೀರಿನಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಕೊಚ್ಚಿ ಹೋಗಿರುವ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
|

Updated on: Jul 01, 2024 | 9:25 PM

ಪುಣೆ: ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಜಲಪಾತದಲ್ಲಿ ಮುಳುಗಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಹಾಗೇ, ಅದೇ ಕುಟುಂಬದ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ 4 ವರ್ಷದ ಮಗು ಕೂಡ ಸೇರಿದೆ. ಒಬ್ಬ ಮಹಿಳೆ ಮತ್ತು ನಾಲ್ಕು ಮಕ್ಕಳು ಲೋನಾವಾಲಾದ ಭೂಶಿ ಅಣೆಕಟ್ಟಿನ ಬಳಿಯ ಜಲಪಾತಕ್ಕೆ ಹೋಗಿದ್ದರು. ಮಳೆ ಕಡಿಮೆ ಇದ್ದುದರಿಂದ ಜಲಪಾತಕ್ಕೆ ಇಳಿದಿದ್ದಾರೆ. ಆದರೆ, ಅದೇ ವೇಳೆ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಾಗಿ ಜಲಪಾತದಲ್ಲಿ ಭಾರೀ ಪ್ರಮಾಣದ ನೀರು ಬಂದಿದೆ. ಇದರಿಂದ ಜಲಪಾತದ ನಡುವೆ ಸಿಕ್ಕಿಕೊಂಡ ಆ ಐವರು ದಡಕ್ಕೆ ಬರಲಾರದೆ ಕಿರುಚಾಡಿದ್ದಾರೆ. ಅಲ್ಲೇ ದಡದಲ್ಲಿದ್ದವರು ಅವರ ಸಹಾಯಕ್ಕೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಕೊನೆಗೆ ಆ ಐವರೂ ಜಲಪಾತದ ನೀರಿನಲ್ಲಿ ಕೊಚ್ಚಿಹೋಗಿರುವುದನ್ನು ದಡದಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಈಗಾಗಲೇ ಮೂವರ ಶವಗಳು ದೊರಕಿದ್ದು, ಇನ್ನೂ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಭಾನುವಾರ ಪಿಕ್ನಿಕ್‌ಗೆ ತೆರಳಿದ್ದ ವೇಳೆ ಪುಣೆ ಸಮೀಪದ ಲೋನಾವಾಲಾದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಕೊಚ್ಚಿಹೋದ ಕುಟುಂಬದ ಸದಸ್ಯರಲ್ಲಿ ನವವಿವಾಹಿತರು ಕೂಡ ಸೇರಿದ್ದಾರೆ. ಭಾನುವಾರ ಮಧ್ಯಾಹ್ನ ಅಪಘಾತ ಸಂಭವಿಸಿದಾಗ ಕುಟುಂಬದ 19 ಸದಸ್ಯರು ಜನಪ್ರಿಯ ಪ್ರವಾಸಿ ತಾಣದಲ್ಲಿ ಪಿಕ್ನಿಕ್‌ಗೆ ತೆರಳಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ
ರಬಕವಿಯಲ್ಲಿ 25 ಬೆರಳುಗಳು ಇರೋ ಅಪರೂಪದ ಮಗು ಜನನ
ರಬಕವಿಯಲ್ಲಿ 25 ಬೆರಳುಗಳು ಇರೋ ಅಪರೂಪದ ಮಗು ಜನನ
ತಪ್ಪು  ಅಧಿಕಾರಿಗಳಿಂದ ನಡೆದಿದ್ದರೂ ಸರ್ಕಾರವೇ ಅದಕ್ಕೆ ಹೊಣೆ: ಕುಮಾರಸ್ವಾಮಿ
ತಪ್ಪು  ಅಧಿಕಾರಿಗಳಿಂದ ನಡೆದಿದ್ದರೂ ಸರ್ಕಾರವೇ ಅದಕ್ಕೆ ಹೊಣೆ: ಕುಮಾರಸ್ವಾಮಿ
ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಶಾಲಾ ಮಕ್ಕಳಿಗೆ ಇನ್ನು ಸಿಗಲಿವೆ ಮೊಟ್ಟೆ
ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಶಾಲಾ ಮಕ್ಕಳಿಗೆ ಇನ್ನು ಸಿಗಲಿವೆ ಮೊಟ್ಟೆ
ಉಡುಪಿ ಕರಾವಳಿ ಪ್ರದೇಶದಲ್ಲಿ ರಕ್ಕಸ ಗಾತ್ರದ ಅಲೆಗಳಿಂದ ಕಡಲ್ಕೊರೆತ
ಉಡುಪಿ ಕರಾವಳಿ ಪ್ರದೇಶದಲ್ಲಿ ರಕ್ಕಸ ಗಾತ್ರದ ಅಲೆಗಳಿಂದ ಕಡಲ್ಕೊರೆತ