Viral Video: ಕೇದಾರನಾಥ ದೇಗುಲದ ಬಳಿ ಭಾರೀ ಹಿಮಪಾತ; ಭಯಾನಕ ವಿಡಿಯೋ ವೈರಲ್
ಭಾನುವಾರ(ಜೂ.30) ಮುಂಜಾನೆ 5 ಗಂಟೆ ಸುಮಾರಿಗೆ ಕೇದಾರನಾಥದ ಬಳಿ ಭಾರೀ ಹಿಮ ಕುಸಿತ ಸಂಭವಿಸಿದೆ. ಈ ಅವಘಡದಿಂದಾಗಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ದೇವಾಲಯವೇ ಸಂಪೂರ್ಣ ಸುರಕ್ಷಿತವಾಗಿದೆ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಶಾಖ ಅಶೋಕ್ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೇದಾರನಾಥಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿ ಹಿಮಪಾತ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾನುವಾರ(ಜೂ.30) ಬೆಳಗ್ಗೆ ಗಾಂಧಿ ಸರೋವರ ಬೆಟ್ಟಗಳಿಂದ ಭಾರೀ ಮಳೆ ಸುರಿದಿದ್ದು, ಮುಂಜಾನೆ 5 ಗಂಟೆ ಸುಮಾರಿಗೆ ಕೇದಾರನಾಥದ ಗಾಂಧಿ ಸರೋವರದಲ್ಲಿ ಹಿಮಕುಸಿತ ಸಂಭವಿಸಿದೆ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಶಾಖ ಅಶೋಕ್ ತಿಳಿಸಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
VIDEO | Uttarakhand: An avalanche occurred over Gandhi Sarovar in Kedarnath. No loss of life and property was reported. More details are awaited. pic.twitter.com/yfgTrYh0oc
— Press Trust of India (@PTI_News) June 30, 2024
ಇದನ್ನೂ ಓದಿ: 3 ಅಡಿ ಎತ್ತರದ ಗಣೇಶ್ ಬಾರಯ್ಯ ವಿಶ್ವದ ಅತ್ಯಂತ ಕುಳ್ಳಗಿನ ಡಾಕ್ಟರ್
ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿರುವ ಪರ್ವತದ ಮೇಲೆ ಹಠಾತ್ ಹಿಮಕುಸಿತವನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಿಮಪಾತದಲ್ಲಿ ಬಿದ್ದ ಹಿಮವು ಹೆಚ್ಚಿನ ವೇಗದಲ್ಲಿ ಧಾವಿಸಿ ದೇವಸ್ಥಾನದ ಹಿಂದೆ ಇರುವ ಗಾಂಧಿ ಸರೋವರಕ್ಕೆ ಬಂದು ಬಿದ್ದಿದೆ. ಈ ಅವಘಡದಿಂದಾಗಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ದೇವಾಲಯವೇ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.
@PTI_News ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 30ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ