Viral Video: ಆಕಸ್ಮಿಕವಾಗಿ ಕೋಲಿನಿಂದ ವಿದ್ಯುತ್ ಲೈನ್ ಸ್ಪರ್ಶಿಸಿದ ವ್ಯಕ್ತಿ ಸಾವು; ಆಘಾತಕಾರಿ ಘಟನೆಯ ವಿಡಿಯೋ ವೈರಲ್

ಉತ್ತರ ಪ್ರದೇಶ ರಾಜ್ಯದ ಮಹೋಬಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ದೇವಸ್ಥಾನದ ರಥೋತ್ಸವದ ಪ್ರಯುಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಆಕಸ್ಮಿಕವಾಗಿ ಮರದ ಕೋಲಿನಿಂದ ತನ್ನ ಮನೆಯ ಅಂಗಳದ ಮೇಲಿದ್ದ 33 ಕೆವಿ ವಿದ್ಯುತ್ ತಂತಿಯನ್ನು ಮುಟ್ಟಿದ್ದಾನೆ. ಆಗ ಕರೆಂಟ್ ಲೈನ್​ನಿಂದ ಶಾಕ್ ಹೊಡೆದು ಆ ಯುವಕ ಮೃತಪಟ್ಟಿದ್ದಾನೆ.

Viral Video: ಆಕಸ್ಮಿಕವಾಗಿ ಕೋಲಿನಿಂದ ವಿದ್ಯುತ್ ಲೈನ್ ಸ್ಪರ್ಶಿಸಿದ ವ್ಯಕ್ತಿ ಸಾವು; ಆಘಾತಕಾರಿ ಘಟನೆಯ ವಿಡಿಯೋ ವೈರಲ್
ಆಕಸ್ಮಿಕವಾಗಿ ಕೋಲಿನಿಂದ ವಿದ್ಯುತ್ ಲೈನ್ ಸ್ಪರ್ಶಿಸಿದ ವ್ಯಕ್ತಿ ಸಾವು
Follow us
ಸುಷ್ಮಾ ಚಕ್ರೆ
|

Updated on: Jul 04, 2024 | 3:49 PM

ನೊಯ್ಡಾ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಮರದ ಕೋಲಿನಿಂದ ತನ್ನ ಮನೆಯ ಮುಂದೆ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬುಧವಾರ ಸಂಜೆ ದೇವಸ್ಥಾನದ ರಥೋತ್ಸವಕ್ಕೆ ಸಿದ್ಧತೆ ನಡೆಸಿದ್ದ ದೇವೇಂದ್ರ ಎಂಬ ವ್ಯಕ್ತಿ ಕೋಲಿನಿಂದ ಆಕಸ್ಮಿಕವಾಗಿ ಲೈನನ್ನು ಮುಟ್ಟಿದ್ದ. ಆತನಿಗೇ ತಿಳಿಯದಂತೆ ಬಿದಿರಿನ ಕೋಲಿಗೆ ಕರೆಂಟ್ ಲೈನ್ ತಾಗಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ತೇವವಾಗಿದ್ದ ಕಂಬವು 33KV ವಿದ್ಯುತ್ ತಂತಿಗೆ ತಾಗುತ್ತಿದ್ದಂತೆ ಆತನಿಗೆ ಕರೆಂಟ್ ಹೊಡೆದಿದೆ. ಎಲ್ಲರೂ ಪೂಜೆಯ ತಯಾರಿಯಲ್ಲಿ ನಿರತರಾಗಿದ್ದರು. ಆ ವೇಳೆ ಈ ಘಟನೆ ನಡೆದಿದೆ. ಎಲ್ಲರೂ ನೋಡನೋಡುತ್ತಿದ್ದಂತೆ ದೇವೇಂದ್ರನಿಗೆ ವಿದ್ಯುತ್ ಸ್ಪರ್ಶವಾಯಿತು. ಇದೆಲ್ಲವೂ ಕಣ್ಮುಚ್ಚಿ ಬಿಡುವಷ್ಟರಲ್ಲಿ ಸಂಭವಿಸಿತು ಎಂದು ಕಂಗಾಲಾದ ಕುಟುಂಬದ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಜೈಲಧಿಕಾರಿ ಜೊತೆ ಕೈದಿಯ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್

ಕರೆಂಟ್ ಹೊಡೆದಿದ್ದರಿಂದ ಕೆಳಗೆ ಬಿದ್ದಿದ್ದ ದೇವೇಂದ್ರನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಅವರು ಬರುವಷ್ಟರಲ್ಲಿ ಮಾರ್ಗದಲ್ಲಿಯೇ ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಭೀಕರ ಘಟನೆಯನ್ನು ಸೆರೆ ಹಿಡಿದಿರುವ ಒಂದು ನಿಮಿಷದ ಸಿಸಿಟಿವಿ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಕೆಲವೇ ಸೆಕೆಂಡುಗಳಲ್ಲಿ ದೇವೇಂದ್ರ ಕುಸಿದು ಬೀಳುವುದನ್ನು ದೃಶ್ಯಾವಳಿ ತೋರಿಸುತ್ತದೆ.

ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್

ನೊಂದ ಕುಟುಂಬವು ಮನೆಗಳ ಬಳಿ ಹಾದುಹೋಗುವ ಬಹಿರಂಗವಾದ ಹೈ-ವೋಲ್ಟೇಜ್ ಲೈನ್‌ನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ದೇವೇಂದ್ರನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ