ಮತ್ತೆ ರಸ್ತೆ ಅಪಘಾತ: ಬೆಳಗಿನ ಜಾವ ನಾಲ್ವರು ವಲಸೆ ಕಾರ್ಮಿಕರ ದುರ್ಮರಣ

| Updated By:

Updated on: May 23, 2020 | 6:33 AM

ಮಹಾರಾಷ್ಟ್ರ: ವಲಸೆ ಕಾರ್ಮಿಕರ ಬದುಕು ನಿಜಕ್ಕೂ ದುರಂತ ಅಂತ್ಯ ಕಾಣುತ್ತಿದೆ. ನಿನ್ನೆ ರಾತ್ರಿ ಬಸ್ಸಿನಲ್ಲಿ ತಮ್ಮೂರುಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರ ಪೈಕಿ ನಾಲ್ಕು ಮಂದಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಇಂದು ಬೆಳಗಿನ ಜಾವ ಯಾವತ್ಮಾಲ್ ಬಳಿ ಕಾರ್ಮಿಕರಿದ್ದ ಬಸ್ಸು, ಟ್ರಕ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಸೋಲಾಪುರದಿಂದ ಜಾರ್ಖಂಡ್​ ಕಡೆಗೆ ಪ್ರಯಾಣಿಸುತ್ತಿತ್ತು. ಭೀಕರ ಅಪಘಾತದಲ್ಲಿ 15 ಕಾರ್ಮಿಕರು ಗಾಯಗೊಂಡಿದ್ದಾರೆ. ಲಾಕ್​ಡೌನ್​ ಕಾಲದಲ್ಲಿ ದೇಶಾದ್ಯಂತ ಇದುವರೆಗೆ ಇಂತಹ ರಸ್ತೆ ಅಪಘಾತಗಳಲ್ಲಿ ಸುಮಾರು 400 ಮಂದಿ ಕಾರ್ಮಿಕರು […]

ಮತ್ತೆ ರಸ್ತೆ ಅಪಘಾತ: ಬೆಳಗಿನ ಜಾವ ನಾಲ್ವರು ವಲಸೆ ಕಾರ್ಮಿಕರ ದುರ್ಮರಣ
Follow us on

ಮಹಾರಾಷ್ಟ್ರ: ವಲಸೆ ಕಾರ್ಮಿಕರ ಬದುಕು ನಿಜಕ್ಕೂ ದುರಂತ ಅಂತ್ಯ ಕಾಣುತ್ತಿದೆ. ನಿನ್ನೆ ರಾತ್ರಿ ಬಸ್ಸಿನಲ್ಲಿ ತಮ್ಮೂರುಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರ ಪೈಕಿ ನಾಲ್ಕು ಮಂದಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಇಂದು ಬೆಳಗಿನ ಜಾವ ಯಾವತ್ಮಾಲ್ ಬಳಿ ಕಾರ್ಮಿಕರಿದ್ದ ಬಸ್ಸು, ಟ್ರಕ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಸೋಲಾಪುರದಿಂದ ಜಾರ್ಖಂಡ್​ ಕಡೆಗೆ ಪ್ರಯಾಣಿಸುತ್ತಿತ್ತು. ಭೀಕರ ಅಪಘಾತದಲ್ಲಿ 15 ಕಾರ್ಮಿಕರು ಗಾಯಗೊಂಡಿದ್ದಾರೆ. ಲಾಕ್​ಡೌನ್​ ಕಾಲದಲ್ಲಿ ದೇಶಾದ್ಯಂತ ಇದುವರೆಗೆ ಇಂತಹ ರಸ್ತೆ ಅಪಘಾತಗಳಲ್ಲಿ ಸುಮಾರು 400 ಮಂದಿ ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.

 

Published On - 10:42 am, Tue, 19 May 20