ವಿಧಾನಸಭೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧವೇ ಮಸೂದೆ ಮಂಡಿಸಲಾಗುವುದು -ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್

|

Updated on: Feb 02, 2021 | 5:15 PM

ಸದ್ಯ ಗಣರಾಜ್ಯೋತ್ಸವದಂದು ನಡೆದ ಗಲಭೆ ಪ್ರಕರಣದ ಸಂಬಂಧ 70 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ 14 ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದರು.

ವಿಧಾನಸಭೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧವೇ ಮಸೂದೆ ಮಂಡಿಸಲಾಗುವುದು -ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್
Follow us on

ದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದರು.

ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಲಭೆ ಉದ್ದೇಶಿಸಿ ಕರೆಯಲಾಗಿದ್ದ ಸರ್ವಪಕ್ಷ ಸಭೆಯ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಭಟನೆಯಲ್ಲಿ ನಡೆದ ಗಲಾಟೆಯಲ್ಲಿ ಹೊರಗಿನವರ ಕೈವಾಡವಿದೆ ಎಂದಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಮತ್ತು ಗಣರಾಜ್ಯೋತ್ಸವ ದಿನದ ಗಲಭೆಯ ಕುರಿತು ಸರ್ವಪಕ್ಷ ನಿಯೋಗ ರಚಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದೇವೆ ಎಂದು ಅವರು ತಿಳಿಸಿದರು.

ಗಲಭೆಯಂದು ತೊಂದರೆಗೊಳಗಾದವರಿಗಾಗಿ 112 ಸಹಾಯವಾಣಿ ಸೃಷ್ಟಿಸಲಾಗಿತ್ತು. ಈವರೆಗೆ ಪಂಜಾಬ್​ನ ಐವರು ನಾಪತ್ತೆಯಾಗಿರುವುದು ಪತ್ತೆಯಾಗಿದೆ ಎಂದರು. ಸದ್ಯ ಈ ಪ್ರಕರಣದ ಸಂಬಂಧ 70 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ 14 ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.

ಶಿರೋಮಣಿ ಅಕಾಲಿದಳ ನಾಯಕರ ಮೇಲೆ ಹಲ್ಲೆ
ಪಂಜಾಬ್​ನ ಜಲಾಲಾಬಾದ್​ನಲ್ಲಿ ಶಿರೋಮಣಿ ಅಕಾಲದಳದ ಅಧ್ಯಕ್ಷ ಸುಖ್​ಬೀರ್ ಸಿಂಗ್ ಬಾದಲ್ ಅವರ ವಾಹನದ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ, ಈ ಘಟನೆಯ ಹಿಂದೆ ಕಾಂಗ್ರೆಸ್​ನ ಕೈವಾಡವಿದೆ ಎಂದು ಶಿರೋಮಣಿ ಅಕಾಲಿದಳ ವಾದಿಸಿದೆ.

 

ಟಿಕ್ರಿ ಗಡಿಯಲ್ಲಿ ರಸ್ತೆಗಳಿಗೆ ಮೊಳೆ ಹೊಡೆಯಲಾಗಿದೆ

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟಿಕ್ರಿ ಗಡಿಯ ರಸ್ತೆಗಳನ್ನು ಅಗೆಯಲಾಗಿದೆ

ರೈತರನ್ನು ತಡೆಯಲು ರಸ್ತೆಗೆ ಮೊಳೆ ಹೊಡೆದ ಪೊಲೀಸರು
ಪಂಜಾಬ್ ರೈತರ ಪ್ರತಿಭಟನೆಯ ಬಿಸಿ ಇನ್ನೂ ಇಳಿಯದ ಕಾರಣ ದೆಹಲಿಯ ಗಡಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ, ಟಿಕ್ರಿ ಗಡಿಯಲ್ಲಿ ರೈತರನ್ನು ನಿಯಂತ್ರಿಸಲು ರಸ್ತೆಗಳಿಗೆ ಮೊಳೆ ಹೊಡೆಯಲಾಗಿದೆ. ನಿನ್ನೆ ಬಜೆಟ್ ಮಂಡನೆಯೂ ಇದ್ದ ಹಿನ್ನೆಲೆಯಲ್ಲಿ ರೈತರು ಪ್ರತಿಭಟಿಸದಂತೆ ತಡೆಯಲು ಪೊಲೀಸರು ನಾನಾ ಪ್ರಯತ್ನದಲ್ಲಿ ತೊಡಗಿದ್ದಾರೆ.

ಟ್ರ್ಯಾಕ್ಟರ್ ಮೆರವಣಿಗೆ: ಪ್ರತಿಭಟನಾನಿರತ ರೈತರು ಪೂರ್ವ ನಿರ್ಧರಿತ ಮಾರ್ಗಗಳನ್ನು ಬಿಟ್ಟು ಬೇರೆ ರಸ್ತೆ ಹಿಡಿದಿದ್ದೇಕೆ?