ಭೋಪಾಲ್: ಗ್ವಾಲಿಯಾರ್ ವಿಮಾನ ನಿಲ್ದಾಣದ ರನ್ವೇ ನಲ್ಲಿ (Gwalior Runway) ಅಧಿಕಾರಿಗಳ ತಪ್ಪಿನಿಂದಾಗಿ ಕೊರೊನಾ ಸೋಂಕಿನ ಔಷಧ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೆ ತುತ್ತಾಗಿ, ಜೊತೆಗೆ ಸರ್ಕಾರದ ಅಚಾತುರ್ಯವೂ ಸೇರಿ ಮಧ್ಯ ಪ್ರದೇಶ ಸರ್ಕಾರ 85 ಕೋಟಿ ರೂಪಾಯಿ ಬಿಲ್ ಕಕ್ಕಿರುವ ಪ್ರಸಂಗ ನಡೆದಿದೆ. ಆದರೆ ಮಧ್ಯ ಪ್ರದೇಶ ಸರ್ಕಾರ ಈ ಅಪಘಾತ ಸಂಭವಿಸಿದ್ದು ಪೈಲಟ್ ಅಚಾತುರ್ಯದಿಂದಾಗಿ. ಹಾಗಾಗಿ ಆತನೇ 85 ಕೋಟಿ ರೂಪಾಯಿ ಬಿಲ್ ತೆರಬೇಕು ಎಂದು ಪಟ್ಟುಹಿಡಿದಿತ್ತು. ಇಲ್ಲಿ ಎರಡು ಎಡವಟ್ಟುಗಳು ನಡೆದಿದ್ದವು. ಒಂದು, ರನ್ವೇ ನಲ್ಲಿ ನಿರ್ಮಿಸಲಾಗಿದ್ದ ಅಡ್ಡಗೋಡೆಯನ್ನು ವಿಮಾನದ ಪೈಲಟ್ ಗಮನಕ್ಕೆ ತಂದಿರಲಿಲ್ಲ. ಎರಡನೆಯದು, ರಾಜ್ಯ ಸರ್ಕಾರವು ಆ ವಿಮಾನಕ್ಕೆ ವಿಮಾ ಮಾಡಿಸಿರಲಿಲ್ಲ! ಮಧ್ಯ ಪ್ರದೇಶದಲ್ಲಿ ಸರಕು ಸಾಗಣೆ ವಿಮಾನದ ಪೈಲಟ್ ಕೊರೊನಾ ವಾರಿಯರ್ (Covid warrior) ಆಗಿ ಕೊರೊನಾ ಕಾಲದಲ್ಲಿ ರೆಮ್ಡೆಸಿವರ್ ಔಷಧಗಳನ್ನು ವಿಮಾನ ಮೂಲಕ ಸಾಗಿಸುತ್ತಿದ್ದಾಗ ಅದು ಅಪಘಾತಕ್ಕೆ ತುತ್ತಾಗಿ ಇಡೀ ಔಷಧ ಹಾಳಾಗುವುದರ ಜೊತೆಗೆ ಆ ವಿಮಾನವು ಗುಜರಿಗೆ ಸಹ ಲಾಯಕ್ ಇಲ್ಲದಂತಾಗಿತ್ತು. ಇದಕ್ಕೆ ಕಾರಣೀಭೂತಾಗಿದ್ದು ಮಾತ್ರ ರಾಜ್ಯ ಸರ್ಕಾರ ಮತ್ತು ವಾಯು ಸಂಚಾರ ನಿಯಂತ್ರಣ ಕೇಂದ್ರ (Air Traffic Controller-ATC) ಎಂಬುದು ಗಮನಾರ್ಹ. ಈ ಅಪಘಾತದಲ್ಲಿ ತನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಿಮಾನದ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ (Captain Majid Akhtar) ಮತ್ತು ಸಹ ಪೈಲಟ್ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಕಳೆದ ವರ್ಷ, ಮೊದಲ ಕೋವಿಡ್ ಅಲೆ ಸಂದರ್ಭದಲ್ಲಿ. ಕಳೆದ ವಾರ ರಾಜ್ಯ ಸರ್ಕಾರ ಈ ಸಂಬಂಧ ಪ್ರಕರಣ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಿದಾಗ ಇಡೀ ವೃತ್ತಾಂತ ಬಯಲಿಗೆ ಬಂದಿದೆ.
COVID-19 ಲ್ಯಾಬ್ ಮಾದರಿಗಳು ಮತ್ತು ರೆಮ್ಡೆಸಿವರ್ ಔಷಧಗಳನ್ನು ಸಾಗಸುತ್ತಿದ್ದ 7 ಸೀಟ್ಗಳ ಪುಟ್ಟ ವಿಮಾನವು ಗ್ವಾಲಿಯಾರ್ ವಿಮಾನ ನಿಲ್ದಾಣದ ರನ್ವೇನಲ್ಲಿ ಇಳಿಯುವಾಗ ಅಚಾತುರ್ಯ ನಡೆದು ಅಪಘಾತಕ್ಕೆ ತುತ್ತಾಗಿತ್ತು. ಇಡೀ ವಿಮಾನ ಗುಜರಿಗೆ ಹಾಕುವ ಮಟ್ಟಕ್ಕೆ ನಜ್ಜುಗುಜ್ಜಾಗಿತ್ತು. Beechcraft King ಎಂಬ ಈ ಪುಟ್ಟ ವಿಮಾನವನ್ನು ಮಧ್ಯ ಪ್ರದೇಶ ಸರ್ಕಾರವು ಅಂದಾಜು 65 ಕೋಟಿ ರೂಪಾಯಿಗೆ 2019ರಲ್ಲಿ ಖರೀದಿಸಿತ್ತು.
ಸರ್ಕಾರವೇನೋ ಸದರಿ ವಿಮಾನ ಅಪಘಾತಕ್ಕೆ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಕಾರಣವೆಂದು ಹೇಳಿ, 85 ಕೋಟಿ ರೂಪಾಯಿ ಆತನಿಂದ ವಸೂಲಿಗೆ ಮುಂದಾಗಿದೆ. ಆದರೆ ಆ ಕ್ಯಾಪ್ಟನ್ ಮಜೀದ್ ಅಖ್ತರ್ ನನಗೆ ವಾಯು ಸಂಚಾರ ನಿಯಂತ್ರಣ ಕೇಂದ್ರದವರು ರನ್ವೇ ನಲ್ಲಿರುವ ಅಡ್ಡಗೋಡೆ ಬಗ್ಗೆ ಮಾಹಿತಿ ನೀಡರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿ, ನಷ್ಟವುಂಟಾಗಿದೆ ಎಂಬುದಕ್ಕೆ ನಾನು ಕಾರಣವಲ್ಲ. ಜೊತೆಗೆ ಆ ವಿಮಾನಕ್ಕೆ ರಾಜ್ಯ ಸರ್ಕಾರ ವಿಮಾ ಪಾಲಿಸಿ ಮಾಡಿಸಿಲ್ಲ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. 27 ವರ್ಷಗಳಿಂದ ಪೈಲಟ್ ಆಗಿ ಕಾರ್ಯನಿರವಹಿಸುತ್ತಿರುವೆ. ಒಂದೂ ಅಪಘಾತ ಮಾಡಿಲ್ಲ. ಹೀಗಿರುವಾಗ (Air Traffic Controller-ATC) ತಪ್ಪಿನಿಂದ ಅಪಘಾತವಾಗಿದೆ. Gwalior ATC ಇದುವರೆಗೂ ಬ್ಲ್ಯಾಕ್ ಬಾಕ್ಸ್ (black box) ಸಂವಹನ ವಿವರವನ್ನು ತನಗೆ ನೀಡಿಲ್ಲ. ತಡೆಗೋಡೆ ಕುರಿತಾದ ಮುನ್ಸೂಚನೆ ಸೇರಿದಂತೆ ಅದರಲ್ಲಿ ಎಲ್ಲಾ ರೆಕಾರ್ಡ್ ಆಗಿರುತ್ತದೆ. ಅದರ ಮೂಲಕ ಎಲ್ಲವೂ ಸಾಬೀತಾಗುತ್ತದೆ. ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ನಾನು ಯಾಕೆ ಸರ್ಕಾರ ಸೂಚಿಸಿರುವಂತೆ 85 ಕೋಟಿ ರೂಪಾಯಿ ಕಟ್ಟಲಿ? ಎಂಬ ವಾದವನ್ನು ಕ್ಯಾಪ್ಟನ್ ಮಜೀದ್ ಅಖ್ತರ್ ಮುಂದಿಟ್ಟಿದ್ದಾರೆ.
ಸಮಾಧಾನಕರ ಸಂಗತಿಯೆಂದರೆ ಪೈಲಟ್ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಸಮಾಧಾನಕರ ಸಂಗತಿಯೆಂದರೆ ಪೈಲಟ್ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಆದರೆ Directorate General of Civil Aviation (DGCA) ಕೇಂದ್ರವು ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಅವರ ವಿಮಾನ ಹಾರಾಟ ಲೈಸೆನ್ಸ್ ಅನ್ನು ಒಂದು ವರ್ಷ ಕಾಲ ರದ್ದುಪಡಿಸಿದೆ.
Captain Majid Akhtar has been handed over a bill of Rs 85 crore by the state government for causing damage to an aircraft last year because he crash-landed at the Gwalior airport.https://t.co/qGpMXJtmTZ
— AATIF (@khanzid1) February 7, 2022
Published On - 9:58 am, Tue, 8 February 22