ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ

|

Updated on: Jun 07, 2024 | 2:37 PM

‘ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ.

ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ
ನರೇಂದ್ರ ಮೋದಿ
Follow us on

ಸಂಸದೀಯ ಸಭೆಯಲ್ಲಿ ಎನ್​ಡಿಎ ಸಂಸದರು ಇಂದು 18ನೇ ಲೋಕಸಭಾ ನಾಯಕನನ್ನಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಆಯ್ಕೆ ಮಾಡಿದ್ದಾರೆ. ಬಳಿಕ ಮಾತನಾಡಿದ ಮೋದಿ, ‘‘ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ.

2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೆ ಅದು ನಂಬಿಕೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ. ಈ ಕ್ಷಣವೂ ಭಾವನಾತ್ಮಕವಾಗಿದೆ ಎಂದರು.

ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತು ಸಮ್ಮಿಶ್ರ ರಾಜಕೀಯದ ಇತಿಹಾಸದಲ್ಲಿ, ಚುನಾವಣಾ ಪೂರ್ವ ಮೈತ್ರಿ ಎಂದಿಗೂ ಎನ್‌ಡಿಎ ಬಲ ನೀಡಿರಲಿಲ್ಲ. ಇದು ಮೈತ್ರಿಕೂಟದ ಗೆಲುವು. ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಅವರ ಹೆಸರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಬಿಜೆಪಿಯ ನಾಯಕರಾಗಿ ಪ್ರಸ್ತಾಪಿಸಿದರು.

ಮತ್ತಷ್ಟು ಓದಿ: ಎನ್​ಡಿಎ ಸಂಸದೀಯ ಸಭೆ ಆರಂಭಕ್ಕೂ ಮುನ್ನ ಸಂವಿಧಾನಕ್ಕೆ ನಮಸ್ಕರಿಸಿದ ಮೋದಿ

ಇದಾದ ನಂತರ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಎನ್‌ಡಿಎ ಪಾಲುದಾರ ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್, ಶಿವಸೇನೆಯ ಏಕನಾಥ್ ಶಿಂಧೆ ಸೇರಿದಂತೆ ಇತರ ನಾಯಕರು ಪ್ರಸ್ತಾಪವನ್ನು ಬೆಂಬಲಿಸಿದರು.

ವೈವಿಧ್ಯತೆಯ ನಡುವೆ ಮೂರು ದಶಕಗಳ ಈ ಪಯಣ ದೊಡ್ಡ ಶಕ್ತಿಯ ಸಂದೇಶವನ್ನು ನೀಡುತ್ತದೆ. ಇಂದು ನಾನು ಹೆಮ್ಮೆಯಿಂದ ಹೇಳುತ್ತೇನೆ, ಒಂದು ಕಾಲದಲ್ಲಿ ಸಂಘಟನೆಯ ಕಾರ್ಯಕರ್ತನಾಗಿ, ನಾನು ಈ ಒಕ್ಕೂಟದ ಭಾಗವಾಗಿದ್ದೆ ಮತ್ತು ಇಂದು ಸದನದಲ್ಲಿ ಕುಳಿತು ನಿಮ್ಮೊಂದಿಗೆ ಕೆಲಸ ಮಾಡಿದ್ದೇನೆ, ನಾನು ಅದರೊಂದಿಗೆ ಮೂವತ್ತು ವರ್ಷಗಳಿಂದ ಒಡನಾಟ ಹೊಂದಿದ್ದೇನೆ. ಇದು ಅತ್ಯಂತ ಯಶಸ್ವಿ ಮೈತ್ರಿ ಎಂದು ನಾನು ಹೇಳಬಲ್ಲೆ ಎಂದು ಮೋದಿ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ