ನಾಂದೇಡ್ ಅಕ್ಟೋಬರ್ 05: ಮಹಾರಾಷ್ಟ್ರದ (Maharashtra) ನಾಂದೇಡ್‌ನಲ್ಲಿರುವ (Nanded )ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 72 ಗಂಟೆಗಳಲ್ಲಿ 31 ಸಾವುಗಳು ಸಂಭವಿಸಿದ ನಂತರ ಡೀನ್ ವಿರುದ್ಧ ಕೊಲೆಗೆ ಸಮಾನವಲ್ಲದ ಕ್ರಿಮಿನಲ್ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ. ಡೀನ್ ಜತೆಗೆ ಮತ್ತೊಬ್ಬ ವೈದ್ಯನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವಿನ ಸಂಬಂಧಿಕರ ದೂರಿನ ಮೇರೆಗೆ ಹಂಗಾಮಿ ಡೀನ್ ಡಾ.ಎಸ್.ಆರ್.ವಕೋಡೆ (Dr SR Wakode)ಮತ್ತು ಮತ್ತೊಬ್ಬ ವೈದ್ಯರ ವಿರುದ್ಧ ನಾಂದೇಡ್ ಗ್ರಾಮಾಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಡೀನ್ ಮತ್ತು ಮಕ್ಕಳ ತಜ್ಞರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಕುಟುಂಬದವರು ಆಸ್ಪತ್ರೆಯ ಹೊರಗಿನಿಂದ ಔಷಧಿಗಳನ್ನು ಖರೀದಿಸಿ ಕಾಯುತ್ತಿದ್ದರು, ಆದರೆ ನವಜಾತ ಶಿಶುವಿಗೆ ವೈದ್ಯರಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಸಹಾಯಕ್ಕಾಗಿ ಡೀನ್ ಕಚೇರಿಗೆ ಹೋದಾಗ ಅವರನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಂಗಳವಾರ ಆಸ್ಪತ್ರೆಯಲ್ಲಿ ಕೊಳಕು ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಆಡಳಿತಾರೂಢ ಶಿವಸೇನೆಯ ಸಂಸದರ ವಿರುದ್ಧ ಡೀನ್ ಪೊಲೀಸರಿಗೆ ದೂರು ನೀಡಿದ ಒಂದು ದಿನದ ನಂತರ ಇದು ಬಂದಿದೆ.
72 ಗಂಟೆಗಳಲ್ಲಿ 31 ಸಾವುಗಳಳೊಂದಿಗೆ ಸರ್ಕಾರಿ ಆಸ್ಪತ್ರೆ ಸುದ್ದಿಯಾದ ನಂತರ ನಾಂದೇಡ್‌ನ ಲೋಕಸಭಾ ಸಂಸದರಾದ ಹೇಮಂತ್ ಪಾಟೀಲ್ ಅವರು ಮಂಗಳವಾರ ಡಾ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಸಾವಿಗೀಡಾದವರಲ್ಲಿ 16 ಮಕ್ಕಳು ಸೇರಿದ್ದಾರೆ.
ಸಂಸದರು ತಮ್ಮ ಭೇಟಿಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿನ ಶೌಚಾಲಯಗಳ ದುಸ್ಥಿತಿ ನೋಡಿ ನನಗೆ ನೋವಾಗಿದೆ. ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತದೆ, ಆದರೆ ಇಲ್ಲಿನ ಪರಿಸ್ಥಿತಿ ನೋಡಿ ನನಗೆ ನೋವಾಗಿದೆ. ತಿಂಗಳಿನಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿಲ್ಲ, ಆಸ್ಪತ್ರೆಯ ವಾರ್ಡ್‌ಗಳಲ್ಲಿನ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ, ಶೌಚಾಲಯದಲ್ಲಿ ನೀರು ಲಭ್ಯವಿಲ್ಲ ಎಂದು ಹೇಳಿದ್ದಾರೆ.
ವಾಕೋಡೆ ಅವರ ದೂರಿನ ನಂತರ, ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ಮಾಡದಂತೆ ತಡೆಯಲು ಕ್ರಿಮಿನಲ್ ಬಲಕ್ಕೆ ಸಂಬಂಧಿಸಿದ ಐಪಿಸಿ ನಿಬಂಧನೆಗಳು, ಮಾನನಷ್ಟ ಮತ್ತು ಕ್ರಿಮಿನಲ್ ಬೆದರಿಕೆಯನ್ನು ಪಾಟೀಲ್ ವಿರುದ್ಧ ಹೊರಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಂಸದರ ವಿರುದ್ಧವೂ ಆರೋಪ ಹೊರಿಸಲಾಗಿತ್ತು.
ಸಂಸದರ ಕಾರ್ಯವೈಖರಿಯು ಬಿಪಿ ಹೆಚ್ಚಿಸಿದೆ ಎಂದು ಆಸ್ಪತ್ರೆಯ ಡೀನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸಂಸದರ ಸೂಚನೆ ಮೇರೆಗೆ ಆಸ್ಪತ್ರೆಯ ಡೀನ್ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಕೆಲವು ಬಳಕೆದಾರರು ಡೀನ್ ವಿರುದ್ಧದ ಕ್ರಮಕ್ಕಾಗಿ ಸಂಸದರನ್ನು ಬೆಂಬಲಿಸಿದರು, ಆದರೆ ಇತರರು ಸ್ಥಳೀಯ ಆಡಳಿತವು ಸರ್ಕಾರಿ ಆಸ್ಪತ್ರೆಯ ದುರದೃಷ್ಟಕರ ಸ್ಥಿತಿಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಇಂಥಾ ತಂತ್ರಗಳನ್ನು ಬಳಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಪ್ರತ್ಯೇಕ ಅಪಘಾತ; ಒಂದು ಮಗು ಸೇರಿ ನಾಲ್ವರು ದುರ್ಮರಣ
ಆಸ್ಪತ್ರೆ ಆವರಣದಲ್ಲಿ ಹಂದಿಗಳು ಓಡಾಡುತ್ತಿರುವ ದೃಶ್ಯಗಳು ಆರೋಗ್ಯ ಕೇಂದ್ರದ ನೈರ್ಮಲ್ಯದ ಮಟ್ಟದಲ್ಲಿ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏಕನಾಥ್ ಶಿಂಧೆ ಸರ್ಕಾರವು ಆಸ್ಪತ್ರೆಯಲ್ಲಿ ಯಾವುದೇ ಔಷಧಿ ಮತ್ತು ವೈದ್ಯರ ಕೊರತೆಯನ್ನು ನಿರಾಕರಿಸಿದೆ. ಆದರೆ ಹಿರಿಯ ವೈದ್ಯರು ಲಭ್ಯರಿಲ್ಲ, ಕಿರಿಯ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆಆಸ್ಪತ್ರೆಯಲ್ಲಿ ಔಷಧಿಗಳು ಲಭ್ಯವಿಲ್ಲ. ರೋಗಿಗಳ ಸಂಬಂಧಿಕರಿಗೆ ಅವುಗಳನ್ನು ಹೊರಗಿನಿಂದ ತರುವಂತೆ ಹೇಳಲಾಗುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ