AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಮ್ಮೆಯ ಕರು ಮೇಲೆ ಕಾಮುಕನಿಂದ ಅತ್ಯಾಚಾರ; ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮಾಲೀಕರು

Shocking News: ಕೆಲವು ದಿನಗಳ ಹಿಂದೆ ಮಾಲೀಕರು ಬೆಳಗ್ಗೆ ಕೊಟ್ಟಿಗೆಗೆ ಹೋದಾಗ ಆ ಎಮ್ಮೆ ಕರುವಿನ ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಇದನ್ನು ನೋಡಿದ ಕರುವಿನ ಮಾಲೀಕರು ಕೂಡಲೇ ಕರುವನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದಾಗ ಅತ್ಯಾಚಾರದ ವಿಷಯ ಬೆಳಕಿಗೆ ಬಂದಿದೆ.

ಎಮ್ಮೆಯ ಕರು ಮೇಲೆ ಕಾಮುಕನಿಂದ ಅತ್ಯಾಚಾರ; ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮಾಲೀಕರು
ಎಮ್ಮೆ ಕರು ಮೇಲೆ ಕಾಮುಕನಿಂದ ಅತ್ಯಾಚಾರImage Credit source: free press journal
Follow us
ಸುಷ್ಮಾ ಚಕ್ರೆ
|

Updated on:Oct 05, 2023 | 6:14 PM

ಪುಣೆ: ಕೊಟ್ಟಿಗೆಯಲ್ಲಿದ್ದ ಎಮ್ಮೆಯ ಕರುವಿನ ಮೇಲೆ 24 ವರ್ಷದ ಯುವಕನೊಬ್ಬ ಪದೇಪದೆ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಎಮ್ಮೆಯ ಪಕ್ಕದಲ್ಲಿ ಅದರ ಸಣ್ಣ ಕರುವನ್ನು ಕಟ್ಟಿಹಾಕಲಾಗಿತ್ತು. ಆ ಯುವಕ ಕೊಟ್ಟಿಗೆಗೆ ಬಂದು ಲೈಟ್ ಆಫ್ ಮಾಡಿ, ಆ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅರೆಬರೆ ಬೆಳಕಿನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪುಣೆಯ ಚಿಖಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಕೆಲವು ದಿನಗಳಿಂದ ಎಮ್ಮೆ ಕರುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ರಕ್ತಸ್ರಾವವೂ ಆಗಿತ್ತು. ತಮ್ಮ ಮನೆಯ ಎಮ್ಮೆ ಕರುವಿನ ಮೇಲೆ ಯಾರೋ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕೇಸ್ ದಾಖಲಿಸಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶ: ಹೇಯ ಕೃತ್ಯದ ನಡುವೆ ಮಾನವೀಯ ಕೆಲಸ ಮಾಡಿದ ಪೊಲೀಸರು, ಅತ್ಯಾಚಾರವಾದ ಬಾಲಕಿಯ ಜೀವನಕ್ಕೆ ಇವರೇ ಆಸರೆ

ಪುಣೆಯ ಚಿಕಾಲಿಯ ಜಾಧವವಾಡಿ ಪ್ರದೇಶದಲ್ಲಿ ಆಗಸ್ಟ್ 18 ಮತ್ತು ಅಕ್ಟೋಬರ್ 2ರ ನಡುವೆ ಈ ಲೈಂಗಿಕ ದೌರ್ಜನ್ಯದ ಘಟನೆಗಳು ಸಂಭವಿಸಿವೆ. ಕೆಲವು ದಿನಗಳ ಹಿಂದೆ ಮಾಲೀಕರು ಬೆಳಗ್ಗೆ ಕೊಟ್ಟಿಗೆಗೆ ಹೋದಾಗ ಆ ಎಮ್ಮೆ ಕರುವಿನ ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಇದನ್ನು ನೋಡಿದ ಕರುವಿನ ಮಾಲೀಕರು ಕೂಡಲೇ ಕರುವನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಬಳಿಕ, ಮುಂಜಾಗ್ರತಾ ಕ್ರಮವಾಗಿ ಆ ಮಾಲೀಕರು ತಮ್ಮ ಕೊಟ್ಟಿಗೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆ ಕೊಟ್ಟಿಗೆಯ ಬಾಗಿಲನ್ನು ಕೂಡ ಲಾಕ್ ಮಾಡಿದ್ದರು. ಆದರೂ ರಾತ್ರಿ ವೇಳೆಗೆ ಆ ಕೊಟ್ಟಿಗೆಯ ಲೈಟ್ ಅನ್ನು ಯಾರೋ ಆಫ್ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅವರು ಕೊಟ್ಟಿಗೆಗೆ ಹೋಗಿ ನೋಡಿದ್ದಾರೆ. ಆಗ ಕರು ನರಳುತ್ತಿತ್ತು. ಆ ಕೊಟ್ಟಿಗೆಯಲ್ಲಿ ಸಿಸಿಟಿವಿ ಹಾಕಿದ್ದಾರೆಂದು ಗೊತ್ತಾಗಿದ್ದರಿಂದ ಆತ ಲೈಟ್ ಆಫ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ, ಸಿಸಿಟಿವಿಯನ್ನು ಕೂಡ ಹಾನಿಗೊಳಿಸಿದ್ದಾನೆ.

ಇದನ್ನೂ ಓದಿ: ಅತ್ಯಾಚಾರ, ಕೊಲೆ ಪ್ರಕರಣ: 40 ವರ್ಷಗಳ ವಿಚಾರಣೆಯ ನಂತರ 75 ವರ್ಷದ ವ್ಯಕ್ತಿಗೆ ಸುಪ್ರೀಂಕೋರ್ಟ್ ಜಾಮೀನು

ಆದರೆ, ಅಷ್ಟರಲ್ಲಾಗಲೇ ಸಿಸಿಟಿವಿ ವಿಡಿಯೋವನ್ನು ಆ ಕರುವಿನ ಮಾಲೀಕರು ಪೊಲೀಸರಿಗೆ ನೀಡಿದ್ದರು. ಪುಣೆ ಜಿಲ್ಲೆಯ ಚಿಖಾಲಿ ಪ್ರದೇಶದಲ್ಲಿ ನೆಲೆಸಿರುವ ರಾಮಕಿಶನ್ ಚೌಹಾಣ್ ಎಂಬ 24 ವರ್ಷದ ಯುವಕ ಈ ಕೃತ್ಯ ಎಸಗಿದ್ದಾನೆ. ಸ್ಥಳೀಯರು ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Thu, 5 October 23