AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಪ್ರಕರಣ: ನನ್ನ ಮಗನಿಗೆ ಮರಣದಂಡನೆ ನೀಡಿ, ಇಲ್ಲದಿದ್ದರೆ ನಾನೇ ಅವನನ್ನು ಕೊಲ್ಲುವೆ ಎಂದ ತಂದೆ

ಉಜ್ಜಯಿನಿ ನಡೆದ ಬಾಲಕಿ ಅತ್ಯಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​​ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈ ಕಾರ್ಯಚರಣೆ ಹೇಗಿತ್ತು ಎಂಬ ಬಗೆಯು ಹಂಚಿಕೊಂಡಿದ್ದಾರೆ, ಇನ್ನು ಆಟೋ ಚಾಲಕ ಭರತ್ ಸೋನಿ ತಂದೆ ರಾಜು ಸೋನಿ ಅವರು ಈ ಘಟನೆ ಬಗ್ಗೆ ತುಂಬಾ ನೋವು ವ್ಯಕ್ತಪಡಿಸಿದ್ದು, ಆತನಿಗೆ ಗಲ್ಲುಶಿಕ್ಷೆ ನೀಡುವಂತೆ ಹೇಳಿದ್ದಾರೆ. ಒಂದು ವೇಳೆ ಆತನಿಗೆ ಮರಣದಂಡನೆ ನೀಡದಿದ್ದರೆ, ನಾನೇ ಅವನನ್ನು ಕೊಲ್ಲುವೆ ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣ: ನನ್ನ ಮಗನಿಗೆ ಮರಣದಂಡನೆ ನೀಡಿ, ಇಲ್ಲದಿದ್ದರೆ ನಾನೇ ಅವನನ್ನು ಕೊಲ್ಲುವೆ ಎಂದ ತಂದೆ
ವೈರಲ್​​ ಫೋಟೋ
ಅಕ್ಷಯ್​ ಪಲ್ಲಮಜಲು​​
|

Updated on: Sep 30, 2023 | 12:08 PM

Share

ಉಜ್ಜಯಿನಿ,ಸೆ.30: ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ನಡೆದ ಮನಕಲಕುವ ಘಟನೆ ಇಡೀ ದೇಶವನ್ನೇ ಅಘಾತಗೊಳಿಸಿತ್ತು. ಅತ್ಯಚಾರವಾದ ಸ್ಥಿತಿಯಲ್ಲಿ ರಸ್ತೆ ರಸ್ತೆಯಲ್ಲಿ ಅಲೆದಾಡಿ, ಸಹಾಯಕ್ಕಾಗಿ ಅಂಗಲಾಚಿದರು, ಯಾರು ಕೂಡ ಸಹಾಯ ಮಾಡದೆ, ಮಾನವಕುಲಕ್ಕೆ ಅವಮಾನ ಎಂಬಂತೆ ಎಲ್ಲರೂ ನೋಡಿದ್ರೆ ಹೊರತು, ಆ ಬಾಲಕಿಯ ಸಾಹಯಕ್ಕೆ ಯಾರು ಧಾವಿಸಲಿಲ್ಲ. ತಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬ ಅರಿವಿಲ್ಲ ಆ ಬಾಲಕಿಯ ಸಹಾಯಕ್ಕೆ ಬಂದದ್ದು ಚರ್ಚಿನ ಒಬ್ಬ ಫಾದರ್​​. ಈ ಫಾದರ್​​​ ಪೊಲೀಸರಿಗೆ ಮಾಹಿತಿ ನೀಡಿ, ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಆ ಬಾಲಕಿಯ ಜವಾಬ್ದಾರಿಯನ್ನು ಆ ಪೊಲೀಸರೇ ವಹಿಸಿಕೊಂಡಿದ್ದಾರೆ. ಜತೆಗೆ ಈ ಹೇಯ ಕೃತ್ಯ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣವನ್ನು ಭೇದಿಸಬೇಕಾದರೆ ಪೊಲೀಸರು ತುಂಬಾ ಶ್ರಮಪಟ್ಟಿದ್ದಾರೆ. ಹೌದು ಈ ಬಗ್ಗೆ ಪೊಲೀಸ್​​ ಅಧಿಕಾರಿಗಳು ಮಾಧ್ಯಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ಜಯಿಸಿ ಪೊಲೀಸರು ನೂರಾರು ಕಡೆ ವಿಚಾರಣೆಯನ್ನು ನಡೆಸಿದ್ದಾರೆ. ಅಲ್ಲಿದ್ದ ಜನರನ್ನು ತನಿಖೆ ಕೂಡ ಮಾಡಿದ್ದಾರೆ. ಘಟನೆ ನಡೆದ ಸ್ಥಳ ಮತ್ತು ಬಾಲಕಿ ಓಡಾಡಿದ ಪ್ರದೇಶಗಳ 700ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗಿದೆ. ತನಿಖಾ ವರದಿ ಪ್ರಕಾರ ಬಾಲಕಿಯನ್ನು ಈ ಆಟೋ ಚಾಲಕ ಉಜ್ಜಯಿನಿನ ರೈಲು ನಿಲ್ದಾಣದಿಂದ ಕರೆದೊಯ್ದು ಅತ್ಯಾಚಾರವೆಸಗಿ, ಅರೆಬೆತ್ತಲೆ ಮಾಡಿ, ರಕ್ತ ಸ್ರಾವವಾಗಿಸಿ ಬಿಟ್ಟದ್ದಾನೆ ಎಂದು ಹೇಳಲಾಗಿದೆ.

ಈ ಘಟನೆ ನಡೆದ ದಿನದಿಂದ ಪೊಲೀಸ್​​​ ಇಲಾಖೆಯ 30-35 ಅಧಿಕಾರಿಗಳು ಸೈಬರ್ ತನಿಖೆಯಲ್ಲಿ ತೊಡಗಿಕೊಂಡಿದ್ದು, ಈ ಆರೋಪಿಗಳನ್ನು ಪತ್ತೆ ಮಾಡುವವರೆಗೆ ನಿದ್ದೆ ಮಾಡಿಲ್ಲ ಎಂದು ಹೇಳಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿದಾಗ ಆತ ಅಲ್ಲಿಂದ ಓಡಿ ಹೋಗಲು ಮುಂದಾಗಿದ್ದಾನೆ. ಅದರೂ ಪೊಲೀಸರು ಆತನನ್ನು ಬೆನ್ನಟ್ಟಿ ಸೆರೆಹಿಡಿದ್ದಾರೆ. ಆರೋಪಿಯನ್ನು ಭರತ್ ಸೋನಿ ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಿಂದ ಆಟೋ ಚಾಲಕ ಭರತ್ ಸೋನಿ ತಂದೆ ರಾಜು ಸೋನಿ ತುಂಬಾ ನೋವು ವ್ಯಕ್ತಪಡಿಸಿದ್ದು, ಆತನಿಗೆ ಗಲ್ಲುಶಿಕ್ಷೆ ನೀಡುವಂತೆ ಹೇಳಿದ್ದಾರೆ. ಒಂದು ವೇಳೆ ಆತನಿಗೆ ಮರಣದಂಡನೆ ನೀಡದಿದ್ದರೆ, ನಾನೇ ಅವನನ್ನು ಕೊಲ್ಲುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಹೇಯ ಕೃತ್ಯದ ನಡುವೆ ಮಾನವೀಯ ಕೆಲಸ ಮಾಡಿದ ಪೊಲೀಸರು, ಅತ್ಯಾಚಾರವಾದ ಬಾಲಕಿಯ ಜೀವನಕ್ಕೆ ಇವರೇ ಆಸರೆ

ಈ ಹೇಯ ಕೃತ್ಯಕ್ಕೆ ಸಹಾಯ ಮಾಡಿದ ಮತ್ತೊಬ್ಬ ಆಟೋಚಾಲಕ ರಾಕೇಶ್ ಮಾಳವಿಯಾ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಘಟನೆಯ ದಿನದಂದು ಅನೇಕರ ಮನೆ ಬಾಗಿಲ ಮುಂದೆ ಹೋಗಿ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಾಗ ಯಾರೂ ಸಹಾಯ ಮಾಡಿಲ್ಲ, ಅವರ ಮೇಲೆಯು ದೂರು ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ