Tamil Nadu: ಜಾತಿ ಯಾವುದೇ ಆಗಿದ್ದರೂ ದೇವಸ್ಥಾನದ ಅರ್ಚಕರಾಗಬಹುದು: ಮದ್ರಾಸ್ ಹೈಕೋಟ್

ಮದ್ರಾಸ್ ಹೈಕೋರ್ಟ್‌ನ ಏಕ ಪೀಠದ ಆದೇಶವನ್ನು ಪ್ರಶ್ನಿಸಿ ಸೇಲಂ ಜಿಲ್ಲೆಯ ಮುತ್ತು ಸುಬ್ರಮಣ್ಯ ಗುರುಕ್ಕಲ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಎಸ್‌ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿಡಿ ಆದಿಕೇಶವಲು ಈ ತೀರ್ಪು ನೀಡಿದ್ದಾರೆ.

Tamil Nadu: ಜಾತಿ ಯಾವುದೇ ಆಗಿದ್ದರೂ ದೇವಸ್ಥಾನದ ಅರ್ಚಕರಾಗಬಹುದು: ಮದ್ರಾಸ್ ಹೈಕೋಟ್
ಮದ್ರಾಸ್ ಹೈಕೋರ್ಟ್
ರಶ್ಮಿ ಕಲ್ಲಕಟ್ಟ

Updated on: Jul 28, 2023 | 4:22 PM

ಚೆನ್ನೈ ಜುಲೈ 28: ತಮಿಳುನಾಡಿನ (Tamil nadu) ಹಿಂದೂ ದೇವಾಲಯಗಳಲ್ಲಿ ಅರ್ಚಕರನ್ನು (ಪುರೋಹಿತರು) ನೇಮಕ ಮಾಡುವಲ್ಲಿ ಜಾತಿ ಆಧಾರಿತ ಕುಟುಂಬದ ಪಾತ್ರವಿಲ್ಲ. ನಿರ್ದಿಷ್ಟ ದೇವಾಲಯದ ಆಗಮ ತತ್ವಗಳನ್ನು ಚೆನ್ನಾಗಿ ತಿಳಿದಿದ್ದರೆ ಸಾಕು ಎಂದು ಮದ್ರಾಸ್ ಹೈಕೋರ್ಟ್ (Madras High Court) ಹೇಳಿದೆ. ದೇವಸ್ಥಾನದ ಅರ್ಚಕರ ನೇಮಕ ಜಾತ್ಯತೀತ ಕಾರ್ಯವೇ ಹೊರತು ವಂಶಪಾರಂಪರ್ಯವಲ್ಲ ಎಂಬ ಮದ್ರಾಸ್ ಹೈಕೋರ್ಟ್‌ನ ಏಕ ಪೀಠದ ಆದೇಶವನ್ನು ಪ್ರಶ್ನಿಸಿ ಸೇಲಂ ಜಿಲ್ಲೆಯ ಮುತ್ತು ಸುಬ್ರಮಣ್ಯ ಗುರುಕ್ಕಲ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಎಸ್‌ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿಡಿ ಆದಿಕೇಶವಲು ಈ ತೀರ್ಪು ನೀಡಿದ್ದಾರೆ.

ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೇಲಂನ ಸುಗವನೇಶ್ವರರ್ ದೇವಸ್ಥಾನಕ್ಕೆ ಅರ್ಚಕರು/ಸ್ಥಾನಿಕಂಗಳ ನೇಮಕಾತಿಗಾಗಿ HR & CE ಯ 2018 ರ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ಮಾಡುವಾಗ “ಯಾವುದೇ ವ್ಯಕ್ತಿಯನ್ನು ಅವರು ಸಂಬಂಧಪಟ್ಟ ದೇವಾಲಯಕ್ಕೆ ಅನ್ವಯವಾಗುವ ಆಗಮ ಶಾಸ್ತ್ರದ ಪ್ರಕಾರ ಪೂಜೆಗಳು ಮತ್ತು ಇತರ ಆಚರಣೆಗಳನ್ನು ನಿರ್ವಹಿಸಲು ನಿಪುಣರಾದವರು, ಸರಿಯಾದ ತರಬೇತಿ ಮತ್ತು ಸಂಪೂರ್ಣ ಅರ್ಹತೆ ಹೊಂದಿದ್ದರೆ ಅಂಥಾ ವ್ಯಕ್ತಿಗಳನ್ನು ನೇಮಕ ಮಾಡಬಹುದು ಎಂದು ಹೇಳಿತ್ತು.

ಇದನ್ನೂ ಓದಿ: ದೇವಾಲಯದ ಮಾಲೀಕತ್ವದ ವಿವಾದ; ಅಯೋಧ್ಯೆಯಲ್ಲಿ ಸಾಧು ಮೇಲೆ ಹಲ್ಲೆ ನಡೆಸಿದ ಜನರ ಗುಂಪು, ಕೃತ್ಯ ವಿಡಿಯೊದಲ್ಲಿ ಸೆರೆ

ಮದ್ರಾಸ್ ಹೈಕೋರ್ಟ್ ಸಿಜೆ ಪೀಠವು ರಿಟ್ ಮೇಲ್ಮನವಿಯ ವಿಚಾರಣೆಯನ್ನು ಸೆಪ್ಟೆಂಬರ್ 22 ಕ್ಕೆ ಮುಂದೂಡಿತು. ಅದೇ ವೇಳೆ ರಾಜ್ಯದ ಹಿಂದೂ ದೇವಾಲಯಗಳ ನಿರ್ವಹಣೆಯನ್ನು ನಿಯಂತ್ರಿಸುವ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಯ ಆಯುಕ್ತರಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us