ದೇವಾಲಯದ ಮಾಲೀಕತ್ವದ ವಿವಾದ; ಅಯೋಧ್ಯೆಯಲ್ಲಿ ಸಾಧು ಮೇಲೆ ಹಲ್ಲೆ ನಡೆಸಿದ ಜನರ ಗುಂಪು, ಕೃತ್ಯ ವಿಡಿಯೊದಲ್ಲಿ ಸೆರೆ

ಪೊಲೀಸರ ಪ್ರಕಾರ, ನಗರದ ಗುಪ್ತರ್ ಘಾಟ್ ಬಳಿ 20 ಕ್ಕೂ ಹೆಚ್ಚು ಜನರ ಗುಂಪು ಮಹಂತ್ ಚತುರ್ಭುಜ್ ದಾಸ್ ಅಲಿಯಾಸ್ ಚಂದಾ ಮೇಲೆ ಹಲ್ಲೆ ನಡೆಸಿದೆ. ಹಳೆ ಆಸ್ತಿ ವಿವಾದವೇ ದಾಳಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Follow us
ರಶ್ಮಿ ಕಲ್ಲಕಟ್ಟ
|

Updated on: Jul 28, 2023 | 2:31 PM

ಲಕ್ನೋ ಜುಲೈ 28: ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣವನ್ನು ಘೋಷಿಸಿದ ನಂತರ ಅಯೋಧ್ಯೆಯಲ್ಲಿನ (Ayodhya) ಆಸ್ತಿ ದರದಲ್ಲಿ ಭಾರಿ ಏರಿಕೆ ಕಂಡಿದೆ. ಆಸ್ತಿ ದರಗಳಲ್ಲಿನ ಹಠಾತ್ ಏರಿಕೆ ಸ್ಥಳೀಯರಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ, ಆಸ್ತಿ ಸಂಬಂಧಿತ ವಿವಾದಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಆಸ್ತಿಗೆ ಸಂಬಂಧಿಸಿದ  ಪ್ರಕರಣವೊಂದರಲ್ಲಿ ಇಲ್ಲಿನ ದೇವಸ್ಥಾನವೊಂದರ ಮಾಲೀಕತ್ವದ (Temple ownership dispute) ವಿಚಾರವಾಗಿ ಜನರ ಗುಂಪೊಂದು ಸಾಧುವಿನ ಮೇಲೆ ಗಂಭೀರ ಹಲ್ಲೆ ನಡೆಸಿದೆ.

ಪೊಲೀಸರ ಪ್ರಕಾರ, ನಗರದ ಗುಪ್ತರ್ ಘಾಟ್ ಬಳಿ 20 ಕ್ಕೂ ಹೆಚ್ಚು ಜನರ ಗುಂಪು ಮಹಂತ್ ಚತುರ್ಭುಜ್ ದಾಸ್ ಅಲಿಯಾಸ್ ಚಂದಾ ಮೇಲೆ ಹಲ್ಲೆ ನಡೆಸಿದೆ. ಹಳೆ ಆಸ್ತಿ ವಿವಾದವೇ ದಾಳಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಜುಲೈ 24 ರಂದು ರಾತ್ರಿ 9.45 ರ ಸುಮಾರಿಗೆ ಆರತಿಯಲ್ಲಿ ಭಾಗವಹಿಸಿ ಗುಪ್ತರ್ ಘಾಟ್‌ನಿಂದ ಹಿಂದಿರುಗುತ್ತಿದ್ದಾಗ ವಿಮಲ್ ದಾಸ್, ಮಿಥಿಲೇಶ್ ಮತ್ತು ರಾಕೇಶ್ ನಿಶಾದ್ ಸೇರಿದಂತೆ 20 ಕ್ಕೂ ಹೆಚ್ಚು ಜನರ ತಂಡವು ತನ್ನ ಮೇಲೆ ದಾಳಿ ಮಾಡಿದೆ ಎಂದು ಮಹಂತ್ ಚತುರ್ಭುಜ್ ದಾಸ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

52 ಸೆಕೆಂಡುಗಳ ವಿಡಿಯೊದಲ್ಲಿ, ಚತುರ್ಭುಜ್ ದಾಸ್ ಅವರ ಮೇಲೆ ಜನರ ಗುಂಪು ಹಲ್ಲೆ ಮಾಡಿರುವುದನ್ನು ಕಾಣಬಹುದು. ನಂತರ ಅವರನ್ನು ದೇವಾಲಯದ ಆವರಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಮತ್ತೆ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶ ಸಿಎಂ ಎಂದ ಊರ್ವಶಿ ರೌಟೇಲಾ; ಸೋಶಿಯಲ್ ಮೀಡಿಯಾದಲ್ಲಿ ಟೀಕೆ

ಚತುರ್ಭುಜ್ ದಾಸ್ ಅವರ ತಲೆ ಮತ್ತು ಮುಖದ ಮೇಲೆ ಗಾಯಗಳಾಗಿವೆ, ಅವರ ಎಡಗೈ ಮುರಿದಿದೆ. ದಾಳಿಕೋರರು ಕೊಂದು ಸರಯೂ ನದಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ದಾಸ್ ಮತ್ತು ಆರೋಪಿಗಳ ನಡುವೆ ಕಳೆದ ಕೆಲವು ವರ್ಷಗಳಿಂದ ದೇವಾಲಯದ ಮಾಲೀಕತ್ವದ ವಿವಾದವಿದೆ.ಘಟನೆಯ ವಿಡಿಯೋವನ್ನು ಸ್ಥಳೀಯರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯು ಹಲವಾರು ಪುರಾತನ ದೇವಾಲಯಗಳು ಮತ್ತು ಆಶ್ರಮಗಳಿಗೆ ನೆಲೆಯಾಗಿದೆ. ಧಾರ್ಮಿಕ ಪ್ರವಾಸಿಗರಿಗೆ ನಗರವು ಪ್ರಮುಖ ಆಕರ್ಷಣೆಯಾಗಿದೆ. ಬೃಹತ್ ರಾಮಮಂದಿರವನ್ನು ನಿರ್ಮಿಸುವ ಸರ್ಕಾರದ ಘೋಷಣೆಯ ನಂತರ ನಗರವು ಬೃಹತ್ ಅಭಿವೃದ್ಧಿ ಮತ್ತು ಆಸ್ತಿ ದರದಲ್ಲಿ ಏರಿಕೆ ಕಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ