Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?
ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು
Follow us
ಸಾಧು ಶ್ರೀನಾಥ್​
|

Updated on: Jul 28, 2023 | 2:53 PM

ತೆಲಂಗಾಣ, ಜುಲೈ 28: ಮೊಬೈಲ್ ಎಂಬ ಮಾಯಾ ಲೋಕ ಕೈಗೆ ಬಂದಿದ್ದೇ ತಡ ಬರುತಾ ಬರುತಾ ಇಡೀ ಜಗತ್ತನ್ನು ಒಂದು ಸ್ಥಳೀಯ ಹಳ್ಳಿಯನ್ನಾಗಿ ಮಾರ್ಪಟ್ಟಿಸಿಬಿಟ್ಟಿದೆ. ಟಿವಿ, ಚಲನಚಿತ್ರ, OTT, ಸುದ್ದಿ, ನಿಯತಕಾಲಿಕೆಗಳು, ಆಟಗಳು ಆನ್‌ಲೈನ್ ಶಾಪಿಂಗ್ ಈ ಮಾಯಾಲೋಕದಲ್ಲಿ ರಾರಾಜಿಸುತ್ತಿದೆ. ಇದರಿಂದ ಪುಸ್ತಕ ಓದು ಸಂಪೂರ್ಣ ಕುಸಿದಿದೆ. ಮೊಬೈಲ್ ನಲ್ಲಿ ಎಲ್ಲವನ್ನೂ ಪಡೆಯುವ ಅವಕಾಶವನ್ನು ಸಾಧಿಸುವುದು ಒಂದೆಡೆ ಮನುಷ್ಯ ಸಾಧಿಸಿರುವ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.. ಇನ್ನೊಂದೆಡೆ ದೃಷ್ಟಿ, ಜ್ಞಾಪಕಶಕ್ತಿ, ವಿಕಿರಣಗಳಿಂದ ಉಂಟಾಗುವ ದೈಹಿಕ ಸಮಸ್ಯೆಗಳು, ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಬೆಚ್ಚಿಬೀಳುವಂತಾಗಿದೆ. ಇದೂ ಕೂಡ ಮೊಬೈಲ್‌ ಎಂಬ ಪುಟ್ಟ ಮಾಯಾಲೋಕದ ಕೊಡುಗೆಯಾಗಿದೆ. ಆದರೆ ಪುಸ್ತಕದ ಓದುವ ಈಗ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಗಿದೆ. ಇದರ ಬಗ್ಗೆ ತೀವ್ರವಾಗಿ ಆಲೋಚಿಸಿದ ತೆಲಂಗಾಣ ರಾಜ್ಯ ಸರ್ಕಾರ ಮತ್ತೊಮ್ಮೆ ಗ್ರಂಥಾಲಯಗಳನ್ನು ಮುನ್ನೆಲೆಗೆ ತಂದಿದೆ. ಪುಸ್ತಕ ಓದುವುದರ ಜೊತೆಗೆ ಸಂಪೂರ್ಣ ವೈ-ಫೈ ಸಂಪರ್ಕ ಹೊಂದಿರುವ ಡಿಜಿಟಲ್ ಲೈಬ್ರರಿಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಆದರೆ, ನಾವು ಇಲ್ಲಿಯವರೆಗೆ ನೋಡಿದ ಬಹುತೇಕ ಗ್ರಂಥಾಲಯಗಳು ಪುರುಷರಿಗೆ ಮುಕ್ತವಾಗಿ ಹೋಗಿ ಅಧ್ಯಯನ ಮಾಡಲು ಮಾತ್ರವೆ ಇದ್ದಿತ್ತು. ಆದರೆ, ಅದಕ್ಕಿಂತ ಭಿನ್ನವಾಗಿ ಈಗ ಮಹಿಳೆಯರಿಗೂ ವಿಶೇಷವಾಗಿದೆ. ಅದರ ಭಾಗವಾಗಿ ಕರೀಂನಗರ ಜಿಲ್ಲೆಯ ರಾಮನಗರ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಮಹಿಳಾ ಗ್ರಂಥಾಲಯ ಈಗ ಪ್ರಗತಿಪರವಾಗಿ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಸುತ್ತಮುತ್ತಲಿನ ಮಹಿಳೆಯರು ಈ ಗ್ರಂಥಾಲಯಕ್ಕೆ ಬರಲು ಸಾಲುಗಟ್ಟಿ ನಿಂತಿದ್ದಾರೆ.

ಮಹಿಳೆಯರಿಗೆ ಬೇಕಾದ ಎಲ್ಲ ಸೌಲಭ್ಯಗಳ ಜತೆಗೆ.. ಸಾವಿತ್ರಿಭಾಯಿ ಫುಲೆ, ಸರೋಜಿನಿ ದೇವಿ, ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ಮದರ್ ತೆರೆಸಾ, ಸೂಪರ್ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿ ಅವರಿಂದ ಹಿಡಿದು ಮಹಿಳೆಯರಿಗಾಗಿಯೇ ಅನೇಕ ಸ್ಪೂರ್ತಿದಾಯಕ ಪುಸ್ತಕಗಳು ಲಭ್ಯವಿವೆ. ಅಷ್ಟೇ ಏಕೆ ಅಡುಗೆ, ಹೊಲಿಗೆ, ಹೆಣಿಗೆ, ತೋಟಗಾರಿಕೆ, ಆರೋಗ್ಯ ತತ್ವಗಳು, ಮಹಿಳೆಯರಿಗೆ ಜನಪ್ರಿಯವಾಗಿರುವ ಬ್ಯೂಟಿಷಿಯನ್ ಪುಸ್ತಕಗಳು.. ಕಾದಂಬರಿಗಳು, ಐತಿಹಾಸಿಕ ಪುಸ್ತಕಗಳನ್ನುಓದ ಬಯಸಿ, ಅನೇಕ ಮಹಿಳೆಯರು ತಮ್ಮ ಕೌಟುಂಬಿಕ ಕೆಲಸಗಳನ್ನು ಮುಗಿಸಿ ಕರೀಂನಗರದ ಗ್ರಂಥಾಲಯಕ್ಕೆ ಹೋಗುತ್ತಿದ್ದಾರೆ.. ಇದು ಪ್ರಗತಿಪರ ಬೆಳವಣಿಗೆಯಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸುವ ಸಲುವಾಗಿ ಇದು ಉತ್ತಮ ಹೆಜ್ಜೆಯಾಗಿದೆ.

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

ಇನ್ನು ಈ ಪ್ರಗತಿಪರ ನಿರ್ಧಾರದೊಂದಿಗೆ ಕರೀಂನಗರದಲ್ಲಿ ಮೊದಲ ಮಹಿಳಾ ಗ್ರಂಥಾಲಯವನ್ನು ಪ್ರಾರಂಭಿಸಿದ ತೆಲಂಗಾಣ ರಾಜ್ಯ ಸರ್ಕಾರವು ಅದನ್ನು ಪ್ರತಿ ಹಳ್ಳಿಗೂ ವಿಸ್ತರಿಸಲು ಬಯಸಿದೆ. ಗ್ರಾಮ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಆಶ್ರಯದಲ್ಲಿ ಇಂತಹ ಮಹಿಳಾಯುಕ್ತ ಗ್ರಂಥಾಲಯಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ