Madhya Pradesh Accident: ಮಧ್ಯಪ್ರದೇಶದಲ್ಲಿ ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿ, 7 ಮಂದಿ ಸಾವು

|

Updated on: Jun 08, 2023 | 4:28 PM

ಸಿಮೆಂಟ್ ಬಲ್ಕರ್ ಮತ್ತು ಜೀಪ್ ನಡುವೆ ಡಿಕ್ಕಿ 7 ಏಳು ಜನ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

Madhya Pradesh Accident: ಮಧ್ಯಪ್ರದೇಶದಲ್ಲಿ ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿ, 7 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ಮಧ್ಯಪ್ರದೇಶ: ಸಿಮೆಂಟ್ ಬಲ್ಕರ್ ಮತ್ತು ಜೀಪ್ ನಡುವೆ ಡಿಕ್ಕಿ 7 ಏಳು ಜನ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಸಿಧಿ ಜಿಲ್ಲೆಯ ಮದ್ವಾಸ್ ಪ್ರದೇಶದ ಡೋಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ವರದಿಯ ಪ್ರಕಾರ, ಸಿಮೆಂಟ್ ಬಲ್ಕರ್ ಜೀಪ್ ಮೇಲೆ ಪಲ್ಟಿಯಾಗಿದ್ದು, ಅಪಘಾತಕ್ಕೆ ಕಾರಣವಾಯಿತು. ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಲುಧಿಯಾನ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ

ಪಂಜಾಬ್‌ನ ಲುಧಿಯಾನ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಕಸದ ರಾಶಿಗೆ ಬೆಂಕಿ ಹಚ್ಚಿದ್ದರಿಂದ ಸ್ಫೋಟದ ಸದ್ದು ಕೇಳಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ಸದ್ದು ಕೇಳಿದ ಬಳಿಕ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನಂತರ, ಈ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ಕಸದ ರಾಶಿಗೆ ಬೆಂಕಿ ಹಚ್ಚುವವರಿಂದ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: Accident: ಶ್ರೀ ಕ್ಷೇತ್ರ ಘಾಟಿ ಬಳಿ ವೃದ್ಧೆಗೆ ಡಿಕ್ಕಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಮದುವೆ ಬಸ್

ಎಸಿಪಿ (ಸಿವಿಲ್ ಲೈನ್ಸ್) ಜಸ್ರೂಪ್ ಕೌರ್ ಬತ್ ಅವರು ಮಾತನಾಡಿ, ಕೆಲವು ರಾಸಾಯನಿಕಗಳನ್ನು ಹೊಂದಿರುವ ಬಾಟಲಿಯು ಸ್ಫೋಟಗೊಂಡಾಗ ಸ್ಫೋಟದ ಶಬ್ದವು ಕೇಳಿದೆ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯ ಸ್ಟೋರ್ ರೂಂ ಅನ್ನು ಸ್ವಚ್ಛಗೊಳಿಸಿ, ಕಸದ ರಾಶಿಗೆ ಹಾಕಿದ್ದಾರೆ, ಈ ಸಮಯದಲ್ಲಿ ಕಸ ಗುಡಿಸುವವರು ಕಸಕ್ಕೆ ಬೆಂಕಿ ಹಾಕಿದಾಗ ಕಸದ ರಾಶಿಯೊಳಗಿದ್ದ ಗಾಜಿನ ಬಾಟಲಿ ಸ್ಫೋಟಗೊಂಡಿದೆ. ಯಾವುದೇ ದುರುದ್ದೇಶದಿಂದು ಈ ಘಟನೆ ನಡೆದಿಲ್ಲ ಎಂದು ಜಸ್ರೂಪ್ ಕೌರ್ ಬಾತ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Thu, 8 June 23