ದೆಹಲಿ: 2019-20ನೇ ಹಣಕಾಸು ವರ್ಷದ ವಿಳಂಬಿತ ಮತ್ತು ಪರಿಷ್ಕೃತ ತೆರಿಗೆ ಸಲ್ಲಿಕೆ ಸೇರಿ ವಿವಿಧ ರೀತಿಯ ಆದಾಯ ತೆರಿಗೆ ನಿಯಮ ಪಾಲನೆಯ ಸಮಯವನ್ನು ಮೇ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಈಗಿರುವ ಸ್ಥಿತಿಯಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ನಿಗದಿಪಡಿಸಲಾದ ವಿವಿಧ ಕೊನೇ ದಿನಾಂಕವನ್ನ ಮುಂದೂಡಬೇಕು ಎಂದು ಹಲವು ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ಈ ಕ್ಷೇತ್ರದಲ್ಲಿರುವ ಇತರರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸಮಯ ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (Central Board of Direct Taxes- CBDT)ತಿಳಿಸಿದೆ.
2019-20ರ ಆರ್ಥಿಕ ವರ್ಷದ ವಿಳಂಬಿತ ಮತ್ತು ಪರಿಷ್ಕೃತ ತೆರಿಗೆಯನ್ನು ಮಾರ್ಚ್ 31ರ ಒಳಗೆ ಸಲ್ಲಿಸಬೇಕಿತ್ತು. ಇದೀಗ ಕೇಂದ್ರ ಅದರ ಸಮಯವನ್ನು 2021ರ ಮೇ 31ರವರೆಗೆ ವಿಸ್ತರಿಸಿದೆ. ಹಾಗೇ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೀಡಲಾದ ನೋಟಿಸ್ಗೆ ಉತ್ತರವಾಗಿ ಏಪ್ರಿಲ್ 1ರೊಳಗೆ ತೆರಿಗೆ ಸಲ್ಲಿಸಬೇಕು. ಅದಾಗದಿದ್ದರೆ ಆ ನೋಟಿಸ್ನಲ್ಲಿ ನೀಡಲಾದ ಕೊನೇ ದಿನಾಂಕದೊಳಗೆ ಸಲ್ಲಿಸಬೇಕಾಗಿತ್ತು. ಅದೆರಡೂ ಆಗದೆ ಇದ್ದರೆ ಮೇ 31ರೊಳಗೆ ಸಲ್ಲಿಸಬಹುದು ಎಂದೂ ಹೇಳಲಾಗಿದೆ. 2019-20ರ ಹಣಕಾಸು ವರ್ಷದ ಆದಾಯ ತೆರಿಗೆ ಸಂಬಂಧ ವ್ಯವಹಾರಗಳು 2021ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳಲೇಬೇಕಾಗಿರುವುದು ನಿಯಮ. ಹೀಗಿದ್ದಾಗ್ಯೂ ಕೊವಿಡ್ 19 ಸಂಕಷ್ಟದ ನಡುವೆ ಕೇಂದ್ರ ಇದರಲ್ಲಿ ವಿನಾಯಿತಿ ನೀಡಿದೆ. ಈ ಮೂಲಕ ಅನೇಕ ಆದಾಯ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ನೀಡಿದೆ.
ಇದನ್ನೂ ಓದಿ: ಸನ್ನಿ ಲಿಯೋನ್ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್ ತೆರೆದಿಟ್ಟ ಮಾದಕ ನಟಿ
ಪಾಕ್ ಆಟಗಾರರಿಗಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು; ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್