AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಆಟಗಾರರಿಗಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು; ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್

ಪಾಕಿಸ್ತಾನಕ್ಕಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು ಎಂದು ಒಪ್ಪಿಕೊಂಡರು. ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಅವರ ನಂತರ ಬರುವ ಬ್ಯಾಟ್ಸ್‌ಮನ್‌ಗಳ ರೋಲ್ ಮಾಡೆಲ್‌ಗಳಾಗುತ್ತಿದ್ದಾರೆ.

ಪಾಕ್ ಆಟಗಾರರಿಗಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು; ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್
ಮೊಹಮ್ಮದ್ ಯೂಸುಫ್
ಪೃಥ್ವಿಶಂಕರ
|

Updated on: May 01, 2021 | 5:13 PM

Share

ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ ಅವರು 2019 ರಿಂದ ಒಂದು ಶತಕ ಬಾರಿಸಿಲ್ಲ. ಆದಾಗ್ಯೂ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಕೊಹ್ಲಿಯ ಬಗ್ಗೆ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. 32 ವರ್ಷದ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜೊತೆಗೆ ಇದು ಕೇವಲ ಸಮಯದ ವಿಷಯವಾಗಿದೆ. ಶೀಘ್ರದಲ್ಲೇ ನೀವು ಕೊಹ್ಲಿ ಶತಕ ಗಳಿಸುವುದನ್ನು ನೋಡುತ್ತೀರಿ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ವಿರಾಟ್ ಕೊಹ್ಲಿ ಜೊತೆ ಸಚಿನ್ ಹೊಲಿಕೆ ತರವಲ್ಲ ಪಾಕಿಸ್ತಾನ ಪರ 288 ಏಕದಿನ ಮತ್ತು 90 ಟೆಸ್ಟ್ ಪಂದ್ಯಗಳನ್ನು ಆಡಿದ ಮೊಹಮ್ಮದ್ ಯೂಸುಫ್, ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಏನು ಸಾಧಿಸಿದ್ದಾರೆ. ಅದು ನನಗೆ ತುಂಬಾ ಹೆಚ್ಚು ಅನಿಸುತ್ತದೆ. ಆದರೆ ತೆಂಡೂಲ್ಕರ್​ ಅವರೊಂದಿಗೆ ಕೊಹ್ಲಿಯನ್ನು ಹೋಲಿಸುವುದು ತರವಲ್ಲ. ಸಚಿನ್​ ಯುಗವೇ ಬೇರೆಯಾದಗಿತ್ತು. ಅಲ್ಲದೆ ಸಚಿನ್ 100 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಬೌಲಿಂಗ್​ ಸಹ ಮಾಡಿದ್ದಾರೆ. ಆ ಸಮಯದಲ್ಲಿ ಸಚಿನ್ ಎದುರಿಸಿದ್ದ ಬೌಲರ್​ಗಳು ಎಂತಹವರು ಎಂಬುದನ್ನು ನಾವು ಗಮನಿಸಬೇಕಾಗುತ್ತದೆ. ಹೀಗಾಗಿ ಸಚಿನ್ ಜೊತೆ ಕೊಹ್ಲಿ ಹೊಲಿಕೆ ಸರಿ ಇಲ್ಲ ಎಂದರು.

ಪಾಕಿಸ್ತಾನಕ್ಕಿಂತ ಭಾರತದ ಬ್ಯಾಟ್ಸ್‌ಮನ್ ಉತ್ತಮ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ಯೂಸುಫ್, ಪಾಕಿಸ್ತಾನಕ್ಕಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು ಎಂದು ಒಪ್ಪಿಕೊಂಡರು. ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಅವರ ನಂತರ ಬರುವ ಬ್ಯಾಟ್ಸ್‌ಮನ್‌ಗಳ ರೋಲ್ ಮಾಡೆಲ್‌ಗಳಾಗುತ್ತಿದ್ದಾರೆ. ಭಾರತದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳು ಇರುವುದಕ್ಕೆ ಇದು ಕಾರಣವಾಗಿದೆ ಎಂದು ಯೂಸುಫ್ ತಮ್ಮ ಭಾಷಣದಲ್ಲಿ ಹೇಳಿದರು, ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ಅದೃಷ್ಟಶಾಲಿ, ನಮ್ಮಲ್ಲಿ ಇಂಜಮಾಮ್-ಉಲ್-ಹಕ್ ಮತ್ತು ಸಯೀದ್ ಅನ್ವರ್ ಅವರಂತಹ ಆಟಗಾರರು ಇದ್ದರು. ಇವರಲ್ಲದೆ, ಜಾವೇದ್ ಮಿಯಾಂದಾದ್ ಅವರಂತಹ ಕೋಚ್ ಕೂಡ ಇದ್ದರು.

ಪಾಕಿಸ್ತಾನ ಕ್ರಿಕೆಟ್ ಯೋಚಿಸಬೇಕಾಗುತ್ತದೆ! ಪಿಸಿಬಿಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಅನುಭವಿ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ತರಬೇತುದಾರರ ಪ್ರಕಾರ, ಪಾಕಿಸ್ತಾನ ತನ್ನ ಕ್ರಿಕೆಟ್ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಏಕೆಂದರೆ, ಯುವ ಬ್ಯಾಟ್ಸ್‌ಮನ್‌ಗಳನ್ನು ಟಿ 20 ಹೊರತುಪಡಿಸಿ ಇತರ ಫಾರ್ಮ್ಯಾಟ್‌ಗಳತ್ತ ಗಮನಹರಿಸುವುದು ಸಹ ಮುಖ್ಯವಾಗಿದೆ. ಇದು ಸಂಭವಿಸದಿದ್ದರೆ ಭವಿಷ್ಯದಲ್ಲಿ ನಾವು ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಕ್ರಿಕೆಟ್ ಅವಘಡ: ಪಾಕ್ ವೇಗಿಯ ಘಾತಕ ಎಸೆತಕ್ಕೆ ಜಿಂಬಾಬ್ವೆ ಆಟಗಾರನ ಹೆಲ್ಮೆಟ್​ ಪುಡಿಪುಡಿ! ವಿಡಿಯೋ ನೋಡಿ

Follow Us
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್