AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs CSK Predicted Playing 11: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ತಂಡಕ್ಕೆ ಒಂದು ಮುಖ್ಯ ಬದಲಾವಣೆ ಸೂಚಿಸಿದ ಆಕಾಶ್ ಚೋಪ್ರಾ

ಇಂದು (ಮೇ 1) ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಡಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಚಾಂಪಿಯನ್ ತಂಡಗಳು ಮುಖಾಮುಖಿಯಾಗಲಿವೆ.

MI vs CSK Predicted Playing 11: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ತಂಡಕ್ಕೆ ಒಂದು ಮುಖ್ಯ ಬದಲಾವಣೆ ಸೂಚಿಸಿದ ಆಕಾಶ್ ಚೋಪ್ರಾ
ಐಪಿಎಲ್ ದ್ವಿತಿಯಾರ್ಧಕ್ಕಾಗಿ ಕ್ಷಣಗಣನೆ ಶುರುವಾಗಿದೆ. ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ 5 ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ 3 ಬಾರಿಯ ಚಾಂಪಿಯನ್ಸ್ ಸಿಎಸ್​ಕೆ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ ಒಂದು ಪಂದ್ಯವನ್ನಾಡಿದೆ.
TV9 Web
| Updated By: ganapathi bhat|

Updated on:Sep 05, 2021 | 10:41 PM

Share

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಸರಣಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುತ್ತಿಲ್ಲ. ಟೂರ್ನಿಯ ಆರಂಭಿಕ ಪಂದ್ಯವನ್ನು ಆರ್​ಸಿಬಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಬಳಿಕ ಕೋಲ್ಕತ್ತಾ ಮತ್ತು ಸನ್​ರೈಸರ್ಸ್ ವಿರುದ್ಧ ಗೆದ್ದು ಗೆಲುವು ಮುಂದುವರಿಸುವ ಸೂಚನೆ ನೀಡಿತು. ಆದರೆ, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತೆ ಸೋತ ಮುಂಬೈ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಕಂಡಿತು.

ಇಂದು (ಮೇ 1) ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಡಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಚಾಂಪಿಯನ್ ತಂಡಗಳು ಮುಖಾಮುಖಿಯಾಗಲಿವೆ. ಗೆಲುವು ಕಂಡು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿರುವ ಸಿಎಸ್​ಕೆ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದೆ. ಸೋಲಿನ ಸುಳಿಯಿಂದ ಹೊರಬಂದಿರುವ ಮುಂಬೈ ಇಂದು ಗೆಲುವು ಕಾಣುವ ನಿರೀಕ್ಷೆ ಇಟ್ಟುಕೊಂಡಿದೆ.

ಸರಣಿಯ ಇಂದಿನ ಪಂದ್ಯದ ಬಗ್ಗೆ ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್​ಮನ್ ಹಾಗೂ ಈಗಿನ ಕಮೆಂಟೇಟರ್ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆಯನ್ನು ಅವರು ಸೂಚಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೃನಾಲ್ ಪಾಂಡ್ಯ ಸ್ಥಾನದಲ್ಲಿ ಇಶಾನ್ ಕಿಶನ್ ಆಡಿಸುವುದು ಒಳ್ಳೆಯದು ಎಂದು ತಿಳಿಸಿ ಅದಕ್ಕೆ ಸೂಕ್ತ ಕಾರಣವನ್ನೂ ವಿವರಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ಅವರ ವಿವರಣೆ ಹೀಗಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೂಕ್ತ ಸಂಖ್ಯೆಯ ಬೌಲರ್​ಗಳು ಇದ್ದಾರೆ. ಹಾಗೂ ಕೃನಾಲ್ ಪಾಂಡ್ಯ ನಂಬರ್ 4ರಲ್ಲಿ ಆಡುವುದು ಅಷ್ಟು ಸರಿಯಾದ ನಿರ್ಧಾರವಲ್ಲ. ಕೃನಾಲ್ ಪಾಂಡ್ಯ ಇಷ್ಟವಿಲ್ಲ ಎಂಬುದು ಇದರ ಅರ್ಥವಲ್ಲ, ಆದರೆ ಕೃನಾಲ್ ಪಾಂಡ್ಯರನ್ನು ನಂಬರ್ 4 ರಲ್ಲಿ ಬ್ಯಾಟಿಂಗ್​ಗೆ ಕಳುಹಿಸುವುದಿದ್ದರೆ, ಆ ಸ್ಥಾನಕ್ಕೆ ಇಶಾನ್ ಕಿಶನ್ ಹೆಚ್ಚು ಸೂಕ್ತ ಆಟಗಾರ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೃನಾಲ್ ಪಾಂಡ್ಯರನ್ನು ಬೌಲಿಂಗ್​ಗಾಗಿ ತಂಡದಲ್ಲಿ ಇರಿಸಿಕೊಂಡಂತೆಯೂ ಕಾಣುವುದಿಲ್ಲ. ಹಾಗಾಗಿ, ಇಶಾನ್ ಕಿಶನ್​ಗೆ ಆಡಲು ಅವಕಾಶ ನೀಡುವುದು ಒಳಿತು ಎಂದು ಅವರು ತಿಳಿಸಿದ್ದಾರೆ. ಅಥವಾ ಜಯಂತ್ ಯಾದವ್ ಆಡಿಸುವುದು ಕೂಡ ಉತ್ತಮ ಎಂದು ಹೇಳಿದ್ದಾರೆ. ಗೆಲುವಿನ ಅಲೆಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ ಬದಲಾಯಿಸುವ ಸೂಚನೆ ಕಂಡುಬಂದಿಲ್ಲ. ಮುಂಬೈ ತಂಡದಲ್ಲಿ ಏನು ಬದಲಾವಣೆ ಆಗಬಹುದು ಎಂದು ಕಾದುನೋಡಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಋತುರಾಜ್ ಗಾಯಕವಾಡ್ 2) ಫಾಫ್ ಡು ಪ್ಲೆಸಿಸ್ 3) ಸುರೇಶ್ ರೈನಾ 4) ಮೊಯೀನ್ ಅಲಿ 5) ಅಂಬಟಿ ರಾಯುಡು 6) ರವೀಂದ್ರ ಜಡೇಜಾ 7) ಎಂ.ಎಸ್ ಧೋನಿ (ನಾಯಕ/ ವಿಕೆಟ್ ಕೀಪರ್) 8) ಸ್ಯಾಮ್ ಕುರ್ರನ್ 9) ಜೇಸನ್ ಬೆಹ್ರೆಂಡೋರ್ಫ್ / ಲುಂಗಿ ಎನ್‌ಗಿಡಿ 10) ಶಾರ್ದುಲ್ ಠಾಕೂರ್ 11) ದೀಪಕ್ ಚಹರ್

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) 2) ರೋಹಿತ್ ಶರ್ಮಾ (ನಾಯಕ) 3) ಸೂರ್ಯಕುಮಾರ್ ಯಾದವ್ 4) ಕೃನಾಲ್ ಪಾಂಡ್ಯ 5) ಕೀರನ್ ಪೊಲಾರ್ಡ್ 6) ಹಾರ್ದಿಕ್ ಪಾಂಡ್ಯ 7) ಜಯಂತ್ ಯಾದವ್ / ಅನುಕುಲ್ ರಾಯ್ 8) ನಾಥನ್ ಕೌಲ್ಟರ್-ನೈಲ್ 9) ರಾಹುಲ್ ಚಹರ್ 10) ಜಸ್ಪ್ರಿತ್ ಬುಮ್ರಾ 11) ಟ್ರೆಂಟ್ ಬೌಲ್ಟ್

ಇದನ್ನೂ ಓದಿ: IPL 2021: ಸೂರ್ಯಕುಮಾರ್ ಯಾದವ್ ಸಾಮಾಜಿಕ ಅಂತರ ಪಾಲಿಸಿ ಪತ್ನಿಗೆ ಕಿಸ್ ಕೊಟ್ಟ ಫೊಟೊ ವೈರಲ್

IPL 2021 Points Table: ಮೂರನೇ ಸ್ಥಾನಕ್ಕೆ ಕುಸಿದ ಆರ್​ಸಿಬಿ; ಪಾಯಿಂಟ್ಸ್ ಟೇಬಲ್ ಕಿಂಗ್ ಆಗೇ ಉಳಿಯುತ್ತಾ ಚೆನ್ನೈ?

(MI vs CSK Team Prediction Playing 11 Aakash Chopra suggests one change in Rohit Sharma lead MI)

Published On - 5:31 pm, Sat, 1 May 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ