IPL 2021 Points Table: ಮೂರನೇ ಸ್ಥಾನಕ್ಕೆ ಕುಸಿದ ಆರ್ಸಿಬಿ; ಪಾಯಿಂಟ್ಸ್ ಟೇಬಲ್ ಕಿಂಗ್ ಆಗೇ ಉಳಿಯುತ್ತಾ ಚೆನ್ನೈ?
Orange Cap Purple Cap List: ಆರ್ಸಿಬಿ ಸೋಲಿನ ಬಳಿಕ ಅಂಕಪಟ್ಟಿಯಲ್ಲಿ ಯಾವ ಸ್ಥಾನ ಪಡೆದುಕೊಂಡಿದೆ? ಪಂಜಾಬ್ ಯಾವ ಸ್ಥಾನಕ್ಕೇರಿದೆ? ಪಾಯಿಂಟ್ಸ್ ಟೇಬಲ್ನಲ್ಲಿ ತೀವ್ರ ಪೈಪೋಟಿ ಒಡ್ಡುತ್ತಿರುವ ತಂಡಗಳು ಯಾವುವು? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.
ಐಪಿಎಲ್ 2021 ಟೂರ್ನಿಯ 26ನೇ ಪಂದ್ಯವು ನಿನ್ನೆ (ಏಪ್ರಿಲ್ 30) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿತ್ತು. ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 34 ರನ್ಗಳ ಗೆಲುವು ದಾಖಲಿಸಿತ್ತು. ಆರ್ಸಿಬಿ ಸೋಲಿನ ಬಳಿಕ ಅಂಕಪಟ್ಟಿಯಲ್ಲಿ ಯಾವ ಸ್ಥಾನ ಪಡೆದುಕೊಂಡಿದೆ? ಪಂಜಾಬ್ ಯಾವ ಸ್ಥಾನಕ್ಕೇರಿದೆ? ಪಾಯಿಂಟ್ಸ್ ಟೇಬಲ್ನಲ್ಲಿ ತೀವ್ರ ಪೈಪೋಟಿ ಒಡ್ಡುತ್ತಿರುವ ತಂಡಗಳು ಯಾವುವು? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.
ಆರಂಭದಲ್ಲಿ ಅಂಕಪಟ್ಟಿಯ ಟಾಪ್ ಸ್ಥಾನ ಉಳಿಸಿಕೊಂಡು ಭರ್ಜರಿ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತು, ಸರಣಿಯ 2ನೇ ಸೋಲು ಕಂಡಿದೆ. ಅಂದರೆ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು 10 ಅಂಕ ಪಡೆದುಕೊಂಡಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸಮಾನಾದ ಅಂಕವನ್ನು ಹಂಚಿಕೊಂಡಿದೆ. ಚೆನ್ನೈ 6 ಪಂದ್ಯಗಳಲ್ಲಿ ಐದನ್ನು ಗೆದ್ದು 10 ಅಂಕ ಮತ್ತು ಡೆಲ್ಲಿ 7ರಲ್ಲಿ 5 ಪಂದ್ಯ ಗೆದ್ದು 10 ಅಂಕ ಪಡೆದುಕೊಂಡಿದೆ. ಆದರೆ, ನೆಟ್ ರನ್ ರೇಟ್ನಲ್ಲಿ ಚೆನ್ನೈ ಮತ್ತು ಡೆಲ್ಲಿಗಿಂತ ಹಿಂದಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಪಾಯಿಂಟ್ಸ್ ಟೇಬಲ್ ಟಾಪ್ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮೂರನೇ ಸ್ಥಾನದಲ್ಲಿ ಆರ್ಸಿಬಿ ಇದೆ. ಈ ಮೂರು ತಂಡಗಳು ಕೂಡ ತಲಾ 10 ಅಂಕಗಳನ್ನು ಪಡೆದುಕೊಂಡು ತೀವ್ರ ಪೈಪೋಟಿ ನಡೆಸುತ್ತಿವೆ. ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಗೆಲುವು ಕಂಡಿದ್ದರೆ ಅಂಕಪಟ್ಟಿಯ ಮೊದಲ ಸ್ಥಾನಕ್ಕೆ ಏರುತ್ತಿತ್ತು. ಹಾಗೂ ಇಂದಿನ ಪಂದ್ಯದಲ್ಲಿ ಚೆನ್ನೈ ಗೆಲುವು ಕಂಡರೆ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆಯೂರಲಿದೆ.
ಇನ್ನು ಅಂಕಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ. 6ರಲ್ಲಿ 3 ಗೆಲುವು ಕಂಡು 6 ಅಂಕಗಳನ್ನು ಮುಂಬೈ ಪಡೆದಿದೆ. 7 ಪಂದ್ಯಗಳಲ್ಲಿ 3 ಗೆಲುವು ಕಂಡ ಪಂಜಾಬ್ 6 ಅಂಕಗಳೊಂಡಿಗೆ 5ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೇಲೇರುವ ಅವಕಾಶ ಪಂಜಾಬ್ ಪಾಲಿಗೆ ಇನ್ನೂ ಕೈತಪ್ಪಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ 7ರಲ್ಲಿ 2 ಹಾಗೂ ರಾಜಸ್ಥಾನ್ ರಾಯಲ್ಸ್ 6ರಲ್ಲಿ 2 ಗೆಲುವು ಕಂಡು 4 ಅಂಕಗಳನ್ನು ಪಡೆದು ಆರನೇ ಮತ್ತು ಏಳನೇ ಸ್ಥಾನ ಉಳಿಸಿಕೊಂಡಿವೆ. ಸನ್ರೈಸರ್ಸ್ ಹೈದರಾಬಾದ್ ಟೀಂ 6 ಪಂದ್ಯಗಳಲ್ಲಿ ಕೇವಲ 1 ಗೆದ್ದು ಕೊನೆಯ ಸ್ಥಾನದಲ್ಲಿದೆ.
ಅಂಕಪಟ್ಟಿಯ ಸಂಪೂರ್ಣ ಅಂಕಿಅಂಶ ಇಲ್ಲಿದೆ: IPL 2021 Points Table
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಬದಲಾವಣೆಗಳೇನು? ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಖ್ಯ ಬದಲಾವಣೆಯಾಗಿದ್ದು, ಮೊದಲನೇ ಸ್ಥಾನಕ್ಕೆ ಪಂಜಾಬ್ ಕಿಂಗ್ಸ್ನ ಕೆ.ಎಲ್. ರಾಹುಲ್ ಲಗ್ಗೆ ಇಟ್ಟಿದ್ದಾರೆ. ಈ ಮೊದಲು ಶಿಖರ್ ಧವನ್ 311 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 91 ರನ್ ಗಳಿಸಿದ ರಾಹುಲ್ 331 ರನ್ಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ 270 ರನ್ ಗಳಿಸಿರುವ ಫಫ್ ಡುಪ್ಲೆಸಿಸ್ 3ನೇ ಸ್ಥಾನ, ಪೃಥ್ವಿ ಶಾ 269 ರನ್ ಗಳಿಸಿ 4ನೇ ಸ್ಥಾನ ಹಾಗೂ ಸಂಜು ಸ್ಯಾಮ್ಸನ್ 229 ರನ್ ಗಳಿಸಿ ಕೊನೆಯ ಸ್ಥಾನದಲ್ಲಿದ್ದಾರೆ.
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಏನು ಬದಲಾವಣೆ? ಐಪಿಎಲ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. 17 ವಿಕೆಟ್ ಪಡೆದ ಆರ್ಸಿಬಿಯ ಹರ್ಷಲ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡದ ಅವೇಶ್ ಖಾನ್ 13 ವಿಕೆಟ್ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಂಬೈನ ರಾಹುಲ್ ಚಹಾರ್ ಹಾಗೂ ರಾಜಸ್ಥಾನ್ ರಾಯಲ್ಸ್ನ ಕ್ರಿಸ್ ಮಾರಿಸ್ ತಲಾ 11 ವಿಕೆಟ್ ಪಡೆದು 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ರಶೀದ್ ಖಾನ್, ಪ್ಯಾಟ್ ಕಮ್ಮಿನ್ಸ್ ಮತ್ತು ಕೈಲ್ ಜಾಮಿಸನ್ ತಲಾ 9 ವಿಕೆಟ್ ಪಡೆದು ಕ್ರಮವಾಗಿ 5, 6 ಮತ್ತು 7ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: IPL 2021: ಸೂರ್ಯಕುಮಾರ್ ಯಾದವ್ ಸಾಮಾಜಿಕ ಅಂತರ ಪಾಲಿಸಿ ಪತ್ನಿಗೆ ಕಿಸ್ ಕೊಟ್ಟ ಫೊಟೊ ವೈರಲ್
ಭಾರತೀಯರಿಗಾಗಿ ಮಿಡಿದ ಕ್ರಿಕೆಟಿಗರ ಹೃದಯ! ಈ ಐಪಿಎಲ್ನಲ್ಲಿ ನನ್ನ ಆಟಕ್ಕೆ ಸಿಗುವ ಅಷ್ಟೂ ಹಣವನ್ನು ಆಮ್ಲಜನಕ ಪೂರೈಕೆಗೆ ನೀಡುತ್ತಿದ್ದೇನೆ; ಧವನ್ (IPL 2021 Points Table Orange Cap Purple Cap List after PBKS vs RCB match details here)
Published On - 4:26 pm, Sat, 1 May 21