AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಸೂರ್ಯಕುಮಾರ್ ಯಾದವ್ ಸಾಮಾಜಿಕ ಅಂತರ ಪಾಲಿಸಿ ಪತ್ನಿಗೆ ಕಿಸ್ ಕೊಟ್ಟ ಫೊಟೊ ವೈರಲ್

ಕೊರೊನಾ ಸಾಂಕ್ರಾಮಿಕ ಸಂಕಷ್ಟದ ನಡುವೆ ಐಪಿಎಲ್ 2021 ಸರಣಿ ನಡೆಯುತ್ತಿದ್ದು, ಆಟಗಾರರು ಬಯೋ ಬಬಲ್ ನಿಯಮಾನುಸಾರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸುತ್ತಿದ್ದಾರೆ.

IPL 2021: ಸೂರ್ಯಕುಮಾರ್ ಯಾದವ್ ಸಾಮಾಜಿಕ ಅಂತರ ಪಾಲಿಸಿ ಪತ್ನಿಗೆ ಕಿಸ್ ಕೊಟ್ಟ ಫೊಟೊ ವೈರಲ್
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ
TV9 Web
| Edited By: |

Updated on:Sep 05, 2021 | 10:41 PM

Share

ಐಪಿಎಲ್ 2021 ಆವೃತ್ತಿಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಕಂಡಿತು. ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ವೇಳೆ ಮುಂಬೈ ಇಂಡಿಯನ್ಸ್ ಗೆಲುವಿನ ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದ ಮತ್ತೊಂದು ವಿಚಾರ ನಡೆಯಿತು. ರೋಹಿತ್ ಪಡೆಯ ಉತ್ತಮ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಪತ್ನಿಯ ಜೊತೆಗೆ ಸಮಯ ಕಳೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿತು.

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಸಾಮಾಜಿಕ ಅಂತರ ಪಾಲಿಸಿಕೊಂಡು ಮುತ್ತಿಟ್ಟರು. ದೇವಿಶಾ ಗ್ಲಾಸ್ ಶೀಟ್ ಹಿಂಬಾಗದಲ್ಲಿ, ಸ್ಟಾಂಡ್ ಬಳಿ ನಿಂತಿದ್ದರು. ಪಂದ್ಯದ ಬಳಿಕ ಮೈದಾನದ ಸ್ಟಾಂಡ್ ಬಳಿ ತೆರಳಿದ ಸೂರ್ಯಕುಮಾರ್ ಯಾದವ್ ದೇವಿಶಾಗೆ ಗ್ಲಾಸ್ ಶೀಟ್ ಹೊರಭಾಗದಿಂದಲೇ ಸಿಹಿಮುತ್ತು ನೀಡಿದರು. ಈ ವಿಶೇಷ ಸಂದರ್ಭವನ್ನು ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆ ಹಂಚಿಕೊಂಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿತ್ತು.

ಕೊರೊನಾ ಸಾಂಕ್ರಾಮಿಕ ಸಂಕಷ್ಟದ ನಡುವೆ ಐಪಿಎಲ್ 2021 ಸರಣಿ ನಡೆಯುತ್ತಿದ್ದು, ಆಟಗಾರರು ಬಯೋ ಬಬಲ್ ನಿಯಮಾನುಸಾರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ಫ್ರಾಂಚೈಸಿ ಅನುವು ಮಾಡಿಕೊಟ್ಟಿದೆ.

ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ಪತ್ನಿ ಸಾಗರಿಕಾ ಘಟ್ಗೆ ಕೂಡ ಈ ಚಿತ್ರವನ್ನು ಹಂಚಿಕೊಂಡಿದ್ದರು. ಸಾಗರಿಕಾ ಹಂಚಿಕೊಂಡಿದ್ದ ಸ್ಟೋರಿಯನ್ನು ಸೂರ್ಯಕುಮಾರ್ ಯಾದವ್ ರಿಶೇರ್ ಮಾಡಿ ಸಂಭ್ರಮಿಸಿದ್ದರು. ಗುರುವಾರದ ಆಟದಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ಮೊತ್ತ ಕಲೆಹಾಕಿದರೂ ವೇಗದ ಆಟ ಆಡಿದ್ದರು. 10 ಬಾಲ್​ಗೆ 16 ರನ್ ಗಳಿಸಿ ಕ್ರಿಸ್ ಮಾರಿಸ್​ಗೆ ವಿಕೆಟ್ ಒಪ್ಪಿಸಿದ್ದರು.

ಈ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡ 6 ಅಂಕಗಳನ್ನು ಹೊಂದಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಇಂದು (ಮೇ 1) ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27ನೇ ಪಂದ್ಯವನ್ನು ದೆಹಲಿ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ. ಐಪಿಎಲ್ ಸರಣಿಯ 27ನೇ ಪಂದ್ಯದ, ಎರಡು ಚಾಂಪಿಯನ್ ತಂಡಗಳ ನಡುವಿನ ಹಣಾಹಣಿಯ ಫಲಿತಾಂಶ ಏನಾಗಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: IPL 2021: ಎಬಿಡಿ ಆರ್ಸಿಬಿ ಆಸ್ತಿ.. ಪಡಿಕ್ಕಲ್ ಯಾರನ್ನ ಹೆಚ್ಚಾಗಿ ಇಷ್ಟಪಡ್ತಾನೋ ಗೊತ್ತಿಲ್ಲ, ಆದ್ರೆ ನಿನ್ನನ್ನ ಮಾತ್ರ ಇಷ್ಟಪಡೋದಿಲ್ಲ: ಕೊಹ್ಲಿ

MI vs RR Match 24 Result, IPL 2021: ಮುಂಬೈಗೆ ಸುಲಭ ತುತ್ತಾದ ರಾಜಸ್ಥಾನ್, ಸೋಲಿನ ಸುಳಿಯಿಂದ ಹೊರಬಂದ ರೋಹಿತ್ ಪಡೆ

(IPL 2021 Suryakumar Yadav kisses his wife Devisha after match between MI RR maintaining Social Distance See Pic)

Published On - 3:38 pm, Sat, 1 May 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!