IPL 2021: ಎಬಿಡಿ ಆರ್ಸಿಬಿ ಆಸ್ತಿ.. ಪಡಿಕ್ಕಲ್ ಯಾರನ್ನ ಹೆಚ್ಚಾಗಿ ಇಷ್ಟಪಡ್ತಾನೋ ಗೊತ್ತಿಲ್ಲ, ಆದ್ರೆ ನಿನ್ನನ್ನ ಮಾತ್ರ ಇಷ್ಟಪಡೋದಿಲ್ಲ: ಕೊಹ್ಲಿ

IPL 2021: ನಿಜಕ್ಕೂ ಎಬಿಡಿಗೆ ಹ್ಯಾಟ್ಸ್ಅಪ್. ಎಬಿಡಿ ಆರ್ಸಿಬಿಗೆ ಆಸ್ತಿಯಿದ್ದಂತೆ. ನಾನು ಮತ್ತೊಮ್ಮೆ ಹೇಳುತ್ತೇನೆ. ಎಬಿಡಿ ಕಳೆದ ಐದು ತಿಂಗಳಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಆದ್ರೂ ಅವರ ಅದ್ಭುತ ಇನಿಂಗ್ಸ್ ನೋಡಿ.

IPL 2021: ಎಬಿಡಿ ಆರ್ಸಿಬಿ ಆಸ್ತಿ.. ಪಡಿಕ್ಕಲ್ ಯಾರನ್ನ ಹೆಚ್ಚಾಗಿ ಇಷ್ಟಪಡ್ತಾನೋ ಗೊತ್ತಿಲ್ಲ, ಆದ್ರೆ ನಿನ್ನನ್ನ ಮಾತ್ರ ಇಷ್ಟಪಡೋದಿಲ್ಲ: ಕೊಹ್ಲಿ
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​
Follow us
ಪೃಥ್ವಿಶಂಕರ
|

Updated on: Apr 30, 2021 | 3:08 PM

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ರೋಚಕ 1 ರನ್ನಿಂದ ಗೆದ್ದು ಬೀಗಿದೆ ಅಂದ್ರೆ, ಅದಕ್ಕೆ ಮಿಸ್ಟರ್ 360 ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಕಾರಣ. ಹಟಾತ್ ಕುಸಿತ ಕಂಡ ಆರ್ಸಿಬಿಗೆ ಆಧಾರಸ್ತಂಬವಾಗಿ ನಿಂತ ಎಬಿಡಿ ಕೇವಲ 42 ಬಾಲ್ಗಳಲ್ಲಿ ಅಜೇಯ 75 ರನ್ಗಳಿಸಿದ್ರು. ಡೆಲ್ಲಿ ವಿರುದ್ಧ ಎಬಿಡಿ ಆರ್ಭಟಿಸಿದ್ದನ್ನ ನೋಡಿ, ಸ್ವತಃ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯೇ ದಂಗಾಗಿ ಹೋಗಿದ್ದಾರೆ. ಕಳೆದ ವರ್ಷ ಯುಎಇನಲ್ಲಿ ಐಪಿಎಲ್ ಮುಗಿದ ಬಳಿಕ ಎಬಿಡಿ, ಐದು ತಿಂಗಳಿಂದ ಯಾವುದೆ ಸ್ಪರ್ಧಾತ್ಮಕ ಟೂರ್ನಿ ಆಡಿರಲಿಲ್ಲ. ಆದ್ರೂ ಎಬಿಡಿ ಐಪಿಎಲ್ನಲ್ಲಿ ಆರ್ಸಿಬಿ ಪರ ಐಪಿಎಲ್ನಲ್ಲಿ ರನ್ ಮಳೆ ಹರಿಸುತ್ತಿದ್ದಾರೆ.

ಎಬಿಡಿ ಆರ್ಸಿಬಿ ತಂಡದ ಆಸ್ತಿಯಿದ್ದಂತೆ ಎಂದ ವಿರಾಟ್! ನಿಜ.. 2011ರಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಂಡಾಗಿನಿಂದ, ಎಬಿಡಿ ನಿಜಕ್ಕೂ ತಂಡದ ಆಸ್ತಿಯಾಗೇ ಗುರುತಿಸಿಕೊಂಡಿದ್ದಾರೆ. ಯಾರು ಆಡಲಿ.. ಬಿಡಲಿ.. ಎಬಿಡಿ ಮಾತ್ರ ಪ್ರತಿ ಪಂದ್ಯದಲ್ಲೂ ಆರ್ಸಿಬಿ ಗೆಲುವಿಗಾಗಿ ಅಬ್ಬರಿಸುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿ, ಎಬಿಡಿ ಆರ್ಸಿಬಿ ತಂಡದ ಆಸ್ತಿ ಎಂದು ಗುಣಗಾನ ಮಾಡಿದ್ದಾರೆ..

ಎಬಿಡಿ ಆರ್ಸಿಬಿ ಆಸ್ತಿ ಈಗ ನಾನು ಆಡುವ ಮಾತುಗಳನ್ನು ಎಬಿಡಿ ಇಷ್ಟಪಡುವುದಿಲ್ಲ. ಆದ್ರೆ ಎಬಿಡಿ ಕಳೆದ ಐದು ತಿಂಗಳಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರಲಿಲ್ಲ. ಆದ್ರೆ ಐಪಿಎಲ್ನಲ್ಲಿ ಅವರ ಬ್ಯಾಟಿಂಗ್ ನೋಡಿದ್ರೆ, ಎಬಿಡಿ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡುವುದಿಲ್ಲ ಎನಿಸುವುದಿಲ್ಲ. ನಿಜಕ್ಕೂ ಎಬಿಡಿಗೆ ಹ್ಯಾಟ್ಸ್ಅಪ್. ಎಬಿಡಿ ಆರ್ಸಿಬಿಗೆ ಆಸ್ತಿಯಿದ್ದಂತೆ. ನಾನು ಮತ್ತೊಮ್ಮೆ ಹೇಳುತ್ತೇನೆ. ಎಬಿಡಿ ಕಳೆದ ಐದು ತಿಂಗಳಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಆದ್ರೂ ಅವರ ಅದ್ಭುತ ಇನಿಂಗ್ಸ್ ನೋಡಿ. -ವಿರಾಟ್ ಕೊಹ್ಲಿ, ಆರ್ಸಿಬಿ ತಂಡದ ನಾಯಕ

ವಿರಾಟ್ ಕೊಹ್ಲಿ ಹೇಳಿರುವದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಯಾಕಂದ್ರೆ ಐಪಿಎಲ್ನ ಪ್ರತಿ ಸೀಸನ್ನಲ್ಲೂ ಎಬಿಡಿ, ಆರ್ಸಿಬಿ ಗೆದ್ದ ಪಂದ್ಯಗಳಲ್ಲಿ ಪ್ರಮುಖ ಪಾತ್ರವಹಿಸಿಕೊಂಡೇ ಬಂದಿದ್ದಾರೆ. ಇನ್ನು ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಕೊಹ್ಲಿ ಹುಡುಗ್ರು ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

ಮೊದಲಿಗೆ ಯಜ್ವಿಂದರ್ ಚಹಲ್ ಕ್ಯಾಚ್ ಹಿಡಿಯಲು ಹೋಗಿ ತಾನು ಕಾಲಿಗೆ ಗಾಯಮಾಡಿಕೊಂಡೆ ಎಂದು ಹೇಳಿ, ಕಾಲಿಗಾದ ಗಾಯವನ್ನ ತೋರಿಸಿದ್ದಾರೆ. ಈ ಮೂಲಕ ಚಹಲ್, ಎಬಿಡಿ ಪ್ಯಾಡ್ ಕಟ್ಟಿಕೊಂಡು ಡೈವ್ ಹೊಡೀತಾರೆ ಅಂತಾ ಟಾಂಗ್ ಕೊಟ್ರು.

ಬಳಿಕ ಕ್ಯಾಚ್ ಕೈ ಚೆಲ್ಲಿದ್ದ ದೇವದತ್ ಪಡಿಕ್ಕಲ್ ಬಳಿ ಹೋಗಿ ನಾನು ಕಠಿಣವಾದ ಕ್ಯಾಚ್ ಹಿಡಿದೆ, ಆದ್ರೆ ಎಬಿ ಡಿವಿಲಿಯರ್ಸ್ ಸುಲಭವಾದ ಮೂರು ಕ್ಯಾಚ್ಗಳನ್ನ ಹಿಡಿದ್ರು ಎಂದು ರೇಗಿಸಿದ್ರು.

ಪಡಿಕ್ಕಲ್ ಗೋಳು ಹೊಯ್ದುಕೊಂಡ ನ್ಯಾಗ್ಸ್ಗೆ ಕೊಹ್ಲಿ ತಿರುಗೇಟು! ಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಮಿಸ್ಟರ್ ನ್ಯಾಗ್ಸ್, ದೇವದತ್ ಪಡಿಕ್ಕಲ್ನ ಗೋಳು ಹೊಯ್ದುಕೊಂಡಿದ್ದಾರೆ. ನಿನಗೆ ಎಬಿಡಿ ಇಷ್ಟಾನಾ ಇಲ್ಲಾ ಕೊಹ್ಲಿ ಇಷ್ಟಾನಾ.. ಎಂದು ಪಡಿಕ್ಕಲ್ಗೆ ಪ್ರಶ್ನೆ ಮಾಡಿ ಇಕ್ಕಟ್ಟಿಗೆ ಸಿಲುಕಿಸಿದ್ರು.

ನ್ಯಾಗ್ಸ್ ಕೇಳಿದ ಈ ಪ್ರಶ್ನೆಗೆ ಪಡಿಕ್ಕಲ್. ಇಬ್ಬರನ್ನು ಇಷ್ಟಪಡ್ತೀನಿ ಎಂದಿದ್ದಾರೆ. ಆದ್ರೆ ನ್ಯಾಗ್ಸ್ ತಪ್ಪಿಸಿಕೊಳ್ಳೋ ಉತ್ತರ ಕೊಡ್ಬೇಡಾ ಎಂದು ಪಟ್ಟು ಹಿಡಿದ್ರು.

ಬಳಿಕ ಪಡಿಕ್ಕಲ್ಗೆ ನ್ಯಾಗ್ಸ್, ನಿನ್ನ ಬೆನ್ನಿಂದೆ ಎಬಿಡಿ ಇದ್ರೆ ಎಬಿಡಿ ಹೆಸರನ್ನ ಹೇಳು ಎಂದು, ಐಡಿಯಾ ಕೊಟ್ಟಿದ್ದಾರೆ. ಇದೇ ಸಮಯಕ್ಕೆ ವಿರಾಟ್ ಒಳಗಡೆ ಬಂದಿದ್ದಾರೆ. ಆಗ ನ್ಯಾಗ್ಸ್, ವಿರಾಟ್ಗೆ, ಪಡಿಕ್ಕಲ್ ಎಬಿಡಿ ನನ್ನ ನೆಚ್ಚಿನ ಬ್ಯಾಟ್ಸ್ಮನ್ ಎನ್ನುತ್ತಿದ್ದಾನೆ ಎಂದು ಹೇಳಿದ್ದಾರೆ.

ನ್ಯಾಗ್ಸ್ ಕಿತಾಪತಿ ಮಾಡ್ತಿದ್ದಾನೆ ಅನ್ನೋದು ವಿರಾಟ್ಗೆ ಚೆನ್ನಾಗೇ ಗೊತ್ತು. ಹೀಗಾಗಿ ವಿರಾಟ್, ನ್ಯಾಗ್ಸ್ ತಕ್ಕ ತಿರುಗೇಟು ನೀಡಿದ್ದಾರೆ. ಪಡಿಕ್ಕಲ್ ಯಾರನ್ನ ಹೆಚ್ಚಾಗಿ ಇಷ್ಟಪಡ್ತಾನೋ ಗೊತ್ತಿಲ್ಲ. ಆದ್ರೆ ನಿನ್ನನ್ನ ಮಾತ್ರ ಇಷ್ಟಪಡೋದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಕೊಹ್ಲಿ ಕೊಟ್ಟ ತಿರುಗೇಟಿಗೆ ನ್ಯಾಗ್ಸ್ ಥ್ಯಾಂಕ್ಯೂ ಹೇಳಿ ಸುಮ್ಮನಾಗಿದ್ದಾರೆ. ಸದ್ಯ ಮತ್ತೊಮ್ಮೆ ಗೆಲುವಿನ ಲಯಕ್ಕೆ ಬಂದಿರುವ ಕೊಹ್ಲಿ ಹುಡುಗರು, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ