IPL 2021 Points Table: ಪಾಯಿಂಟ್ಸ್ ಟೇಬಲ್ ಟಾಪ್ ಸ್ಥಾನದಲ್ಲಿದೆ ಚೆನ್ನೈ; ಇಂದಿನ ಪಂದ್ಯದ ಬಳಿಕ ಏನು ಬದಲಾವಣೆ ಆಗಬಹುದು?
ಅಂಕಪಟ್ಟಿಯ ಟಾಪ್ 3 ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಆಡಿರುವ 6 ಪಂದ್ಯದಲ್ಲಿ 5 ಆಟಗಳನ್ನು ಗೆದ್ದುಕೊಂಡಿವೆ. ಡೆಲ್ಲಿ ಕ್ಯಾಪಿಟಲ್ಸ್ 7 ಮ್ಯಾಚ್‌ಗಳ ಪೈಕಿ 5 ಪಂದ್ಯಗಳನ್ನು ತನ್ನ ವಶವಾಗಿಸಿದೆ.
ಐಪಿಎಲ್ 2021 ಆವೃತ್ತಿಯ ನಿನ್ನೆ ನಡೆದ ಎರಡು ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗಿವೆ. ನಿನ್ನೆಯ (ಏಪ್ರಿಲ್ 29) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಕಂಡಿದೆ. ರಾಜಸ್ಥಾನ್ ರಾಯಲ್ಸ್ ನಡುವಿನ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ಜಯಶಾಲಿಯಾಗಿದೆ. ಈ ಫಲಿತಾಂಶದ ಬಳಿಕ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರಗಳು ಬದಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಕಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿದೆ. ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ ಆರ್‌ಸಿಬಿ ತಂಡವಿದೆ.
ಅಂಕಪಟ್ಟಿಯ ಟಾಪ್ 3 ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಆಡಿರುವ 6 ಪಂದ್ಯದಲ್ಲಿ 5 ಆಟಗಳನ್ನು ಗೆದ್ದುಕೊಂಡಿವೆ. ಡೆಲ್ಲಿ ಕ್ಯಾಪಿಟಲ್ಸ್ 7 ಮ್ಯಾಚ್‌ಗಳ ಪೈಕಿ 5 ಪಂದ್ಯಗಳನ್ನು ತನ್ನ ವಶವಾಗಿಸಿದೆ. ಆರು ಪಂದ್ಯದಲ್ಲಿ ಮೂರು ಗೆದ್ಸು ಆರು ಅಂಕ ಹೊಂದಿರುವ ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ. 7ರಲ್ಲಿ 2 ಪಂದ್ಯ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 6ರಲ್ಲಿ 2 ಪಂದ್ಯ ಗೆದ್ದಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕ್ರಮವಾಗಿ 5, 6 ಮತ್ತು 7ನೇ ಸ್ಥಾನ ಪಡೆದುಕೊಂಡಿವೆ. ಆಡಿರುವ 6 ಪಂದ್ಯಗಳ ಪೈಕಿ ಕೇವಲ 1ನ್ನು ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.
ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೆಣೆಸಾಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲಿನಿಂದ ಮೂರನೇ ಸ್ಥಾನದಲ್ಲಿ ಇರುವ ಆರ್‌ಸಿಬಿ ಟೀಂ, ಕೊನೆಯಿಂದ ಮೂರನೇ ಸ್ಥಾನ ಹೊಂದಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಯುವ ಆಟಗಾರರನ್ನು ಹೊಂದಿರುವ ತಂಡಗಳ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದುನೋಡಬೇಕಿದೆ.
ಐಪಿಎಲ್ 2021 ಅಂಕಪಟ್ಟಿಯನ್ನು ಇಲ್ಲಿ ನೋಡಬಹುದು IPL 2021 Points Table
ಪೃಥ್ವಿ ಶಾ ಅವರ ಬಿರುಗಾಳಿಯ ಅರ್ಧಶತಕ (41 ಎಸೆತ 82 ರನ್) ದೆಹಲಿ ಕ್ಯಾಪಿಟಲ್ಸ್ ಐಪಿಎಲ್ 2021 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಲು ನೆರವಾಗಿತ್ತು. ಇದಕ್ಕಾಗಿ ಶಾ ಮತ್ತು ಶಿಖರ್ ಧವನ್ (46) ಮೊದಲ ವಿಕೆಟ್‌ಗೆ 132 ರನ್‌ಗಳ ದೊಡ್ಡ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಶಾ 39 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 82 ರನ್‌ಗಳಿಗೆ ಔಟಾದರು. ಇದಕ್ಕೂ ಮೊದಲು ಆಂಡ್ರೆ ರಸ್ಸೆಲ್ ಅವರ 27 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದ ಕೆಕೆಆರ್ ಅಗ್ರ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಚೇತರಿಸಿಕೊಂಡಿತ್ತು. ಇದರ ಫಲವಾಗಿ ಕೆಕೆಆರ್ ಆರು ವಿಕೆಟ್ಗಳಿಗೆ 154 ರನ್ ಗಳಿಸಿದ್ದರು. ರಸೆಲ್ ಹೊರತಾಗಿ, ಶುಬ್ಮನ್ ಗಿಲ್ 38 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ದೆಹಲಿ ಪರ ತಲಾ ಎರಡು ವಿಕೆಟ್ ಪಡೆದಿದ್ದರು. ಇದು ಏಳು ಪಂದ್ಯಗಳಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಐದನೇ ಗೆಲುವು. ಅದೇ ಸಮಯದಲ್ಲಿ, ಕೆಕೆಆರ್ ಏಳು ಪಂದ್ಯಗಳಲ್ಲಿ ಐದನೇ ಸೋಲನ್ನು ಅನುಭವಿಸಿತ್ತು.
ನಿನ್ನೆಯ ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 7 ವಿಕೆಟ್ಗಳಿಂದ ಸೋಲಿಸಿತ್ತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆದಿತ್ತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 6 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿತ್ತು. ಅದೇ ಸಮಯದಲ್ಲಿ, ರಾಜಸ್ಥಾನದ ನಾಲ್ಕನೇ ಸೋಲು ಇದಾಗಿತ್ತು. ಮುಂಬೈ ಎದುರು ರಾಜಸ್ಥಾನವು ಗೆಲುವಿಗೆ 172 ರನ್ ಗಳಿಸುವ ಗುರಿಯನ್ನು ಹೊಂದಿತ್ತು, ಡಿಕಾಕ್ ಅವರ ಅರ್ಧಶತಕದ ಸಹಾಯದಿಂದ ಮುಂಬೈ ಗೆಲುವಿನ ನಗೆ ಬೀರಿತ್ತು.
Published On - 4:34 pm, Fri, 30 April 21