ಭಾರತೀಯರಿಗಾಗಿ ಮಿಡಿದ ಕ್ರಿಕೆಟಿಗರ ಹೃದಯ! ಈ ಐಪಿಎಲ್​ನಲ್ಲಿ ನನ್ನ ಆಟಕ್ಕೆ ಸಿಗುವ ಅಷ್ಟೂ ಹಣವನ್ನು ಆಮ್ಲಜನಕ ಪೂರೈಕೆಗೆ ನೀಡುತ್ತಿದ್ದೇನೆ; ಧವನ್

ನಾನು ₹20ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ. ಹಾಗೇ ಈ ಐಪಿಎಲ್ ಸೀಸನ್ನಲ್ಲಿ ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಸಿಗುವ ಎಲ್ಲ ಹಣವನ್ನು, ಆಮ್ಲಜನಕ ಅವಶ್ಯಕತೆ ಪೂರೈಸಲು ನೀಡುತ್ತೇನೆ.

ಭಾರತೀಯರಿಗಾಗಿ ಮಿಡಿದ ಕ್ರಿಕೆಟಿಗರ ಹೃದಯ! ಈ ಐಪಿಎಲ್​ನಲ್ಲಿ ನನ್ನ ಆಟಕ್ಕೆ ಸಿಗುವ ಅಷ್ಟೂ ಹಣವನ್ನು ಆಮ್ಲಜನಕ ಪೂರೈಕೆಗೆ ನೀಡುತ್ತಿದ್ದೇನೆ; ಧವನ್
ಶಿಖರ್ ಧವನ್
Follow us
ಪೃಥ್ವಿಶಂಕರ
|

Updated on: May 01, 2021 | 2:50 PM

ಕೊರೊನಾ 2ನೇ ಅಲೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನೆರವಿನ ಮಹಾಪೂರವೇ ಹರಿದು ಬರ್ತಿದೆ. ಅಮೆರಿಕ್, ಬ್ರಿಟನ್, ರಷ್ಯಾ, ಸಿಂಗಾಪುರ ಸೇರಿದಂತೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಕೊರೊನಾ ಹೋರಾಟಕ್ಕೆ ಕೈ ಜೋಡಿಸಿವೆ. ಈ ಮಧ್ಯೆ ಐಪಿಎಲ್ನಲ್ಲಿ ಪಾಲ್ಗೊಂಡಿರುವ ಸ್ಟಾರ್ ಕ್ರಿಕೆಟಿಗರು ಮತ್ತು ಫ್ರಾಂಚೈಸಿಗಳು ಭಾರತದ ಕೊವಿಡ್ ಹೋರಾಟಕ್ಕೆ ನೆರವಿನ ಹಸ್ತ ಕೈ ಚಾಚಿದೆ.

ಭಾರತೀಯರಿಗಾಗಿ ಮಿಡಿದ ವಿಂಡೀಸ್ ಕ್ರಿಕೆಟಿಗನ ಹೃದಯ! ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಹೃದಯ, ಭಾರತೀಯರಿಯಾಗಿ ಮಿಡಿದಿದೆ. ನಾನು ಐಪಿಎಲ್ನಲ್ಲಿ ಸುರಕ್ಷಿತವಾಗಿದ್ದೇನೆ. ಆದ್ರೆ ಭಾರತದಲ್ಲಿ ಕೊರೊನಾ 2ನೇ ಅಲೆ ಪರಿಣಾಮ ಹೃದಯ ವಿದ್ರಾವಕವಾಗಿದೆ. ನಮಗೆ ಪ್ರೀತಿ ಮತ್ತು ಬೆಂಬಲ ನೀಡಿದ ದೇಶಕ್ಕೆ ನಾನು ನೆರವು ನೀಡುತ್ತಿದ್ದೇನೆ. ನನ್ನ ಐಪಿಎಲ್ ಸಂಬಳದ ಒಂದು ಭಾಗವನ್ನ ಭಾರತದ ಕೊರೊನಾ ಹೋರಾಟಕ್ಕೆ ನೀಡುತ್ತಿದ್ದೇನೆ ಎಂದಿದ್ದಾರೆ.

ನನ್ನ ಎಲ್ಲ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಹೇಳುವದೆನೆಂದರೆ, ನಾನು ಐಪಿಎಲ್‌ನಲ್ಲಿ ಸುರಕ್ಷಿತವಾಗಿದ್ದೇನೆ. ಆದರೆ ನಮ್ಮ ಸುತ್ತಲಿನ ದುರಂತಕ್ಕೆ ಹತ್ತಿರವಾಗುತ್ತಿರುವುದು ಹೃದಯ ವಿದ್ರಾವಕವಾಗಿದೆ. -ನಿಕೋಲಸ್ ಪೂರನ್, ಪಂಜಾಬ್ ಕ್ರಿಕೆಟಿಗ

ಸಂಭಾವನೆಯ ಶೇ.10ರಷ್ಟು ದಾನ ಮಾಡಿದ ಉನಾದ್ಕಟ್! ರಾಜಸ್ಥಾನ್ ರಾಯಲ್ಸ್ ತಂಡದ ಜಯದೇವ್ ಉನಾದ್ಕಟ್, ಅಗತ್ಯ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸಲು ತಮ್ಮ ಐಪಿಎಲ್ ಸಂಬಳದ ಶೇಕಡಾ 10% ರಷ್ಟು ಹಣವನ್ನು ನೀಡಿದ್ದಾರೆ..

ದಯವಿಟ್ಟು ನೀವು ಯಾವಾಗಲಾದ್ರೂ ಲಸಿಕೆ ಹಾಕಿಸಿಕೊಂಡು ಎಚ್ಚರವಾಗಿರಿ. ಎಲ್ಲರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಜಯಿಸಬೇಕಿದೆ. -ಜಯದೇವ್ ಉನಾದ್ಕಟ್, ರಾಜಸ್ಥಾನ್ ರಾಯಲ್ಸ್ ಆಟಗಾರ

ಕೊವಿಡ್ ಹೋರಾಟಕ್ಕೆ ಕೈ ಜೋಡಿಸಿದ ರಾಜಸ್ಥಾನ್ ಫ್ರಾಂಚೈಸಿ! ಕೊವಿಡ್ ವಿರುದ್ಧದ ಹೋರಾಟಕ್ಕೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಭಾರಿ ಮೊತ್ತದ ನೆರವು ನೀಡಿದೆ. ದೇಶದಲ್ಲಿ ಆಮ್ಲಜನ ಸಮಸ್ಯೆ ಉಂಟಾಗಿದ್ದು, ಆಮ್ಲಜನಕ ಪೂರೈಕೆಗಾಗಿ ₹7.5ಕೋಟಿ ರೂಪಾಯಿ ನೀಡಿದೆ.

₹20 ಲಕ್ಷ ರೂಪಾಯಿ ನೆರವು ನೀಡಿದ ಶಿಖರ್ ಧವನ್! ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್, ₹20 ಲಕ್ಷ ರೂಪಾಯಿಗಳನ್ನ ನೀಡಿದ್ದಾರೆ.

ನಾನು ₹20 ಲಕ್ಷ ನೀಡುತ್ತಿದ್ದೇನೆ. ನಾನು ₹20ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ. ಹಾಗೇ ಈ ಐಪಿಎಲ್ ಸೀಸನ್ನಲ್ಲಿ ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಸಿಗುವ ಎಲ್ಲ ಹಣವನ್ನು, ಆಮ್ಲಜನಕ ಅವಶ್ಯಕತೆ ಪೂರೈಸಲು ನೀಡುತ್ತೇನೆ. ಶಿಖರ್ ಧವನ್, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ

ಒಂದೂವರೆ ಕೋಟಿ ರೂಪಾಯಿ ನೆರವು ನೀಡಿದ ಡೆಲ್ಲಿ ಫ್ರಾಂಚೈಸಿ! ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನ ಪೂರೈಸಲು ಒಂದೂವರೆ ಕೋಟಿ ರೂಪಾಯಿ ಸಹಾಯ ಹಸ್ತ ನೀಡಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ ಸಹಾಯ ಮಾಡುವುದು ಸ್ಫೂರ್ತಿ ನೀಡಲಿದೆ. ಹೀಗಾಗಿ ಆಮ್ಲಜನ ಸಿಲಿಂಡರ್ಗಳು, ಕಿಟ್ಗಳು ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳಿಗೆ ನಾವು ನೆರವು ನೀಡುತ್ತೇವೆ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ.

ಬೆಂಚ್ ಕಾದ್ರೂ 90 ಸಾವಿರ ರೂಪಾಯಿ ನೀಡಿದ ಗೋಸ್ವಾಮಿ! ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಶ್ರೀವತ್ಸಾ ಗೋಸ್ವಾಮಿ, ಈ ಸೀಸನ್ನಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ. ಹಾಗಿದ್ರೂ ಗೋಸ್ವಾಮಿ ₹90 ಸಾವಿರ ರೂಪಾಯಿಗಳನ್ನ ನೀಡುವ ಮೂಲಕ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

₹3 ಲಕ್ಷ ನೆರವು ನೀಡಿದ ಆಸ್ಟ್ರೇಲಿಯನ್ ಕ್ರಿಕೆಟ್ ಮೀಡಿಯಾ! ಇನ್ನು ಅನೇಕ ದೇಶಗಳಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಮೀಡಿಯಾ ಅಸೋಸಿಯೇಷನ್ ಕೂಡ, ಭಾರತದ ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದೆ. ಆಸ್ಟ್ರೇಲಿಯನ್ ಕ್ರಿಕೆಟ್ ಮೀಡಿಯಾ ಅಸೋಷಿಯೇಷನ್ ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ 4,200 ಡಾಲರ್ ಹಣವನ್ನ ದೇಣಿಗೆ ನೀಡಿದೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 3 ಲಕ್ಷ 11 ಸಾವಿರ ರೂಪಾಯಿ ನೀಡಿದೆ.

₹1 ಕೊಟಿ ರೂಪಾಯಿ ನೀಡಿದ ಸವ್ಯಸಾಚಿ ಸಚಿನ್! ದೇಶಾದ್ಯಂತ ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಪೂರೈಸಲು ದುಡಿಯುತ್ತಿರುವ ಮಿಷನ್‌ ಆಕ್ಸಿಜನ್‌ಗೆ ಒಂದು ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹೃದಯವಂತಿಕೆ ಮೆರೆದಿದ್ದಾರೆ. ನಮ್ಮ ಪ್ರಯತ್ನವು ಶೀಘ್ರದಲ್ಲೇ ಭಾರತದಾದ್ಯಂತ ಇನ್ನೂ ಅನೇಕ ಆಸ್ಪತ್ರೆಗಳಿಗೆ ತಲುಪುತ್ತದೆ ಎಂದು ಭಾವಿಸುತ್ತೇನೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ಎಲ್ಲರ ಹಿಂದೆ ನಾವು ಒಟ್ಟಾಗಿ ಇಂದು ನಿಲ್ಲಬೇಕು ಎಂದು ಸಚಿನ್ ತಿಳಿಸಿದ್ದಾರೆ.

ಇದಕ್ಕು ಮುನ್ನ ಕೆಕೆಆರ್ ತಂಡದಲ್ಲಿರುವ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್, ಪಿಎಮ್ ಫಂಡ್ಗೆ 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ರೆ, ನಂತರ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ತಮ್ಮ ಬಿಟ್ ಕಾಯಿನ್ ದಾನ ಮಾಡಿದ್ರು. ಒಂದು ಬಿಟ್ ಕಾಯಿನ್ ಬೆಲೆ ಬರೋಬ್ಬರಿ 41 ಲಕ್ಷ ರೂಪಾಯಿ. ಕೊರೊನಾ ಕೋಲಾಹಲದ ಮಧ್ಯೆ ಐಪಿಎಲ್ ನಡೆಯುತ್ತಿದ್ರೂ, ಕ್ರಿಕೆಟಿಗರು ಕೊರೊನಾ ಬಿಕ್ಕಟ್ಟಿಗೆ ನೆರವು ನೀಡೋ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.