ಬೆಂಗಳೂರು: ಕೇಂದ್ರ ಸರ್ಕಾರವು ಡಿಸಿಜಿಐ ಲಸಿಕೆಯನ್ನು ತುರ್ತು ಬಳಕೆ ಮಾಡಲು ಒಪ್ಪಿಗೆ ನೀಡಿದೆ. ಇದಾದ ಬೆನ್ನಲ್ಲೇ ಲಸಿಕೆಯನ್ನು ಜನರಿಗೆ ನೀಡಲು ಬೇಕಾದ ಎಲ್ಲ ಸಿದ್ಧತೆಗಳನ್ನು ಸರ್ಕಾರ ನಡೆಸಿದೆ. ಲಸಿಕೆಯನ್ನು ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಕಳುಹಿಸಿದೆ.
ದೇಶದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಒಪ್ಪಿಗೆ ಸಿಗುತ್ತಿದ್ದಂತೆ, ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಇಂದು ಎಲ್ಲ ರಾಜ್ಯಗಳಿಗೂ ಲಸಿಕೆ ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಕೇಂದ್ರದ ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳ ವಿವರ ಇಲ್ಲಿದೆ.
ಮಾರ್ಗಸೂಚಿಯಲ್ಲೇನಿದೆ?
ಆದ್ಯತೆಯ ಜನವರ್ಗಕ್ಕೆ ಮೊದಲಿಗೆ ಲಸಿಕೆ ನೀಡಬೇಕು ಎಂದು ಸರ್ಕಾರ ಹೇಳಿದೆ. ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ನರ್ಸ್ಗಳಿಗೆ ಮೊದಲಿಗೆ ಲಸಿಗೆ ನೀಡಬೇಕು. ಬಳಿಕ ಅಗತ್ಯ ಸೇವೆ ನೀಡುವವರಿಗೆ, 50 ವರ್ಷ ಮೇಲ್ಪಟ್ಟವರಿಗೆ ಹಾಗೂ ನಾಲ್ಕನೆಯದಾಗಿ 50 ವರ್ಷ ಕೆಳಗಿದ್ದು ಸೋಂಕಿನಿಂದ ಗಂಭೀರವಾದವರಿಗೆ ಲಸಿಕೆ ನೀಡಬೇಕು ಎಂದು ಸರ್ಕಾರ ಹೇಳಿದೆ.
ಪ್ರತಿಯೊಂದು ಕೇಂದ್ರದಲ್ಲಿ 100 ರಿಂದ 200 ಜನರಿಗೆ ಮಾತ್ರ ಲಸಿಕೆ ನೀಡಬೇಕು. ಲಸಿಕೆ ನೀಡಿದ ಬಳಿಕ ಪ್ರತಿಕೂಲ ಪರಿಣಾಮ ಆಗುತ್ತೆಯೇ ಎಂದು ತಿಳಿಯಲು ಆ ವ್ಯಕ್ತಿಗಳನ್ನು 30 ನಿಮಿಷಗಳ ಕಾಲ ಮಾನಿಟರ್ ಮಾಡಬೇಕು. ಲಸಿಕೆ ನೀಡುವವರ ತಂಡದಲ್ಲಿ 5 ಜನರಿರುತ್ತಾರೆ. ಲಸಿಕೆ ನೀಡುವ ಸ್ಥಳದಲ್ಲಿ ಓಡಾಟಕ್ಕೆ ವಾಹನ ವ್ಯವಸ್ಥೆ, ಜನರ ನಿಗಾ ಕೊಠಡಿ, ನಿರೀಕ್ಷಣಾ ಕೊಠಡಿ ಸೇರಿದಂತೆ ಸೌಲಭ್ಯ ಇದ್ದರೆ 200 ಜನರಿಗೆ ಲಸಿಕೆ ನೀಡಬಹುದು ಎಂದು ಸರ್ಕಾರ ತಿಳಿಸಿದೆ.
ಆನ್ಲೈನ್ ಮೂಲಕ ನೋಂದಣಿ ಸಾಧ್ಯ
ಕೋವಿಡ್ ಆನ್ಲೈನ್ ಫ್ಲಾಟ್ಫಾರ್ಮ್ನಲ್ಲಿ ಜನರು ತಾವಾಗಿಯೇ ರಿಜಿಸ್ಟರ್ ಮಾಡಿಕೊಳ್ಳಲು ಮತದಾನ ಚೀಟಿ, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 12 ಪೋಟೋ ಐಡಿ ಕಾರ್ಡ್ ಬಳಸಬಹುದು. ಕೊರೊನಾ ಲಸಿಕೆ ನೀಡುವ ಸ್ಥಳದಲ್ಲಿ ಈ ಮೊದಲೇ ನೋಂದಣಿ ಮಾಡಿಸಿರುವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ವ್ಯಾಕ್ಸಿನ್ ಸಾಗಾಟ ಸಾಮಗ್ರಿಗಳು, ಐಸ್ ಪ್ಯಾಕ್ ಗಳ ಮೇಲೆ ಸೂರ್ಯನ ಕಿರಣ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ಕಂಪನಿಯ ಲಸಿಕೆಯ ಪ್ರತಿ ಡೋಸ್ ಗೆ 2,700 ರೂಪಾಯಿ ವೆಚ್ಚವಾಗಲಿದೆ. 138 ಕೋಟಿ ಜನರಿರುವ ಭಾರತದಲ್ಲಿ ಪ್ರತಿ ಡೋಸ್ ಅನ್ನು 2,700 ರೂಪಾಯಿಗೆ ಖರೀದಿಸುವುದು ದುಬಾರಿಯಾಗಲಿದೆ . ಆಕ್ಸ್ ಫರ್ಡ್ ವಿವಿ-ಅಸ್ಟ್ರಾಜನಿಕ್ ಕಂಪನಿಯ ಕೋವಿಶೀಲ್ಡ್ ಲಸಿಕೆಯು ಪ್ರತಿ ಡೋಸ್ ಗೆ 250 ರೂಪಾಯಿಗೆ ಸಿಗಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಕೋವಿಶೀಲ್ಡ್ ಲಸಿಕೆ ಖರೀದಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
– ಚಂದ್ರ ಮೋಹನ್
ಅಗತ್ಯ ಸೇವಕರು, ವಯಸ್ಸಾದವರಿಗೆ ಮೊದಲು ಕೊರೊನಾ ವೈರಸ್ ಲಸಿಕೆ- ಪ್ರಧಾನಿ ಮೋದಿ
Published On - 8:09 pm, Mon, 14 December 20