ದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂದು ಬಹುತೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಕೊರೊನಾ ಲಸಿಕೆಯ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಕೊರೊನಾ ಲಸಿಕೆಯನ್ನು ಹೇಗೆ ವಿತರಣೆ ಮಾಡಬೇಕು, ಯಾರಿಗೆ ಮೊದಲು ನೀಡಬೇಕು ಎಂಬಿತ್ಯಾದಿ ವಿವರಗಳನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಒಟ್ಟು 119 ಪುಟಗಳಿದ್ದು ಇದರಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆಯ ತನಕ ಲಸಿಕೆ ನೀಡಲು ತಿಳಿಸಲಾಗಿದ್ದು, ಮೊದಲ ಹಂತದಲ್ಲಿ ಆಯ್ದ ವರ್ಗಕ್ಕೆ ಮಾತ್ರ ಕೊರೊನಾ ಲಸಿಕೆ ಸಿಗಲಿದೆ.
ಆದ್ಯತೆಯ ಜನವರ್ಗಕ್ಕೆ ಮೊದಲು ಲಸಿಕೆ ನೀಡಲು ಉದ್ದೇಶಿಸಿರುವ ಕೇಂದ್ರ ಸರ್ಕಾರ ಆದ್ಯತೆಯ ವರ್ಗ ಯಾರು ಎಂಬುದನ್ನೂ ತಿಳಿಸಿದೆ. ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೊವಿಡ್ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್ಗೆ ಎಲ್ಲರಿಗಿಂತ ಮೊದಲು ಲಸಿಕೆ ನೀಡಲು ತಿಳಿಸಲಾಗಿದೆ. ನಂತರ ಫ್ರಂಟ್ಲೈನ್ ವಾರಿಯರ್ಸ್ಗೆ ಲಸಿಕೆ ಸಿಗಲಿದೆ.
ಮೂರನೆಯ ಸಾಲಿನಲ್ಲಿ 50 ವರ್ಷ ಮೇಲ್ಪಟ್ಟವರಿಗೆ, ರೋಗದಿಂದ ಬಳಲುತ್ತಿರುವ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಅಂತೆಯೇ 50 ವರ್ಷದಿಂದ ಕೆಳಗಿನವರು ಆಮೇಲೆ ಕೊರೊನಾ ಲಸಿಕೆ ಪಡೆಯಲಿದ್ದಾರೆ. ಈ ಮೇಲಿನ ನಾಲ್ಕು ವರ್ಗದ ಒಟ್ಟು 30 ಕೋಟಿ ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಬ್ಬರಿಗೆ ತಲಾ 2 ಡೋಸ್ ಎಂದರೂ 30 ಕೋಟಿ ಜನರಿಗೆ 60 ಕೋಟಿ ಡೋಸ್ ಕೊರೊನಾ ಲಸಿಕೆ ಬೇಕಾಗುತ್ತದೆ.
ರಷ್ಯಾದ ಸ್ಪುಟ್ನಿಕ್ V ಲಸಿಕೆ ಪೂರೈಕೆಗೆ ಭಾರತ ನೀಡಿದ್ದ ಆರ್ಡರ್ ರದ್ದು