2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಕಮಲ್ ಹಾಸನ್

ನಾನು ಮುಂಬರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ. ಎಲ್ಲಿ ಸ್ಪರ್ಧಿಸುತ್ತೇನೆ ಎಂಬುದನ್ನು ಆಮೇಲೆ ಹೇಳುವೆ ಎಂದಿದ್ದಾರೆ ಕಮಲ್ ಹಾಸನ್

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಕಮಲ್ ಹಾಸನ್
ಕಮಲ್ ಹಾಸನ್
Rashmi Kallakatta

|

Dec 14, 2020 | 7:38 PM

ಚೆನ್ನೈ: 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದ ನಟ ಕಮಲ್ ಹಾನಸ್ 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ನಾನು ಮುಂಬರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ. ಎಲ್ಲಿ ಸ್ಪರ್ಧಿಸುತ್ತೇನೆ ಎಂಬುದನ್ನು ಆಮೇಲೆ ಹೇಳುವೆ ಎಂದಿದ್ದಾರೆ. ಕಮಲ್ ಹಾಸನ್ ಅವರ ಪಕ್ಷ ‘ಮಕ್ಕಳ್ ನೀತಿ ಮೈಯಂ’ (ಎಂಎನ್ಎಂ) 2019ರ ಚುನಾವಣೆಯಲ್ಲಿ 38 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಉಪ ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ನಗರ ಪ್ರದೇಶಗಳಲ್ಲಿ ಎಂಎನ್ಎಂ ಪಕ್ಷಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಕಮಲ್ ಹಾಸನ್ ಚೆನ್ನೈಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜನವರಿಯಲ್ಲಿ ರಜನಿಕಾಂತ್ ರಾಜಕೀಯ ಪಕ್ಷವೊಂದನ್ನು ಆರಂಭಿಸುವ ಸಾಧ್ಯತೆ ಇದೆ. ಹೀಗಿರುವಾಗ ರಜನೀಕಾಂತ್ ಅವರ ಪಕ್ಷದೊಂದಿಗೆ ನೀವು ಮೈತ್ರಿ ಮಾಡಿಕೊಳ್ಳುತ್ತಿದ್ದೀರಾ ಎಂದು ಕಮಲ್ ಅವರಲ್ಲಿ ಕೇಳಿದಾಗ ಮೈತ್ರಿ ಮಾಡಲು ಸಮಯ ಬರಬೇಕು. ಡಿಸೆಂಬರ್ 31ರಂ ನಂತರವೇ ಈ ಪ್ರಶ್ನೆಗೆ ಉತ್ತರಿಸುವುದು ಸೂಕ್ತ ಎಂದಿದ್ದಾರೆ.

ಈಗೇಕೆ ಬೇಕಿತ್ತು ಹೊಸ ಸಂಸತ್ತು: ಮೋದಿ ವಿರುದ್ಧ ಕಮಲ್ ಹಾಸನ್ ಆಕ್ರೋಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada