ಅನ್ನದಾತರ ಶ್ರೇಯೋಭಿವೃದ್ಧಿಯೇ ಕೇಂದ್ರ ಸರ್ಕಾರದ ಗುರಿ: ನರೇಂದ್ರ ಸಿಂಗ್ ತೋಮರ್ ಪ್ರತಿಪಾದನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 6:23 PM

ರೈತರ ಹಿತಕ್ಕಾಗಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಪುನರುಚ್ಛಿಸಿದರು. ದೆಹಲಿ ಚಲೋ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾತಿನ ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರ ಕೃಷಿಕರ ಪರವಾಗಿದೆ ಎಂದು ಸಮರ್ಥಿಸಿಕೊಂಡರು.

ಅನ್ನದಾತರ ಶ್ರೇಯೋಭಿವೃದ್ಧಿಯೇ ಕೇಂದ್ರ ಸರ್ಕಾರದ ಗುರಿ: ನರೇಂದ್ರ ಸಿಂಗ್ ತೋಮರ್ ಪ್ರತಿಪಾದನೆ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
Follow us on

ದೆಹಲಿ: ರೈತರ ಹಿತಕ್ಕಾಗಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಪುನರುಚ್ಛಿಸಿದರು.

ದೆಹಲಿ ಚಲೋ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾತಿನ ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರ ಕೃಷಿಕರ ಪರವಾಗಿದೆ ಎಂದು ಸಮರ್ಥಿಸಿಕೊಂಡರು. ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಇಡೀ ದೇಶವೇ ಸ್ವಾಗತಿಸಿದೆ. ರೈತರ ಜೊತೆ ಚರ್ಚಿಸಿಯೇ ತಿದ್ದುಪಡಿ ತರುತ್ತೇವೆ. ಈಗಿರುವ APMC, MSP ವ್ಯವಸ್ಥೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದರು. 2006ರ ಸ್ವಾಮಿನಾಥನ್ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಜಾರಿಗೊಳಿಸಿರಲಿಲ್ಲ. ಆದರೆ, ಪ್ರಧಾನಿ ಮೋದಿ ಈ ವರದಿಯನ್ನು ಅನುಷ್ಠಾನಕ್ಕೆ ತಂದರು ಎಂದು ನರೇಂದ್ರ ಸಿಂಗ್ ತೋಮರ್ ವಿವರಿಸಿದರು.

ಕೃಷಿ ಕಾನೂನಿನ ಕುರಿತು ಚರ್ಚಿಸುವಾಗ ಕೆಲವರು ಕೇಂದ್ರ ಸರ್ಕಾರವು ವಿನಾಕಾರಣ ಕೃಷಿ ಕ್ಷೇತ್ರದಲ್ಲಿ ಮೂಗು ತೂರಿಸಿದೆ ಎಂದಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ತೋಮರ್, ಕೇಂದ್ರ ಸರ್ಕಾರಕ್ಕೆ ಕೃಷಿ ಕ್ಷೇತ್ರದಲ್ಲಿ ಕಾನೂನು ತರುವ ಹಕ್ಕಿದೆ ಎಂದು ಪ್ರತಿಪಾದಿಸಿದರು.

ನೂತನ ಕೃಷಿ ಕಾಯ್ದೆಗಳು ಕೇವಲ ರೈತ ಮತ್ತು ವ್ಯಾಪಾರಿಗಳ ವ್ಯವಹಾರಕ್ಕೆ ಸಂಬಂಧಿಸಿದೆ. ರೈತರ ಕೃಷಿ ಭೂಮಿಯನ್ನು ಗುತ್ತಿಗೆ ಅಥವಾ ಭೋಗ್ಯಕ್ಕೆ ಪಡೆಯಲು ಅವಕಾಶ ನೀಡಿಲ್ಲ. ಅಲ್ಲದೇ, ಈಗಿನ APMC ಮತ್ತು MSPಗಳಿಗೆ ಈ ಕಾಯ್ದೆಗಳಿಂದ ಕಿಂಚಿತ್ ದುಷ್ಪರಿಣಾಮವೂ ಇಲ್ಲ ಎಂದು ಎಂದು ಪ್ರತಿಪಾದಿಸಿದರು.

ಗಡುವು ವಿಧಿಸಿದ ರೈತರು
ಇತ್ತ ಕೇಂದ್ರ ಕೃಷಿ ಸಚಿವರ ಪತ್ರಿಕಾಗೋಷ್ಠಿಯ ವಿವರಗಳನ್ನು ತಳ್ಳಿಹಾಕಿರುವ ರೈತ ನಾಯಕರು ಕೇಂದ್ರ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ. ನಾಳೆ ಸಂಜೆಯೊಳಗಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ರಾಷ್ಟ್ರಾದ್ಯಂತ ಹೆದ್ದಾರಿ, ರೈಲು ತಡೆ ಚಳವಳಿ ನಡೆಸುವುದಾಗಿ ಸಂಯುಕ್ತ ಕಿಸಾನ್ ಮಂಚ್​ ಸಂಘಟನೆ ತಿಳಿಸಿದೆ.

ಭಾರತೀಯ ಕಿಸಾನ್ ಯೂನಿಯನ್​ನ ಬಲ್ಬೀರ್ ಸಿಂಗ್ ರಾಜೇವಾಲ್, ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆಗಳನ್ನು ತರುವ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ.