Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ

ಟ್ವಿಟರ್​ನಲ್ಲಿ #SoniaGandhi ಟ್ರೆಂಡ್ ಆದ ದಿನವೇ 'ಅಂತರರಾಷ್ಟ್ರೀಯ ಬಾರ್ ಡ್ಯಾನ್ಸರ್ ದಿನ'  (#अंतरराष्ट्रीय_बार_डांसर_दिवस) ಮತ್ತು ಬಾರ್ ಡ್ಯಾನ್ಸರ್ (#BarDancer) ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು.

Fact Check | ಸೋನಿಯಾಗಾಂಧಿ 'ಬಾರ್ ಡ್ಯಾನ್ಸರ್'‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ
ಟ್ವೀಟ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 8:38 PM

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 9ರಂದು ತಮ್ಮ 74ನೇ ಹುಟ್ಟುಹಬ್ಬ ಆಚರಿಸಿಕೊಂಡಿರು. ಹಲವಾರು ರಾಜಕಾರಣಿಗಳು ಟ್ವಿಟರ್​ನಲ್ಲಿ ಸೋನಿಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಟ್ವಿಟರ್​ನಲ್ಲಿ #SoniaGandhi ಟ್ರೆಂಡ್ ಆದ ದಿನವೇ ‘ಅಂತರರಾಷ್ಟ್ರೀಯ ಬಾರ್ ಡ್ಯಾನ್ಸರ್ ದಿನ’  (#अंतरराष्ट्रीय_बार_डांसर_दिवस) ಮತ್ತು ಬಾರ್ ಡ್ಯಾನ್ಸರ್ (#BarDancer) ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು.

ಬ್ರಾಂಡ್ ವ್ರೈ ಎಂಬ ಟ್ವಿಟರ್ ಹ್ಯಾಂಡಲ್​ನಲ್ಲಿ #BarDancerDay ಎಂಬ ಹ್ಯಾಷ್​ಟ್ಯಾಗ್ ಬಳಸಿ ಹಾಲಿವುಡ್ ನಟಿಯೊಬ್ಬರ ಫೋಟೊವನ್ನು ಟ್ವೀಟಿಸಲಾಗಿತ್ತು. ಈ ಟ್ವೀಟ್ 900ಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿತ್ತು. ಹಲವಾರು ಟ್ವೀಟಿಗರು ಕನಿಷ್ಠ ಬಟ್ಟೆ ತೊಟ್ಟ ಹಾಲಿವುಡ್ ನಟಿಯರ ಫೋಟೋ ಶೇರ್ ಮಾಡಿ ಸೋನಿಯಾಗಾಂಧಿ ಹುಟ್ಟುಹಬ್ಬದ ದಿನ ಮತ್ತು ಬಾರ್ ಡ್ಯಾನ್ಸರ್ ಹ್ಯಾಷ್​ಟ್ಯಾ​ಗ್ ಟ್ರೆಂಡ್ ಮಾಡಿದ್ದ್ದರು.

ಸೋನಿಯಾಗಾಂಧಿ ವಿರುದ್ಧ ಈ ರೀತಿ ಸ್ತ್ರೀವಿರೋಧಿ ಟ್ವೀಟ್ ದಾಳಿಯಾಗಿದ್ದು ಇದು ಮೊದಲೇನೂ ಅಲ್ಲ. 2019 ಮಾರ್ಚ್ ತಿಂಗಳಲ್ಲಿ ನಟಿ ಮರ್ಲಿನ್ ಮನ್ರೊ ಚಿತ್ರವನ್ನು ತಿರುಚಿ ಸೋನಿಯಾಗಾಂಧಿ ಮುಖವನ್ನು ಎಡಿಟ್ ಮಾಡಿರುವ ಚಿತ್ರ ಹರಿದಾಡಿತ್ತು.

@doctorrichabjp ಎಂಬ ಟ್ವಿಟರ್ ಹ್ಯಾಂಡಲ್​ನಲ್ಲಿ ಸೋನಿಯಾ ಗಾಂಧಿ ಜತೆ ಕೆಲವು  ಫೋಟೊಗಳನ್ನು ಶೇರ್ ಮಾಡಲಾಗಿದೆ. ಈ ಫೋಟೊಗಳ ಪೈಕಿ ಮಧ್ಯೆ ಇರುವ ಫೋಟೊ ಸ್ವಿಸ್ ನಟಿ ಉರ್ಸುಲಾ ಆಂಡ್ರೆಸ್ ಅವರದ್ದಾಗಿದೆ. 1962ರ ಜೇಮ್ಸ್ ಬಾಂಡ್ ನಟನೆಯ ಸಿನಿಮಾದ  ಫೋಟೊ ಇದಾಗಿದ್ದು ಇಂಟರ್ನೆಟ್ ಮೂವೀಸ್ ಡೇಟಾಬೇಸ್​ನಲ್ಲಿ ಇದು ಲಭ್ಯವಿದೆ ಎಂದು ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಆಲ್ಟ್ ನ್ಯೂಸ್ ವರದಿ ಮಾಡಿದೆ.

ಮೇಲಿನ ಟ್ವೀಟ್​ನಲ್ಲಿರುವ ಇನ್ನೊಂದು ಫೋಟೊ ಕೂಡಾ ಆ್ಯಂಡ್ರೆಸ್ ಅವರದ್ದಾಗಿದ್ದು, ರಷ್ಯಾ ಮೂಲದ ಸೆಲೆಬ್ರಿಟಿ ವೆಬ್ ಲೈಟ್ ದಿ ಪ್ಲೇಸ್ ನಲ್ಲಿ ಈ ಫೋಟೊ ಇದೆ. ಕೆಳಗೆ ಇರುವ ಫೋಟೊ ಮರ್ಲಿನ್ ಮನ್ರೊ ಅವರ ತಿರುಚಿದ ಫೋಟೊ ಆಗಿದೆ.

Fact Check: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಯೇ ಶಾಹೀನ್‌ ಬಾಗ್ ದಾದಿ? ವೈರಲ್ ಫೋಟೊ ಯಾರದ್ದು?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ