ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಮನೆ ಮೇಲೆ ದಾಳಿ; ಬಿಜೆಪಿ ಕೈವಾಡ ಎಂದ ಆಪ್​!

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, 6 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಮನೆ ಮೇಲೆ ದಾಳಿ; ಬಿಜೆಪಿ ಕೈವಾಡ ಎಂದ ಆಪ್​!
ಮನೀಷ್​ ಸಿಸೋಡಿಯಾ (ಸಂಗ್ರಹ ಚಿತ್ರ)
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 10, 2020 | 8:54 PM

ದೆಹಲಿ: ಆಪ್​ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಮನೆಯ ಮೇಲೆ ಇಂದು ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ.

ದುಷ್ಕರ್ಮಿಗಳು ದಾಳಿ ನಡೆಸುವಾಗ ಮನೀಷ್​ ಸಿಸೋಡಿಯಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈ ದಾಳಿಯನ್ನು ಬಿಜೆಪಿಯವರೇ ಮಾಡಿದ್ದಾರೆ ಎನ್ನುವ ಆರೋಪ ಮಾಡಿರುವ ಅರವಿಂದ್ ಕೇಜ್ರಿವಾಲ್​, ಇದಕ್ಕೆ ದೆಹಲಿ ಪೊಲೀಸರ ಕುಮ್ಮಕ್ಕು ಕೂಡ ಇದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅರವಿಂದ್ ಕೇಜ್ರಿವಾಲ್​, ಮನೀಷ್​ ಸಿಸೋಡಿಯಾ ಇಲ್ಲದಿರುವಾಗ ಗೂಂಡಾಗಳು ಮನೆಗೆ ಪ್ರವೇಶಿಸಿದ್ದಾರೆ. ಅಲ್ಲಿ ಪೊಲೀಸರು ಕೂಡ ಇದ್ದರು. ದೆಹಲಿಯಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಏಕೆ ಹತಾಶವಾಗುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬಹುತೇಕ ಆಪ್​ ನಾಯಕರು ಇದೇ ಮಾದರಿಯ ಆರೋಪ ಮಾಡಿದ್ದಾರೆ. ಈ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆಪ್​ ವಕ್ತಾರ ಸೌರಭ್​ ಭಾರದ್ವಾಜ್​, ಸಿಸೋಡಿಯಾ ಮನೆಗೆ ಬಿಜೆಪಿ ಕಾರ್ಯಕರ್ತರು ಪ್ರವೇಶಿಸುವುದನ್ನು ಪೊಲೀಸರು ತಡೆದಿಲ್ಲ. ಬ್ಯಾರಿಕೇಡ್​ಗಳನ್ನು ಪೊಲೀಸರೇ ತೆಗೆದು ಹಾಕಿದ್ದರು ಎನ್ನುವ ಆರೋಪ ಹೊರಿಸಿದ್ದಾರೆ.

6 ಜನರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, 6 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.  ದೆಹಲಿ ಪೊಲೀಸರು ಬಿಜೆಪಿ ಕೈಗೊಂಬೆ ಎಂದು ಆಪ್​ ಸರ್ಕಾರ ಈ ಮೊದಲಿನಿಂದಲೂ ಆರೋಪಿಸುತ್ತಲೇ ಬರುತ್ತಿದೆ. ಇದೇ ಆರೋಪವನ್ನು ಇಂದು ಕೂಡ ಮುಂದುವರಿಸಿದೆ. ಆದರೆ, ಇದು ಸುಳ್ಳು ಎಂದು ದೆಹಲಿ ಪೊಲೀಸ್​ ಸ್ಪಷ್ಟನೆ ನೀಡಿದೆ.

ದೆಹಲಿಯಲ್ಲಿ ಐದು ಶಂಕಿತ ಉಗ್ರರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ, ತಪ್ಪಿದ ದುರಂತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada