ಸಕ್ಕರೆ ಅಕ್ರಮ ದಾಸ್ತಾನು ತಡೆಗೆ ಕೇಂದ್ರ ಕ್ರಮ: 15 ದಿನಕ್ಕಿಂತ ಹೆಚ್ಚು ಸ್ಟಾಕ್ ಇಡುವಂತಿಲ್ಲ; ಜೋಶಿ ಸೂಚನೆ

ಕೇಂದ್ರ ಸರ್ಕಾರ ಸಕ್ಕರೆ ದಾಸ್ತಾನು ಮತ್ತು ಸಂಗ್ರಹಣೆ ಮಾನದಂಡಗಳನ್ನು ಪರಿಷ್ಕರಿಸಿದೆ. ಇನ್ನು ಮುಂದೆ ವ್ಯಾಪಾರಿಗಳು 15 ದಿನಗಳಿಗಿಂತ ಹೆಚ್ಚು ಅವಧಿ ಮತ್ತು 1000 ಕ್ವಿಂಟಾಲ್‌ಗಿಂತ ಹೆಚ್ಚು ಸಕ್ಕರೆಯನ್ನು ದಾಸ್ತಾನು ಮಾಡುವಂತಿಲ್ಲ. ಈ ಕುರಿತಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್​ ಜೋಶಿ ಸೂಚನೆ ನೀಡಿದ್ದಾರೆ.

ಸಕ್ಕರೆ ಅಕ್ರಮ ದಾಸ್ತಾನು ತಡೆಗೆ ಕೇಂದ್ರ ಕ್ರಮ: 15 ದಿನಕ್ಕಿಂತ ಹೆಚ್ಚು ಸ್ಟಾಕ್ ಇಡುವಂತಿಲ್ಲ; ಜೋಶಿ ಸೂಚನೆ
ಪ್ರಲ್ಹಾದ್​ ಜೋಶಿ
Image Credit source: tv9 kannada
Edited By:

Updated on: Oct 01, 2026 | 9:11 PM

ನವದೆಹಲಿ, ಅಕ್ಟೋಬರ್​​ 01: ಗ್ರಾಹಕರಿಗೆ ಸಕ್ಕರೆ ಸುಗಮವಾಗಿ ಲಭ್ಯವಾಗುವಂತೆ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಕ್ಕರೆ ದಾಸ್ತಾನು ಹಾಗೂ ಸಂಗ್ರಹಣೆ ಮಾನದಂಡಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ವ್ಯಾಪಾರಿಗಳು ಗರಿಷ್ಠ 15 ದಿನಗಳ ಅವಧಿಗೆ ಮಾತ್ರ 1,000 ಕ್ವಿಂಟಾಲ್ ದಾಸ್ತಾನು ಇಟ್ಟುಕೊಳ್ಳಲು ಮಿತಿ ವಿಧಿಸಲಾಗಿದೆ. ಈ ಕುರಿತಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್​​ ಜೋಶಿ ಸೂಚನೆ ನೀಡಿದ್ದಾರೆ.

ದಾಸ್ತಾನು ಮಿತಿ ಮತ್ತು ನಿಯಮಗಳ ವಿವರ

  • ದಾಸ್ತಾನು ಪ್ರಮಾಣ: ದೇಶಾದ್ಯಂತ ಯಾವುದೇ ಸ್ಥಳ ಹಾಗೂ ಸಮಯದಲ್ಲಿ ವ್ಯಾಪಾರಿಗಳು 1,000 ಕ್ವಿಂಟಾಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದುವಂತಿಲ್ಲ.
  • ಅವಧಿ ಮಿತಿ: ಸಕ್ಕರೆ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳನ್ನು ಮೀರಿದ ಅವಧಿಗೆ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ.
  • ಅನ್ವಯದ ವ್ಯಾಪ್ತಿ: ಕೋಲ್ಕತ್ತಾ ಮತ್ತದರ ವಿಸ್ತೃತ ಮಹಾನಗರ ಪ್ರದೇಶಗಳು ಹಾಗೂ ಅಸ್ಸಾಂ ರಾಜ್ಯವನ್ನು ಹೊರತುಪಡಿಸಿ, ದೇಶದ ಉಳಿದೆಲ್ಲ ಭಾಗಗಳಲ್ಲಿ ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಈ ಪರಿಷ್ಕೃತ ನಿಯಮಗಳು ಕಡ್ಡಾಯವಾಗಿ ಜಾರಿಯಲ್ಲಿರಲಿದೆ.

ಕೃತಕ ಅಭಾವ, ಊಹಾತ್ಮಕ ವಹಿವಾಟಿಗೆ ಕಡಿವಾಣ

ಸಕ್ಕರೆ ಕಾರ್ಖಾನೆಗಳು, ಅಧಿಕೃತ ಡೀಲರ್‌ಗಳು, ಸಗಟು ವ್ಯಾಪಾರಿಗಳು ಹಾಗೂ ಇತರೆ ಮಾರುಕಟ್ಟೆ ವರ್ತಕರು ಸಕ್ಕರೆ ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು, ಕೃತಕ ಅಭಾವ ಸೃಷ್ಟಿಸುವುದನ್ನು ನಿಲ್ಲಿಸಲು ಮತ್ತು ಊಹಾತ್ಮಕ ವಹಿವಾಟಿಗೆ ಕಡಿವಾಣ ಹಾಕಲು ಸಚಿವ ಪ್ರಲ್ಹಾದ್​​ ಜೋಶಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಎಂಎಸ್‌ಪಿ-ಎಫ್‌ಆರ್‌ಪಿ ಗೊಂದಲಕ್ಕೆ ಪ್ರಲ್ಹಾದ್ ಜೋಶಿ ಸ್ಪಷ್ಟನೆ; ಈ ವರ್ಷವೂ FRP ಹೆಚ್ಚಿಸುವ ಭರವಸೆ

ಇನ್ನು ‘ಸಕ್ಕರೆಯ ಎಂಎಸ್​ಪಿ, ಇದು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ ಅಲ್ಲ, ಇದು ಸಕ್ಕರೆಯ ಕನಿಷ್ಠ ಮಾರಾಟದ ಬೆಲೆ ಅಂದರೆ ಮಿನಿಮಮ್​​ ಸೆಲ್ಲಿಂಗ್​ ಪ್ರೈಸ್.​ ಈ ಬೆಲೆಗಿಂತ ಕಡಿಮೆ ದರದಲ್ಲಿ ಸಕ್ಕರೆ ಉತ್ಪಾದಕರು ಸಕ್ಕರೆಯನ್ನು ಮಾರಾಟ ಮಾಡಬಾರದು’ ಎಂದು ಈಗಾಗಲೇ ಪ್ರಲ್ಹಾದ್​​ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us