ನಾಸಿಕ್ನಲ್ಲಿ ಮತ್ತೆ ಚಡ್ಡಿ ಬಿನಿಯಾನ್ ಗ್ಯಾಂಗ್ ತನ್ನ ಕೈಚಳಕ ತೋರಿಸಿದೆ. 6 ಅಂಗಡಿಗಳಲ್ಲಿ ದರೋಡೆ ಮಾಡಿ ಪರಾರಿಯಾಗಿವೆ. ಬುಧವಾರ ತಡರಾತ್ರಿ ಮಾಲೆಗಾಂವ್ನಲ್ಲಿ ಮತ್ತೆ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ಚಡ್ಡಿ, ಬನಿಯಾನ್ನಲ್ಲಿದ್ದ ಕಳ್ಳರು, ಹಾರ್ಡ್‌ವೇರ್ ಮತ್ತು ವಿದ್ಯುತ್ ಪಂಪ್‌ಗಳನ್ನು ಮಾರಾಟ ಮಾಡುವ ಆರು ಅಂಗಡಿಗಳಿಗೆ ಕನ್ನ ಹಾಕಿರುವುದು ಕಂಡುಬಂದಿದೆ.
ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇವು ಸೆರೆಯಾಗಿವೆ. ಈ ವಾರದ ಆರಂಭದಲ್ಲಿ, ಗ್ಯಾಂಗ್ ಮಾಲೆಗಾಂವ್‌ನ ಮನೆ ಮತ್ತು ಕಾಲೇಜಿನಿಂದ ಸುಮಾರು 70 ಗ್ರಾಂ ಚಿನ್ನ ಮತ್ತು ಬಾಳೆಹಣ್ಣುಗಳನ್ನು ಕಳವು ಮಾಡಿತ್ತು.
ಗ್ಯಾಂಗ್‌ನ ಸದಸ್ಯರು ಸಾಮಾನ್ಯವಾಗಿ ಒಳ ಉಡುಪುಗಳನ್ನು ಧರಿಸಿ ಅಪರಾಧಗಳನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ತೀಕ್ಷ್ಣವಾದ ಆಯುಧಗಳನ್ನು ಹೊಂದಿರುತ್ತಾರೆ.
ಮತ್ತಷ್ಟು ಓದಿ: ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ ಬಂಧನ, ಕೃತ್ಯ ನಡೆದು ಐದೇ ಗಂಟೆಯಲ್ಲೇ ಹಿಡಿದ ಪೊಲೀಸ್ರು
ಇಂತಹ ದರೋಡೆಗಳನ್ನು ಮಾಡುವ ಬಹು ಗುಂಪುಗಳು ಸಂಪರ್ಕ ಹೊಂದಿವೆಯೇ ಅಥವಾ ಈ ಚಡ್ಡಿ ಬನಿಯಾನ್ ಗ್ಯಾಂಗ್ ತನಿಖಾಧಿಕಾರಿಗಳನ್ನು ದಾರಿತಪ್ಪಿಸುವ ಒಂದು ವಿಧಾನವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Fri, 6 September 24