ಕೋಲ್ಕತ್ತಾದ ಆರ್​ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಘೋಷ್ ಮನೆ ಮೇಲೆ ಇಡಿ ದಾಳಿ

ಆರ್‌ಜಿ ಕರ್ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಪಶ್ಚಿಮ ಬಂಗಾಳದ ಹೌರಾ, ಸೋನಾರ್‌ಪುರ್ ಮತ್ತು ಹೂಗ್ಲಿಯಲ್ಲಿ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು .

ಕೋಲ್ಕತ್ತಾದ ಆರ್​ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಘೋಷ್ ಮನೆ ಮೇಲೆ ಇಡಿ ದಾಳಿ
ಸಂದೀಪ್ ಘೋಷ್Image Credit source: Mint
Follow us
|

Updated on: Sep 06, 2024 | 9:41 AM

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್​ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಸರ್ಕಾರಿ ಸಂಸ್ಥೆಯಲ್ಲಿ ನಡೆದ ಆರ್ಥಿಕ ಹಗರಣದ ಭಾಗವಾಗಿ ದಾಳಿ ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ.

ಸಂದೀಪ್ ಘೋಷ್ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದ ಆರೋಪದ ಹಣಕಾಸು ಅಕ್ರಮಗಳ ಬಗ್ಗೆ ಕೇಂದ್ರೀಯ ಸಂಸ್ಥೆಗಳ ತನಿಖೆಗೆ ಕಾರಣವಾಯಿತು. ಸಂದೀಪ್ ಘೋಷ್ ಅವರು ಆಪಾದಿತ ಹಣಕಾಸು ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಈ ಅರ್ಜಿಯನ್ನು ಸೆಪ್ಟೆಂಬರ್ 6 ರಂದು ವಿಚಾರಣೆಗೆ ನಿಗದಿಪಡಿಸಿದೆ. ಮಂಗಳವಾರ, ಕೋಲ್ಕತ್ತಾ ನ್ಯಾಯಾಲಯವು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಹಣಕಾಸು ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಘೋಷ್ ಮತ್ತು ಇತರ ಮೂವರನ್ನು ಎಂಟು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿತು.

ಮತ್ತಷ್ಟು ಓದಿ: ಕೋಲ್ಕತ್ತಾ ಅತ್ಯಾಚಾರ-ಕೊಲೆ ಅಪರಾಧದ ಸ್ಥಳ ಬಳಿ ನವೀಕರಣಕ್ಕೆ ಸಂದೀಪ್ ಘೋಷ್ ಆದೇಶ?; ಪತ್ರ ಟ್ವೀಟ್ ಮಾಡಿದ ಬಿಜೆಪಿ

ಭ್ರಷ್ಟಾಚಾರ ಪ್ರಕರಣದಲ್ಲಿ ಹೆಚ್ಚಿನ ತನಿಖೆಯ ಅಗತ್ಯ ಉಲ್ಲೇಖಿಸಿ ಸಿಬಿಐ 10 ದಿನಗಳ ಕಸ್ಟಡಿಗೆ ಕೋರಿತ್ತು. ಸೋಮವಾರ ರಾತ್ರಿ ಫೆಡರಲ್ ಏಜೆನ್ಸಿಯಿಂದ ಬಂಧಿಸಲ್ಪಟ್ಟ ಸಂದೀಪ್ ಘೋಷ್ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹಲ್ಲೆ ಮಾಡಲಾಗಿದೆ.

ಸಿಬಿಐ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಘೋಷ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 420 ಐಪಿಸಿ (ವಂಚನೆ ಮತ್ತು ಅಪ್ರಮಾಣಿಕತೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಆರೋಪ ಮಾಡಲಾಗಿದೆ.

ಸೆಪ್ಟೆಂಬರ್ 2 ರಂದು, ಭ್ರಷ್ಟಾಚಾರ ಪ್ರಕರಣದಲ್ಲಿ ಡಾ ಘೋಷ್ ಅವರನ್ನು ಸಿಬಿಐ ಬಂಧಿಸಿತು ಮತ್ತು ನಂತರ ಅವರನ್ನು ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಲಾಯಿತು.

ರಾಷ್ಟ್ರೀಯ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!