ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಇಂದು (ಜು.14) ಉಡಾವಣೆಯಾಗಿದೆ. ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ನಭಕ್ಕೆ ಯಶಸ್ವಿಯಾಗಿ ಹಾರಿದೆ. ಚಂದ್ರಯಾನ-3 ನೌಕೆ GSLV-MK3 ರಾಕೆಟ್ ಹೊತ್ತೊಯ್ದಿದೆ. ಚಂದ್ರಯಾನ-3 ನೌಕೆ ಲ್ಯಾಂಡರ್, ರೋವರ್ ಒಳಗೊಂಡಿದೆ. ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸಿರುವ 3ನೇ ನೌಕೆ ಇದಾಗಿದೆ. ನೌಕೆ ಆಗಸ್ಟ್ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ.
ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ಯಶಸ್ವಿ ಹಿನ್ನೆಲೆ ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಭಾರತ ಹೆಮ್ಮೆಪಡುತ್ತದೆ. 45 ದಿನಗಳ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. ಇಸ್ರೋದ ಈ ಪ್ರಯತ್ನ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಚಂದ್ರಯಾಣ 3 ಯಶಸ್ವಿ ಉಡಾವಣೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು.
ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಯಶಸ್ವಿ ಉಡಾವಣೆ ಶುಕ್ರವಾರ ಮಾಡಲಾಯಿತು. ಇಸ್ರೋ ವಿಜ್ಞಾನಿಗಳ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕೇರಳ: ಚಂದ್ರಯಾನ 3 ಯಶಸ್ವಿ ಉಡಾವಣೆ ಹಿನ್ನೆಲೆ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಪ್ರತಿಕ್ರಿಯೆ ನೀಡಿದ್ದು, ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. GSLV-MK3 ರಾಕೆಟ್ ಮೂಲಕ ಚಂದ್ರಯಾನ-3. ಲ್ಯಾಂಡರ್, ರೋವರ್ ಯಂತ್ರ ಒಳಗೊಂಡ ಚಂದ್ರಯಾನ-3 ನೌಕೆ ನಿಗಧಿತ ಸಮಯಕ್ಕೆ ಲಾಂಚ್ ಆಗಿದ್ದು, ವಿಕ್ರಂ ಹೆಸರಿನ ಲ್ಯಾಂಡರ್, ಪ್ರಗ್ಯಾನ್ ಹೆಸರಿನ ರೋವರ್ ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಕಳಿಸಲಾಗಿದೆ. ಆದರೆ ಚಂದ್ರಯಾನ 3 ರಾಕೆಟ್ ಜೋಡಿಸಿದ್ದು ಹೇಗೆ ವಿಡಿಯೋ ನೋಡಿ.
ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಈ ಸಾಧನೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳಲು ಭಾರತದ ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರಯಾನ-3 ಹೊಸ ಅಧ್ಯಾಯ ಬರೆದಿದೆ. ಇದು ಎತ್ತರಕ್ಕೆ ಏರಲಿದ್ದು, ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಉತ್ಸಾಹ ಮತ್ತು ಜಾಣ್ಮೆಗೆ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆ ಇಸ್ರೋ ಅಧ್ಯಕ್ಷ ಸೋಮನಾಥ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶ್ಲಾಘಿಸಿದರು. ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಯಶಸ್ವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ಆಗಿದ್ದು, ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದು ಸತೀಶ್ ಧವನ್ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದರು.
ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಯಶಸ್ವಿ ಉಡಾವಣೆ ಆಗಿದ್ದು, ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಹೋದ್ಯೋಗಿಗಳ ಜೊತೆ ಇಸ್ರೋ ಅಧ್ಯಕ್ಷ ಸೋಮನಾಥ್ ಸಂಭ್ರಮಿಸಿದ್ದಾರೆ. ಇಸ್ರೋ ಅಧ್ಯಕ್ಷರಿಗೆ ‘ಚಂದ್ರಯಾನ-3’ ಮಾಡಲ್ನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿದರು.
ಚಂದ್ರಯಾಣ 3 ಅನ್ನು ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಸಂಭ್ರಮಾಚರಣೆ ಮಾಡಿದ್ದು ಹೀಗೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ 3ರ ಪ್ರಗತಿಯನ್ನು ಇಸ್ರೋ ತಂಡ ಮೇಲ್ವಿಚಾರಣೆ ಮಾಡುತ್ತಿದೆ.
ಕಲಬುರಗಿ: ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಲೆಂದು ನಗರದ ಶ್ರೀ ಶರಣಬಸವೇಶ್ವರ ದೇಗುಲದಲ್ಲಿ ಹಿಂದೂ ಜಾಗೃತಿ ಸೇನೆ ವತಿಯಿಂದ ವಿಶೇಷ ಪೂಜೆ ಮಾಡಲಾಗಿದೆ. ಇಸ್ರೋ ವಿಜ್ಞಾನಗಳಿಗೆ ಶುಭವಾಗಲೆಂದು ಘೋಷಣೆ ಕೂಗಿದ್ದಾರೆ.
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ಯೋಜನೆಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಚಾಲನೆ ನೀಡಿದರು.
ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆ ಆಗಿದ್ದು, ಚಂದ್ರಯಾನ-3 ನೌಕೆಯನ್ನು GSLV-MK3 ರಾಕೆಟ್ ಹೊತ್ತೊಯ್ದಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿದೆ.
ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ವಿಶೇಷತೆಗಳನ್ನು ನೋಡುವುದಾದರೆ, ಲ್ಯಾಂಡರ್, ರೋವರ್ ಯಂತ್ರ ಒಳಗೊಂಡಿದೆ. ಚಂದ್ರಯಾನ-3 ನೌಕೆ ನಭಕ್ಕೆ ಹೊತ್ತೊಯ್ಯುವ GSLV-MK3 ರಾಕೆಟ್, GSLV-MK3 ರಾಕೆಟ್-43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿದೆ. ಚಂದ್ರಯಾನ-3 ಯೋಜನೆಗೆ 630 ಕೋಟಿ ರೂ. ಆಗಿರುವ ವೆಚ್ಚ ತಗುಲಿದೆ.
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35 ಕ್ಕೆ ನಿಗದಿತ ಉಡಾವಣೆಗೆ ಸಿದ್ಧವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ ಅಂತ್ಯದ ವೇಳೆಗೆ ಚಂದ್ರಯಾನ -3 ಮಿಷನ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಸುವ ಗುರಿಯನ್ನು ಹೊಂದಿದೆ. ಯಶಸ್ವಿ ಲ್ಯಾಂಡಿಂಗ್ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಈ ಸಾಧನೆಯನ್ನು ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.
ಇಸ್ರೋ ಪ್ರಕಾರ ಚಂದ್ರಯಾನ-3 ಅನ್ನು ಸುಮಾರು 615 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಲ್ಯಾಂಡರ್ ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ಗೆ ಸುಮಾರು 250 ಕೋಟಿ ರೂ. ವೆಚ್ಚವಾಗಲಿದೆ. ಉಡಾವಣಾಗೆ 365 ಕೋಟಿ ರೂ. ವೆಚ್ಚವಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ಹೇಳಿದ್ದರು.
“ಮಾನವವಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದೆ. ಮಿಷನ್ ಚಂದ್ರಯಾನ-3 ವಿಫಲವಾಗಲು ಸಾಧ್ಯವಿಲ್ಲವೆಂದು ಮಿಷನ್ ಚಂದ್ರಯಾನ-3 ಕುರಿತು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹೇಳಿದ್ದಾರೆ.
ಚಂದ್ರಯಾನ-3 ಇದು ಚಂದ್ರಯಾನ-2 ಮಿಷನ್ ಅನುಸರಣೆಯಾಗಿದೆ. 2019ರಲ್ಲಿ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಮಿಷನ್ ವಿಫಲವಾಗಿತ್ತು. ಇದೀಗ ಎರಡನೇ ಪ್ರಯತ್ನದಲ್ಲಿರುವ ಇಸ್ರೋ ಮೃದುವಾಗಿ ಉಪಗ್ರಹ ಇಳಿಸಲಿದೆ
ಭಾರತೀಯ ಬಾಹ್ಯಾಕಾಶ ಪರಿಶೋಧನಾ ಪ್ರಯಾಣಕ್ಕೆ ಇಂದು ದೊಡ್ಡ ದಿನ. Chandrayan 3 ಉಡಾವಣೆ ಇಸ್ರೋ ಸಜ್ಜಾಗಿದೆ. ಭಾರತ ದೇಶವು ಚಂದ್ರನತ್ತ ಅದ್ಭುತವಾದ ಹೆಜ್ಜೆಯನ್ನು ಇಡುತ್ತಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಇಸ್ರೋದ (ISRO) ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಗೆ ನನ್ನ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ಜುಲೈ 14ರ ದಿನವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಇಂದು ನಮ್ಮ ಮೂರನೇ ಚಂದ್ರಯಾನದ ಪ್ರಯಾಣ ಪ್ರಾರಂಭಿಸಲಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಭಾರತವು ತನ್ನ ಮೂರನೇ ಚಂದ್ರನ ಮಿಷನ್ ಅನ್ನು ಜುಲೈ 14ರಂದು ಶುಕ್ರವಾರ ಮಧ್ಯಾಹ್ನ 2:35 ಪ್ರಾರಂಭಿಸಲಿದೆ. ಮೂರು ಹಂತದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುಸೂತ್ರವಾಗಿ ಲ್ಯಾಂಡ್ ಆಗಲಿದೆ.
ಚಂದ್ರಯಾನ-3ಯ ಎಲ್ಲ ಕಾರ್ಯತಂತ್ರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾರತವು ಚಂದ್ರನಲ್ಲಿ ತನ್ನ ಮಿಷನ್ನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ನಾಲ್ಕನೇ ರಾಷ್ಟ್ರವಾಗಲಿದೆ. ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸುತ್ತಿದೆ.
ಧಾರವಾಡ: ಇಂದು (ಜು.14) ಮಧ್ಯಾಹ್ನ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗುವ ಹಿನ್ನೆಲೆ ನಗರದ ಮಂಜುನಾಥ ಹಿರೇಮಠ ಕಲಾವಿದ 10 ಇಂಚಿನ ಕಲಾಕೃತಿ ತಯಾರಿಸಿ ಶುಭಕೋರಿದ್ದಾರೆ. ಕಲಾವಿದ ಮಂಜುನಾಥ ಎಲ್ಎಮ್ವಿ ವಾಹಕದ ಪ್ರತಿಕೃತಿ ತಯಾರಿಸಿದ್ದಾರೆ.

ಬೆಂಗಳೂರು: ಚಂದ್ರಯಾನ ನೌಕೆ ಮಧ್ಯಾಹ್ನ ಉಡಾವಣೆ ಆಗಲಿದೆ, ಸಂಭ್ರಮದ ಕ್ಷಣಗಳಲ್ಲಿ ನಾವು ಹೆಮ್ಮೆ ಪಡೋಣ ಚಂದ್ರಯಾನ ಯಶಸ್ವಿ ಆಗಲಿ ಎಂದು ಶುಭಾಶಯ ಕೋರೋಣ ಎಂದು ಸದನದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಹೇಳಿದರು.
ಬೆಂಗಳೂರು: ರಾಜ್ಯಪಾಲರು ಸರ್ಕಾರದ ನೀತಿ ನಿಲುವುಗಳು, ಅವರ ದೂರ ದೃಷ್ಟಿ ಮುನ್ನೋಟ ಒಳಗೊಂಡಂತೆ ಸದನದ ಮುಂದೆ ಮಂಡಿಸಿದ್ದಾರೆ. ಭಾಷಣದಲ್ಲಿ ಐದು ವರ್ಷಗಳ ಕಾಲ ನಾವು ಅಭಿವೃದ್ಧಿ ಮಾಡುತ್ತವೆ. ಟೀಕೆ ಮಾಡಲಿ ನಾನು ಸ್ವೀಕಾರ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳಿಕೆ ತೆಗಳಿಕೆ ಎರಡವನ್ನು ನಾನು ಸಮ ಚಿತ್ತದಿಂದ ಸ್ವೀಕಾರ ಮಾಡುತ್ತೇವೆ. ಪ್ರಭಲವಾದ ವಿರೋಧ ಪಕ್ಷ ಇರಬೇಕು. ಆಗ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಲು ಅವಕಾಶ ಆಗುತ್ತದೆ. ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡಬೇಕು. ಸಂವಿಧಾನದ ವಿರುದ್ಧ ಕೆಲಸ ಮಾಡಲು ಅಗಲ್ಲ ಎಂದು ರಾಜ್ಯಪಾಲರ ಭಾಷಣದ ಮೇಲೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ಇಂದು ಜುಲೈ 14 ರಂದು ಮಧ್ಯಾಹ್ನ 2.30 ಕ್ಕೆ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ.
Published On - 11:25 am, Fri, 14 July 23