ಲ್ಯಾಂಡರ್, ರೋವರ್ ಎಚ್ಚರಗೊಳ್ಳುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗಿದೆ- ಇಸ್ರೋ

Chandrayaan 3 Update: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎಚ್ಚರಗೊಳ್ಳುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಇಸ್ರೋ ಈಗಷ್ಟೇ ಒಂದು ಹೊಸ ಅಪ್​ಡೇಟ್​ ಅನ್ನು ನೀಡಿದೆ.

ಲ್ಯಾಂಡರ್, ರೋವರ್ ಎಚ್ಚರಗೊಳ್ಳುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗಿದೆ- ಇಸ್ರೋ
ಚಂದ್ರಯಾನ 3

Updated on: Sep 22, 2023 | 7:16 PM

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ (Chandrayaan 3 Update) ಸಂಪರ್ಕ ಬೆಳೆಸಲು ಮತ್ತು ಅವು ಎಚ್ಚರವಾಗಿವೆಯೇ ಎಂದು ನೋಡಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಇಸ್ರೋ ಹೊಸ ಅಪ್​ಡೇಟ್​ ಅನ್ನು ನೀಡಿದೆ. ಇಲ್ಲಿಯವರೆಗೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಇಸ್ರೋ ತಿಳಿಸಿದೆ. ಆದರೂ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು X ನಲ್ಲಿ ಮಾಹಿತಿಯನ್ನು ಶೇರ್ ಮಾಡಿದೆ.

ಆರಂಭದಲ್ಲಿ, ಇಸ್ರೋ ಲ್ಯಾಂಡರ್ ಮತ್ತು ರೋವರ್‌ ಅನ್ನು ಸೆಪ್ಟೆಂಬರ್ 22 ರಂದು ಎಚ್ಚರಗೊಳಿಸಲು ಯೋಜಿಸಿತ್ತು, ಆದರೆ ಇದನ್ನು ಒಂದು ದಿನ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿದ್ದವು, ಆದರೆ ಈಗ ಬಂದ ಅಪ್​ಡೇಟ್ ಪ್ರಕಾರ ಇಸ್ರೋ ತನ್ನ ಪ್ರಯತ್ನವನ್ನು ನಡೆಸುತ್ತಲೇ ಇದೆ ಎಂಬುದು ತಿಳಿಸುಬಂದಿದೆ.

ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿದ ಮಿಷನ್‌ನ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಿದ ನಂತರ ಈ ತಿಂಗಳ ಆರಂಭದಲ್ಲಿ ಸ್ಲೀಪ್ ಮೋಡ್ ಗೆ ಹಾಕಲಾಯಿತು. ಸೆಪ್ಟೆಂಬರ್ 2 ರಂದು ರೋವರ್ ಅನ್ನು ನಂತರ ಸೆಪ್ಟೆಂಬರ್ 4 ರಂದು ಲ್ಯಾಂಡರ್ ಅನ್ನು ನಿದ್ರಾವಸ್ಥೆಗೆ ಕಳಿಸಲಾಯಿತು.

ಇಲ್ಲಿಯವರೆಗೂ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ವಿವಿಧ ಪ್ರಯೋಗಗಳನ್ನು ನಡೆಸಿವೆ. ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ 100 ಮೀಟರ್‌ಗಳಷ್ಟು ಪ್ರಯಾಣಿಸಿದೆ ಮತ್ತು ದಕ್ಷಿಣ ಧ್ರುವದ ಬಳಿ ಚಂದ್ರನ ಮಣ್ಣಿನಲ್ಲಿ ಗಂಧಕದ ಉಪಸ್ಥಿತಿಯನ್ನು ದೃಢಪಡಿಸಿದೆ. ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವದ ಬಳಿ ಚಂದ್ರನ ಪ್ಲಾಸ್ಮಾ ಪರಿಸರದ ಪ್ರಮುಖ ಅಳತೆಗಳನ್ನು ಮಾಡಿದೆ.

ಇದನ್ನೂ ಓದಿ: ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೌರ ಚಂಡಮಾರುತದಿಂದ ಬಚಾವ್; ಭಾರತದ ಆದಿತ್ಯ ಎಲ್1 ಈ ರೀತಿಯ ಅಪಾಯವನ್ನು ಎದುರಿಸಬಹುದೇ?

ಮೂಲತಃ, ಇಸ್ರೋ ರೋವರ್ 300-350 ಮೀಟರ್ ಪ್ರಯಾಣಿಸಲು ಯೋಜಿಸಿತ್ತು, ಆದರೆ ಇದು ಇದುವರೆಗೆ 105 ಮೀಟರ್ ಮಾತ್ರ ಕ್ರಮಿಸಿದೆ. ಅದೇನೇ ಇದ್ದರೂ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಹಾಪ್ ಪರೀಕ್ಷೆಯನ್ನು ಪೂರ್ಣಗೊಳಿಸುವುದರೊಂದಿಗೆ ಮಿಷನ್ ಯಶಸ್ವಿಯಾಗಿದೆ, ಇದು ಭವಿಷ್ಯದ ಚಂದ್ರನ ಕಾರ್ಯಾಚರಣೆಗಳು ಮತ್ತು ಮಾನವ ಅನ್ವೇಷಣೆಗೆ ಮುಖ್ಯವಾಗಿದೆ.

ಮಿಷನ್‌ನ ಸೌರ ಫಲಕಗಳನ್ನು ಮುಂಜಾನೆ ಸೂರ್ಯನ ಬೆಳಕನ್ನು ಹಿಡಿಯಲು ಇರಿಸಲಾಗಿತ್ತು ಮತ್ತು ಸೂರ್ಯನ ಬೆಳಕಿನಿಂದ ಚಾಲಿತ ಬ್ಯಾಟರಿಗಳು ಸಾಧನಗಳನ್ನು ನಿದ್ರಿಸುವ ಮೊದಲು ಚಾರ್ಜ್ ಮಾಡಲ್ಪಟ್ಟವು. ಲ್ಯಾಂಡರ್ ಮತ್ತು ರೋವರ್ ಯಶಸ್ವಿಯಾಗಿ ರೀಚಾರ್ಜ್ ಮಾಡಿದರೆ, ಮಾದರಿಗಳನ್ನು ಸಂಗ್ರಹಿಸಲು ಮತ್ತು ಚಂದ್ರನ ಮೇಲ್ಮೈಯನ್ನು ಮತ್ತಷ್ಟು ಅನ್ವೇಷಿಸಲು ಮಿಷನ್ ಹೆಚ್ಚು ಸಮಯವನ್ನು ಪಡೆಯುತ್ತದೆ. ಲ್ಯಾಂಡರ್ ಮತ್ತು ರೋವರ್ ನೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ತನ್ನ ಪ್ರಯತ್ನಗಳನ್ನು ಮುಂದುವರಿಸಲು ಇಸ್ರೋ ನಿರ್ಧರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Fri, 22 September 23