AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನಾತನ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗು ಉದಯನಿಧಿಯನ್ನು ಬೇಟೆಯಾಡುತ್ತಿದ್ದಾರೆ: ಕಮಲ್ ಹಾಸನ್

ಪೆರಿಯಾರ್‌ನಿಂದಾಗಿ ಸನಾತನ ಎಂಬ ಪದವನ್ನು ಪ್ರತಿಯೊಬ್ಬರೂ ತಿಳಿದಿದ್ದಾರೆ. ತಮಿಳುನಾಡು ಮಾತ್ರ ಅಥವಾ ಯಾವುದೇ ರಾಜಕೀಯ ಪಕ್ಷ ಪೆರಿಯಾರ್ ಅನ್ನು ತಮ್ಮದು ಎಂದು ಹೇಳಲು ಸಾಧ್ಯವಿಲ್ಲ. ನಮಗೆಲ್ಲ ಸನಾತನ ಎಂಬ ಪದದ ಬಗ್ಗೆ ತಿಳಿದಿದ್ದು ಪೆರಿಯಾರ್ ಅವರಿಂದ. ಅವರು ಒಮ್ಮೆ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ವಾರಣಾಸಿಯಲ್ಲಿ ಹಣೆಯ ಮೇಲೆ ತಿಲಕವಿಟ್ಟು ಅವರು ಪೂಜೆ ಮಾಡುತ್ತಿದ್ದರು. ಅವರಿಗೆ ಎಷ್ಟು ಕೋಪ ಬಂದಿರಬಹುದು ಎಂದು ಊಹಿಸಿ. ಅದೆಲ್ಲವನ್ನೂ ದೂರವಿಟ್ಟು ಜನಸೇವೆ ಮಾಡುವುದೇ ದೊಡ್ಡ ಸೇವೆ ಎಂದು ಅರಿತು ತಮ್ಮ ಇಡೀ ಜೀವನವನ್ನು ಹಾಗೆ ಬದುಕಿದರು ಎಂದ ಕಮಲ್ ಹಾಸನ್.

ಸನಾತನ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗು ಉದಯನಿಧಿಯನ್ನು ಬೇಟೆಯಾಡುತ್ತಿದ್ದಾರೆ: ಕಮಲ್ ಹಾಸನ್
ಕಮಲ್ ಹಾಸನ್
ರಶ್ಮಿ ಕಲ್ಲಕಟ್ಟ
|

Updated on: Sep 22, 2023 | 8:24 PM

Share

ಚೆನ್ನೈ ಸೆಪ್ಟೆಂಬರ್ 22: ನಟ, ರಾಜಕಾರಣಿ ಕಮಲ್ ಹಾಸನ್ (Kamal Haasan )ಶುಕ್ರವಾರ ತಮಿಳುನಾಡು (Tamil Nadu) ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಸನಾತನ ಧರ್ಮ ವಿವಾದ ಬಗ್ಗೆ ಪ್ರತಿಕ್ರಿಯಿಸಿದ್ದು, ಸನಾತನದ ಬಗ್ಗೆ ಮಾತನಾಡಿದ ಕಾರಣಕ್ಕಾಗಿ ಚಿಕ್ಕ ಮಗುವನ್ನು (ಉದಯನಿಧಿ) ಬೇಟೆಯಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಪೆರಿಯಾರ್‌ನಿಂದಾಗಿ ಸನಾತನ ಎಂಬ ಪದವನ್ನು ಪ್ರತಿಯೊಬ್ಬರೂ ತಿಳಿದಿದ್ದಾರೆ. ತಮಿಳುನಾಡು ಮಾತ್ರ ಅಥವಾ ಯಾವುದೇ ರಾಜಕೀಯ ಪಕ್ಷ ಪೆರಿಯಾರ್ ಅನ್ನು ತಮ್ಮದು ಎಂದು ಹೇಳಲು ಸಾಧ್ಯವಿಲ್ಲ. ನಮಗೆಲ್ಲ ಸನಾತನ ಎಂಬ ಪದದ ಬಗ್ಗೆ ತಿಳಿದಿದ್ದು ಪೆರಿಯಾರ್ ಅವರಿಂದ.

ಅವರು ಒಮ್ಮೆ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ವಾರಣಾಸಿಯಲ್ಲಿ ಹಣೆಯ ಮೇಲೆ ತಿಲಕವಿಟ್ಟು ಅವರು ಪೂಜೆ ಮಾಡುತ್ತಿದ್ದರು. ಅವರಿಗೆ ಎಷ್ಟು ಕೋಪ ಬಂದಿರಬಹುದು ಎಂದು ಊಹಿಸಿ. ಅದೆಲ್ಲವನ್ನೂ ದೂರವಿಟ್ಟು ಜನಸೇವೆ ಮಾಡುವುದೇ ದೊಡ್ಡ ಸೇವೆ ಎಂದು ಅರಿತು ತಮ್ಮ ಇಡೀ ಜೀವನವನ್ನು ಹಾಗೆ ಬದುಕಿದರು.ಡಿಎಂಕೆ ಆಗಲಿ ಅಥವಾ ಬೇರೆ ಯಾವುದೇ ಪಕ್ಷವಾಗಲಿ ಪೆರಿಯಾರ್ ಅವರನ್ನು ತಮ್ಮವರೆಂದು ಹೇಳಿಕೊಳ್ಳುವಂತಿಲ್ಲ.ತಮಿಳುನಾಡು ಪೆರಿಯಾರ್ ಅವರನ್ನು ತನ್ನದೆಂದು ಹೇಳಬಹುದು ಎಂದು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಅವರು ಈ ಹಿಂದೆಯೂ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸನಾತನ ಸಂಸ್ಥೆಯನ್ನು ಡೆಂಗ್ಯೂ, ಮಲೇರಿಯಾದೊಂದಿಗೆ ಹೋಲಿಸುವ ಉದಯನಿಧಿಯವರ ಹೇಳಿಕೆಯನ್ನು ಸನಾತನದ ಬಗ್ಗೆ ಅವರ ವೈಯಕ್ತಿಕ ದೃಷ್ಟಿಕೋನ ಎಂದಿದ್ದರು ಅವರು. ನೀವು ಅವರ ದೃಷ್ಟಿಕೋನವನ್ನು ಒಪ್ಪದಿದ್ದರೆ, ಹಿಂಸಾಚಾರದ ಬೆದರಿಕೆ ಅಥವಾ ಕಾನೂನು ಬೆದರಿಕೆ ತಂತ್ರಗಳನ್ನು ಆಶ್ರಯಿಸುವ ಬದಲು ಸನಾತನದ ಅರ್ಹತೆಯ ಆಧಾರದ ಮೇಲೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ, ಅಥವಾ ಸಂಕುಚಿತ ರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸಲು ಅವರ ಮಾತುಗಳನ್ನು ತಿರುಚುವುದು ಅಲ್ಲ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದರು.

ಉದಯನಿಧಿಯವರ ಹೇಳಿಕೆಯ ನಂತರ ಸನಾತನ ಧರ್ಮವನ್ನು ನಾಶಮಾಡಲು ಇಂಡಿಯಾ ಮೈತ್ರಿಕೂಟ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ ನಂತರ ಸನಾತನದ ಗಲಾಟೆಯು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪ್ರಮುಖ ವಿಷಯ ಆಗಿದೆ. ಈ ಕಾಮೆಂಟ್‌ಗೆ ಪ್ರತಿಪಕ್ಷಗಳು ಭಿನ್ನಾಭಿಪ್ರಾಯ ಹೊಂದಿದ್ದವು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಬಗ್ಗೆ ಪ್ರತಿಕ್ರಿಯಿಸದಂತೆ ತಮ್ಮ ಪಕ್ಷದ ಸದಸ್ಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಸನಾತನ ಧರ್ಮ ಕುರಿತ ಹೇಳಿಕೆ: ತಮಿಳುನಾಡು ಸಚಿವ ಉದಯನಿಧಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್​

ಆದರೆ, ಸ್ವತಃ ಉದಯನಿಧಿಯವರು ಸನಾತನ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದನ್ನು ತಡೆಯಲಿಲ್ಲ. ಸಂಸತ್ ನ ಪ್ರಕ್ರಿಯೆಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ, ಉದಯನಿಧಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಮತ್ತು ಬುಡಕಟ್ಟು ಜನಾಂಗದವರಾಗಿರುವುದರಿಂದ ಅವರನ್ನು ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ