Oxygen shortage: ಆಕ್ಸಿಜನ್ ಕೊರತೆ; ಚೆಂಗಲ್​ಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ 11 ಸೋಂಕಿತರ ಸಾವು

ಕೋವಿಡ್​ ಸೋಂಕಿತರಿಗಾಗಿ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್​ ಸರಬರಾಜು ಇಲ್ಲದೆ ಈ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಚೆಂಗಲ​ಪಟ್ಟುನಲ್ಲಿ 1,608 ಜನಕ್ಕೆ ಸೋಂಕು ತಗುಲಿದೆ.

Oxygen shortage: ಆಕ್ಸಿಜನ್ ಕೊರತೆ; ಚೆಂಗಲ್​ಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ 11 ಸೋಂಕಿತರ ಸಾವು
ಪ್ರಾತಿನಿಧಿಕ ಚಿತ್ರ

Updated on: May 05, 2021 | 1:15 PM

ತಮಿಳುನಾಡಿನಲ್ಲಿಯೂ ಅದೇ ಅದೇ ಪ್ರಕರಣಗಳು ಕಂಡುಬಂದಿವೆ. ಕೊರೊನಾ ಸೋಂಕಿನ ಅಟ್ಟಹಾಸದ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಜೀವವಾಯು ಆಮ್ಲಜನಕದ ಕೊರತೆ ಗಾಢವಾಗಿ ಹಬ್ಬಿದೆ. ಎಲ್ಲೆಲ್ಲೂ ಜೀವವಾಯುಗಾಗಿ ಹಾಹಾಕಾರ ಎದ್ದಿದೆ. ಕರ್ನಾಟಕದಲ್ಲಂತೂ ಆಕ್ಸಿಜನ್​ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರು ಇಹಲೋಕ ತ್ಯಜಿಸುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ, ಮಂಗಳವಾರ ಮಧ್ಯರಾತ್ರಿ ತಮಿಳುನಾಡಿನ ಚೆಂಗಲ​ಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 11 ಮಂದಿ ಅಸುನೀಗಿದ್ದಾರೆ. ಘಟನೆಯ ನಂತರ ಸರ್ಕಾರ ತನಿಖೆಗೆ ಆಜ್ಞಾಪಿಸಿದೆ.

ಕೋವಿಡ್​ ಸೋಂಕಿತರಿಗಾಗಿ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್​ ಸರಬರಾಜು ಇಲ್ಲದೆ ಈ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಚೆಂಗಲ​ಪಟ್ಟುನಲ್ಲಿ 1,608 ಜನಕ್ಕೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ ಮಂಗಳವಾರ 21,000 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆಯಾಗಿ ತಮಿಳುನಾಡಿನಲ್ಲಿ 12.5 ಲಕ್ಷ ಪ್ರಕರಣಗಳು ವರದಿಯಾಗಿವೆ. ಒಟ್ಟು 14,612 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

(Chengalpattu Government Hospital oxygen shortage 11 covid 19 patients died)

Also Read: 

ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್​ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ

Published On - 9:16 am, Wed, 5 May 21