ಅಂತಾರಾಜ್ಯ ಪ್ರಯಾಣಕ್ಕೆ ಆರ್​ಟಿ-ಪಿಸಿಆರ್​ ರಿಪೋರ್ಟ್ ಕಡ್ಡಾಯವಲ್ಲ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಐಸಿಎಂಆರ್​

ಜ್ವರ, ನೆಗಡಿ, ಕೆಮ್ಮಿನಿಂತ ಲಕ್ಷಣ ಇರುವವರು ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣವನ್ನು ಕಡಿಮೆ ಮಾಡಬೇಕು. ಅನಿವಾರ್ಯ ಇಲ್ಲ ಎಂದರೆ ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಐಸಿಎಂಆರ್​ ತಿಳಿಸಿದೆ.

ಅಂತಾರಾಜ್ಯ ಪ್ರಯಾಣಕ್ಕೆ ಆರ್​ಟಿ-ಪಿಸಿಆರ್​ ರಿಪೋರ್ಟ್ ಕಡ್ಡಾಯವಲ್ಲ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಐಸಿಎಂಆರ್​
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 04, 2021 | 10:01 PM

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಸಂಬಂಧಪಟ್ಟಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸದ್ಯ ಕೊವಿಡ್​ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲ್ಯಾಬೋರೇಟರಿಗಳಲ್ಲಿ ಆರ್​ಟಿ ಪಿಸಿಆರ್​ ಟೆಸ್ಟ್ ದೊಡ್ಡ ಸವಾಲಾಗಿ ಕಾಡುತ್ತಿದೆ. ಈ ಮಧ್ಯೆ ಅಗತ್ಯ ಇರುವ ಎಲ್ಲ ನಾಗರಿಕರಿಗೆ ಉತ್ತಮವಾಗಿ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಲೇಬೇಕು ಎಂದು ಐಸಿಎಂಆರ್​ ಹೇಳಿದ್ದು, ಅದಕ್ಕೆ ತಕ್ಕಂತೆ ತನ್ನ ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಐಸಿಎಂಆರ್​ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಅನ್ವಯ ನಿಯಮಗಳು ಹೀಗಿವೆ: 1. ಒಮ್ಮೆ ಒಬ್ಬ ವ್ಯಕ್ತಿಗೆ ಆ್ಯಂಟಿಜೆನ್ ರ್ಯಾಪಿಡ್​ ಟೆಸ್ಟ್ ಅಥವಾ ಆರ್​ಟಿಪಿಸಿಆರ್​ ಟೆಸ್ಟ್ ಮಾಡಿಸಿ ಅದರಲ್ಲಿ ಕೊವಿಡ್ 19 ಪಾಸಿಟಿವ್​ ಎಂದು ವರದಿ ಬಂದರೆ ಮತ್ತೊಮ್ಮೆ ಆರ್​ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವ ಅಗತ್ಯವಿಲ್ಲ. 2.ಕೊವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಚೇತರಿಸಿಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮದ ಅನುಸಾರ ಡಿಸ್​ಚಾರ್ಜ್ ಆಗುವ ಹೊತ್ತಲ್ಲಿ ಅವರಿಗೆ ಮತ್ತೆ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡಿಸಬೇಕಿಲ್ಲ. 3. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯಾರಾದರೂ ಪ್ರಯಾಣ ಮಾಡಬೇಕು ಅಂತಿದ್ದು, ಅವರಲ್ಲಿ ಕೊರೊನಾದ ಯಾವುದೇ ಲಕ್ಷಣ ಇಲ್ಲದಿದ್ದರೆ ಅಂಥವರು ಆರ್​ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವುದು ಬೇಡ. ಆರ್​ಎಟಿ ತಪಾಸಣೆ ಸಾಕು. 4. ಜ್ವರ, ನೆಗಡಿ, ಕೆಮ್ಮಿನಿಂತ ಲಕ್ಷಣ ಇರುವವರು ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣವನ್ನು ಕಡಿಮೆ ಮಾಡಬೇಕು. ಅನಿವಾರ್ಯ ಇಲ್ಲ ಎಂದರೆ ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅಂತಾರಾಜ್ಯ ಪ್ರಯಾಣವೂ ಬೇಡ. ಅದಕ್ಕಾಗಿ ಆರ್​ಟಿ-ಪಿಸಿಆರ್ ಟೆಸ್ಟ್​ ಮಾಡಿಸುವುದು ಬೇಡ. 5. ರಾಜ್ಯಸರ್ಕಾರಗಳು ಸಂಚಾರಿ ವ್ಯವಸ್ಥೆಯ ಮೂಲಕ ಉತ್ತಮ ಗುಣಮಟ್ಟದ ಆರ್​ಟಿ-ಪಿಸಿಆರ್​ ಟೆಸ್ಟ್​ನ್ನು ಹೆಚ್ಚಿಸಬೇಕು.

ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ ಹೆಚ್ಚಿಸಲು ಕ್ರಮಗಳು RAT (Rapid Antigen Test) ತಪಾಸಣೆಯನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಮಾಡಲಾಗುವುದು.

ಹಾಗೇ ಆರ್​ಎಟಿ ತಪಾಸಣೆಗೆಂದೇ ಎಲ್ಲ ನಗರಗಳಲ್ಲಿ, ಪಟ್ಟಣಗಳು, ಹಳ್ಳಿಗಳಲ್ಲಿ ಬೂತ್​​ಗಳನ್ನು ಸ್ಥಾಪಿಸಬೇಕು. ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳು, ಆರ್​​ಡಬ್ಲ್ಯೂಎ, ಎಲ್ಲ ಕಚೇರಿಗಳು, ಶಾಲೆ-ಕಾಲೇಜುಗಳು, ಸಮುದಾಯ ಕೇಂದ್ರಗಳಲ್ಲೂ RAT ತಪಾಸಣಾ ಕೇಂದ್ರಗಳನ್ನು ನಿರ್ಮಿಸಬಹುದು.

ಹೀಗೆ ಸ್ಥಾಪಿಸಲಾದ ಬೂತ್​ಗಳಲ್ಲಿ ಸೇವೆ 24ಗಂಟೆಯೂ ಲಭ್ಯ ಇರಬೇಕು. ಅಂದರೆ ಟೆಸ್ಟಿಂಗ್​ ಇಡೀ ದಿನ ನಡೆಯುತ್ತಿರಬೇಕು.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಬಂಧಿತರಾಗಿದ್ದವರಿಗೆ ಜಾಮೀನು

Karnataka Covid 19 update: ರಾಜ್ಯದಲ್ಲಿ ಇಂದು 44,631 ಕೊರೊನಾ ಕೇಸ್​ಗಳು ದಾಖಲು; ಇದರಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲೇ !

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್