ಇಂಜಿನ್ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ(IndiGo)ವಿಮಾನ ದೆಹಲಿಗೆ ವಾಪಸ್ ಆಗಿದೆ. ಶನಿವಾರ ರಾತ್ರಿ ವಿಮಾನವು ಟೇಕ್ ಆಫ್ ಆಗಿ ಒಂದು ಗಂಟೆಯೊಳಗೆ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ ಎಂದು ಡೈರೆಕ್ಟರೇಟ್ ಜನರಲ್ ತಿಳಿಸಿದ್ದಾರೆ.
ಇಂಡಿಗೋ ದೆಹಲಿ-ಚೆನ್ನೈ ವಿಮಾನ(6E-2789)ದ ಇಂಜಿನ್ನಲ್ಲಿ ದೋಷ ಉಂಟಾದ ಹಿನ್ನೆಲೆಯಲ್ಲಿ ಮತ್ತದೇ ನಿಲ್ದಾಣಕ್ಕೆ ಮರಳಿತು.
ಮತ್ತಷ್ಟು ಓದಿ: Air India: ಸ್ಯಾನ್ ಫ್ರಾನ್ಸಿಸ್ಕೋಗೆ ಬದಲು ರಷ್ಯಾದಲ್ಲಿ ಇಳಿದ ವಿಮಾನ, ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ವಿಮಾನ ವ್ಯವಸ್ಥೆ
ವಿಮಾನದಲ್ಲಿ 230 ಕ್ಕೂ ಹೆಚ್ಚು ಮಂದಿ ಇದ್ದರು, ಸುರಕ್ಷಿತವಾಗಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ವಿಮಾನದ ತಪಾಸಣೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಚೆನ್ನೈಗೆ ತೆರಳಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಉಂಟಾದ ಅನನುಕೂಲತೆಗಾಗಿ ವಿಷಾಧಿಸುತ್ತೇವೆ ಎಂದು ಪ್ರಯಾಣಿಕರ ಬಳಿ ಅಧಿಕಾರಿಗಳು ಕ್ಷಮೆ ಕೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ