ದುಬೈನಿಂದ ಅಕ್ರಮವಾಗಿ ಚಿನ್ನ ಸ್ಮಗಲ್‌ ಮಾಡುತ್ತಿದ್ದ ಖದೀಮರು ಅರೆಸ್ಟ್‌

| Updated By: ಸಾಧು ಶ್ರೀನಾಥ್​

Updated on: Aug 05, 2020 | 6:32 PM

ಚೆನ್ನೈ: ಕೇರಳದ ಗೋಲ್ಡ್‌ ಸ್ಮಗಲ್‌ ಘಟನೆಯು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ದುಬೈನಿಂದ ಅಕ್ರಮವಾಗಿ ಚಿನ್ನ ತಂದಿದ್ದ ಇಬ್ಬರು ಪ್ರಯಾಣಿಕರು ಸಿಕ್ಕುಬಿದ್ದಿದ್ದಾರೆ. ಚೆನ್ನೈನ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರನ್ನು ಸಂಶಯದ ಮೇಲೆ ಪರೀಕ್ಷೆಗೆ ಒಳಪಡಿಸಿದಾಗ, ಅವರ ಬೆಲ್ಟ್‌ನಲ್ಲಿ ಪಾಲಿಥಿನ್‌ನಲ್ಲಿ ಅಡಗಿಸಿಟ್ಟಿದ್ದ 731 ಗ್ರಾಂ‌ ಚಿನ್ನ ಸಿಕ್ಕಿದೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಚಿನ್ನವನ್ನು ಜಫ್ತಿ ಮಾಡಿದ್ದಾರೆ. ಹೀಗೆ ವಶಪಡಿಸಿಕೊಂಡಿರುವ ಚಿನ್ನದ ಬೆಲೆ ಸುಮಾರು 34.5 ಲಕ್ಷ […]

ದುಬೈನಿಂದ ಅಕ್ರಮವಾಗಿ ಚಿನ್ನ ಸ್ಮಗಲ್‌ ಮಾಡುತ್ತಿದ್ದ ಖದೀಮರು ಅರೆಸ್ಟ್‌
Follow us on

ಚೆನ್ನೈ: ಕೇರಳದ ಗೋಲ್ಡ್‌ ಸ್ಮಗಲ್‌ ಘಟನೆಯು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ದುಬೈನಿಂದ ಅಕ್ರಮವಾಗಿ ಚಿನ್ನ ತಂದಿದ್ದ ಇಬ್ಬರು ಪ್ರಯಾಣಿಕರು ಸಿಕ್ಕುಬಿದ್ದಿದ್ದಾರೆ.

ಚೆನ್ನೈನ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರನ್ನು ಸಂಶಯದ ಮೇಲೆ ಪರೀಕ್ಷೆಗೆ ಒಳಪಡಿಸಿದಾಗ, ಅವರ ಬೆಲ್ಟ್‌ನಲ್ಲಿ ಪಾಲಿಥಿನ್‌ನಲ್ಲಿ ಅಡಗಿಸಿಟ್ಟಿದ್ದ 731 ಗ್ರಾಂ‌ ಚಿನ್ನ ಸಿಕ್ಕಿದೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಚಿನ್ನವನ್ನು ಜಫ್ತಿ ಮಾಡಿದ್ದಾರೆ.

ಹೀಗೆ ವಶಪಡಿಸಿಕೊಂಡಿರುವ ಚಿನ್ನದ ಬೆಲೆ ಸುಮಾರು 34.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚೆನ್ನೈನ ಕಸ್ಟಮ್ಸ್‌ ಅಧಿಕಾರಿಗಳು, ಮುಂದಿನ ತನಿಖೆ ನಡೆಸುತ್ತಿದ್ದಾರೆ.