ಶೀಘ್ರದಲ್ಲೇ ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದುಹೋಗಲಿದೆ ಚೆನ್ನೈ ಮೆಟ್ರೋ ರೈಲು

|

Updated on: Jan 03, 2024 | 6:31 PM

ಶೀಘ್ರದಲ್ಲೇ ಚಾಲಕ ರಹಿತ ಮೆಟ್ರೋ ರೈಲುಗಳು ಚೆನ್ನೈ ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗುತ್ತವೆ, ಅಲ್ಲಿ ನಿಲ್ದಾಣಗಳು ಮೂರನೇ ಮಹಡಿಯಲ್ಲಿರುತ್ತವೆ ಮತ್ತು ಉಳಿದವು ವಾಣಿಜ್ಯ ಮತ್ತು ಕಚೇರಿ ಸ್ಥಳಗಳಾಗಿವೆ.

ಶೀಘ್ರದಲ್ಲೇ ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದುಹೋಗಲಿದೆ ಚೆನ್ನೈ ಮೆಟ್ರೋ ರೈಲು
ಚೆನ್ನೈ ಮೆಟ್ರೋ ರೈಲು
Follow us on

ಚೆನ್ನೈ ಜನವರಿ 03: ಚೀನಾದ ಕಟ್ಟಡವೊಂದರ ಮೂಲಕ ಮೆಟ್ರೋ ಹಾದು ಹೋಗುವುದನ್ನು ನೋಡಿದ್ದೀರಾ? ಅದೇ ರೀತಿ ಚೆನ್ನೈನಲ್ಲಿ (Chennai) ಕಟ್ಟಡದ ಮೂಲಕ ಹಾದು ಹೋಗಲಿದೆ. ಚೆನ್ನೈ ಮೆಟ್ರೋ (Chennai Metro) ರೈಲ್ ಲಿಮಿಟೆಡ್ (CMRL) ಮುಂಬರುವ ಹಂತ II ಮೆಟ್ರೋದಲ್ಲಿ 3 ಸ್ಥಳಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಯೋಜಿಸಿದೆ. ಅದರಂತೆ, ಚಾಲಕ ರಹಿತ ಮೆಟ್ರೋ ರೈಲುಗಳು ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗುತ್ತವೆ, ಅಲ್ಲಿ ನಿಲ್ದಾಣಗಳು ಮೂರನೇ ಮಹಡಿಯಲ್ಲಿರುತ್ತವೆ ಮತ್ತು ಉಳಿದವು ವಾಣಿಜ್ಯ ಮತ್ತು ಕಚೇರಿ ಸ್ಥಳಗಳಾಗಿವೆ.

ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ತಿರುಮಂಗಲಂ ಮೇಲ್ಸೇತುವೆ ಬಳಿ 450 ಮೀ ಉದ್ದದ ಭೂಮಿ ಮತ್ತು ಮೂರು ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತಿರುಮಂಗಲಂನಲ್ಲಿನ ಮೇಲ್ಸೇತುವೆಯ ಮೇಲೆ ಮೆಟ್ರೋ ನಿಲ್ದಾಣದೊಂದಿಗೆ ಸಮಗ್ರ ವಾಕ್‌ವೇ ನಿರ್ಮಿಸುವ ಯೋಜನೆ ಇತ್ತು. ಆದರೆ, ಸಂಚಾರಕ್ಕೆ ಅಡ್ಡಿಯಾಗಿರುವ ಮೇಲ್ಸೇತುವೆಯನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ ಎಂದು ಸಿಎಂಆರ್ ಎಲ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆನ್ನೈನ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಎರಡನೇ ಹಂತದ ಮೆಟ್ರೋ ಯೋಜನೆಯು ಮಾಧವರಂ-ಸಿರುಚೆರಿ, ಪೂನಮಲ್ಲೆ-ವಿವೇಕಾನಂದ ಇಲ್ಲಂ, ಮತ್ತು ಮಾಧವರಂನಿಂದ ಶೋಲಿಂಗನಲ್ಲೂರು ಎಂಬ ಮೂರು ಮಾರ್ಗಗಳನ್ನೊಳಗೊಂಡಿದ್ದು 119 ಕಿ.ಮೀ ದೂರ ಕ್ರಮಿಸಲಿದೆ. ಇದರ ವೆಚ್ಚ ಅಂದಾಜು ₹69,000 ಕೋಟಿ.

ಚೆನ್ನೈ ಮೆಟ್ರೋದ II ನೇ ಹಂತವು ಸಿದ್ಧವಾದಾಗ, ಮೆಟ್ರೋ ನಿಲ್ದಾಣಗಳಿಂದ ಕೆಲವೇ ಮೀಟರ್‌ಗಳಷ್ಟು ನಡೆದುಕೊಂಡು MTC ಬಸ್‌ಗೆ ಹೋಗಬಹುದು. ಪ್ರಯಾಣಿಕರು MTC ಮತ್ತು ಮೆಟ್ರೋ ನಡುವೆ ಬದಲಾಯಿಸಲು ಅನುವು ಮಾಡಿಕೊಡುವ ಕ್ರಮದಲ್ಲಿ ಮುಂಬರುವ ಹಂತ II ಮೆಟ್ರೋದಲ್ಲಿನ ಎಲ್ಲಾ ನಿಲ್ದಾಣಗಳು ಬಸ್ ನಿಲ್ದಾಣದಿಂದ 50ಮೀ-100 ಮೀ ಒಳಗೆ ಇರುತ್ತವೆ. ಸಿಎಂಆರ್‌ಎಲ್ ನಿಲ್ದಾಣಗಳ ವಿನ್ಯಾಸವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಚೆನ್ನೈ ಮೆಟ್ರೋ ಹಂತ II ಗಾಗಿ ಮೂರು ಬೋಗಿಗಳ ಚಾಲಕರಹಿತ ರೈಲುಗಳ ಮೊದಲ ಸೆಟ್ ಆಗಸ್ಟ್ 2024 ರ ವೇಳೆಗೆ ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೇರಳದ ತ್ರಿಶ್ಶೂರ್​​ನಲ್ಲಿ ಸ್ತ್ರೀ ಶಕ್ತಿ ಮೋದಿಕ್ಕೊಪ್ಪಂ; ಪ್ರಧಾನಿಗೆ ಅದ್ದೂರಿ ಸ್ವಾಗತ

ಏತನ್ಮಧ್ಯೆ, ಇತ್ತೀಚಿನ ಅಂಕಿಅಂಶಗಳು 29 ಜೂನ್ 2015 ರಿಂದ 31 ಡಿಸೆಂಬರ್ 2023 ರವರೆಗೆ 25 ಕೋಟಿಗೂ ಹೆಚ್ಚು ಪ್ರಯಾಣಿಕರು ಚೆನ್ನೈ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಹೇಳಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ