Chhattisgarh Accident: ಛತ್ತೀಸ್‌ಗಢದಲ್ಲಿ ಕಾರಿಗೆ ಕಬ್ಬಿಣ ತುಂಬಿದ ಟ್ರಕ್ ಡಿಕ್ಕಿ: 4 ಮಂದಿ ಸಾವು

ಕಬ್ಬಿಣ ತುಂಬಿದ ಟ್ರಕ್​ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಮತ್ತು ಅವರ ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

Chhattisgarh Accident: ಛತ್ತೀಸ್‌ಗಢದಲ್ಲಿ ಕಾರಿಗೆ ಕಬ್ಬಿಣ ತುಂಬಿದ ಟ್ರಕ್ ಡಿಕ್ಕಿ: 4 ಮಂದಿ ಸಾವು
ಅಪಘಾತ
Image Credit source: India Today

Updated on: Feb 22, 2023 | 9:40 AM

ಕಬ್ಬಿಣ ತುಂಬಿದ ಟ್ರಕ್​ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಮತ್ತು ಅವರ ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಗುಂಡರ್ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪಡವಾಡ ಬಳಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ಮಹಿಳೆ, ಸಿಮ್ರಾನ್ ಸಲೂಜಾ ಮತ್ತು ಅವರ ಮಗಳು ಯಾವುದೋ ಕೆಲಸದ ನಿಮಿತ್ತ ರಾಯ್‌ಪುರಕ್ಕೆ ತೆರಳಿದ್ದ ವೇಳೆ ಅವರ ಕಾರು ಕೆಟ್ಟು ನಿಂತಿತ್ತು. ನಂತರ ಅವರು ಕಾರನ್ನು ಬಾಡಿಗೆಗೆ ಕಾರೊಂದು ತೆಗೆದುಕೊಂಡು ಬಲೋದ್‌ಗೆ ಹಿಂತಿರುಗುತ್ತಿದ್ದರು.

ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಅಪಘಾತದ ವೇಳೆ ಕಾರಿನಲ್ಲಿ ಬಾಡಿಗೆ ಕಾರಿನ ಚಾಲಕ, ಸಿಮ್ರಾನ್, ರಾಜವೀರ್ ಸಲೂಜಾ ಸೇರಿದಂತೆ ನಾಲ್ವರು ಇದ್ದರು. ಅವರು ಖಪಡವಾಡ ತಲುಪಿದಾಗ ಅವರ ಕಾರು ಕಬ್ಬಿಣವನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ, ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು

ಸ್ಥಳಕ್ಕಾಗಮಿಸಿ ಕಾರಿನಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಷ್ಟರಲ್ಲಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ