ಅತ್ತ ರಷ್ಯಾ ಜತೆ ಭಾರತ ಚರ್ಚೆ, ಇತ್ತ ಅರುಣಾಚಲದಲ್ಲಿ 5 ಯುವಕರು ಕಿಡ್ನ್ಯಾಪ್​

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿಯ ನ್ಯಾಚೊದಿಂದ ಐವರು ಯುವಕರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯುವಕರನ್ನ ಚೀನಾ ಕಿಡ್ನ್ಯಾಪ್ ಮಾಡಿದೆ ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಆರೋಪ ಮಾಡಿದ್ದಾರೆ. ಚೀನಾದೊಂದಿಗೆ ತನ್ನ ಗಡಿ ಹಂಚಿಕೊಂಡಿರುವ ಭಾರತದ ಅರುಣಾಚಲ ಪ್ರದೇಶದಲ್ಲಿನ ಅಪ್ಪರ್ ಸುಬನ್ಸಿರಿಯ ನ್ಯಾಚೊದಿಂದ ಐವರು ಯುವಕರು ಕಣ್ಮರೆಯಾಗಿದ್ದು, ನಮ್ಮ ದೇಶದ ಯುವಕರನ್ನು ಕುತಂತ್ರಿ ಚೀನಾದ PLA (ಪೀಪಲ್ಸ್ ಲಿಬರೇಶನ್ ಆರ್ಮಿ) ಅಪಹರಣ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಕಾಂಗ್ರೇಸ್​ ಶಾಸಕರಾದ ನಿನೊಂಗ್ ಎರಿಂಗ್ ಆರೋಪ ಮಾಡಿದ್ದಾರೆ. ಇತ್ತ […]

ಅತ್ತ ರಷ್ಯಾ ಜತೆ ಭಾರತ ಚರ್ಚೆ, ಇತ್ತ ಅರುಣಾಚಲದಲ್ಲಿ 5 ಯುವಕರು ಕಿಡ್ನ್ಯಾಪ್​

Updated on: Sep 05, 2020 | 12:39 PM

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿಯ ನ್ಯಾಚೊದಿಂದ ಐವರು ಯುವಕರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯುವಕರನ್ನ ಚೀನಾ ಕಿಡ್ನ್ಯಾಪ್ ಮಾಡಿದೆ ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಆರೋಪ ಮಾಡಿದ್ದಾರೆ.

ಚೀನಾದೊಂದಿಗೆ ತನ್ನ ಗಡಿ ಹಂಚಿಕೊಂಡಿರುವ ಭಾರತದ ಅರುಣಾಚಲ ಪ್ರದೇಶದಲ್ಲಿನ ಅಪ್ಪರ್ ಸುಬನ್ಸಿರಿಯ ನ್ಯಾಚೊದಿಂದ ಐವರು ಯುವಕರು ಕಣ್ಮರೆಯಾಗಿದ್ದು, ನಮ್ಮ ದೇಶದ ಯುವಕರನ್ನು ಕುತಂತ್ರಿ ಚೀನಾದ PLA (ಪೀಪಲ್ಸ್ ಲಿಬರೇಶನ್ ಆರ್ಮಿ) ಅಪಹರಣ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಕಾಂಗ್ರೇಸ್​ ಶಾಸಕರಾದ ನಿನೊಂಗ್ ಎರಿಂಗ್ ಆರೋಪ ಮಾಡಿದ್ದಾರೆ.

ಇತ್ತ ಅರುಣಾಚಲ ಪ್ರದೇಶದಲ್ಲಿ ಐವರು ಯುವಕರು ನಾಪತ್ತೆಯಾಗಿದ್ದರೆ, ಅತ್ತ ರಾಜನಾಥ್ ಸಿಂಗ್ ರಷ್ಯಾದಲ್ಲಿ ಚೀನಾದ ರಕ್ಷಣಾ ಮಂತ್ರಿಗಳನ್ನು ಭೇಟಿ ಮಾಡಿ ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.