10 ವರ್ಷದಲ್ಲಿ 8 ಪತಿಯರಿಗೆ ಉಂಡೆ ನಾಮ ಹಾಕಿದ ಸುಪ್ಪುನಾತಿ, ಏನ್ಮಾಡ್ತಿದ್ದಳು ಗೊತ್ತಾ!?

10 ವರ್ಷದಲ್ಲಿ 8 ಪತಿಯರಿಗೆ ಉಂಡೆ ನಾಮ ಹಾಕಿದ ಸುಪ್ಪುನಾತಿ, ಏನ್ಮಾಡ್ತಿದ್ದಳು ಗೊತ್ತಾ!?
ಸಾಂದರ್ಭಿಕ ಚಿತ್ರ

ಲಕ್ನೋ: ಹತ್ತು ವರ್ಷಗಳಲ್ಲಿ 8 ವೃದ್ಧರೊಟ್ಟಿಗೆ ವಿವಾಹವಾಗಿ ಕೊನೆಗೆ ಅವರನ್ನ ದೋಚಿ ಪರಾರಿಯಾಗಿರುವ ಐನಾತಿ ಮಹಿಳೆಯೊಬ್ಬಳ ರೋಚಕ ಸ್ಟೋರಿ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೆಲವು ತಿಂಗಳ ಹಿಂದೆ 66 ವರ್ಷದ ವೃದ್ಧನೊಬ್ಬನಿಗೆ ಮ್ಯಾಟ್ರಿಮೋನಿ ಏಜೆನ್ಸಿ ಮೂಲಕ ಈ ಕಿಲಾಡಿ ಮಹಿಳೆಯ ಪರಿಚಯವಾಗಿತ್ತಂತೆ. ವೃದ್ಧ ಮತ್ತು ಮಹಿಳೆ ಪರಸ್ಪರ ಒಬ್ಬರನೊಬ್ಬರು ಒಪ್ಪಿಕೊಂಡು ವಿವಾಹ ಸಹ ಆದರು. ವೃದ್ಧನೊಟ್ಟಿಗೆ ಅನ್ಯೋನ್ಯವಾಗಿ ದಾಂಪತ್ಯ ನಡೆಸುತ್ತಿದ್ದ ಮದನಾರಿ, ಕೊನೆಗೆ ಒಂದು ದಿನ ಇದಕ್ಕಿದ್ದಂತೆ ಮನೆಯಲ್ಲಿದ್ದ 15 ಲಕ್ಷ ರೂಪಾಯಿ ಮೌಲ್ಯ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿಬಿಟ್ಟಳಂತೆ!

ಪತ್ನಿಯ ವಂಚನೆಗೆ ಬೇಸರಗೊಂಡ ವೃದ್ಧ ಈ ಕುರಿತು ದೂರು ದಾಖಲಿಸಲು ಘಾಜಿಯಾಬಾದ್​ ಠಾಣೆಗೆ ಹೋದಾಗ ಆತನಿಗೆ ಮತ್ತೊಂದು ಶಾಕ್​ ಎದುರಾಗಿದೆ. ಅದೇನಪ್ಪಾ ಅಂದರೆ, ಈ ಬೆಡಗುಗಾತಿ ಇವರಂತೆಯೇ 7 ವೃದ್ಧರಿಗೂ ಸಹ ಮೋಸಮಾಡಿದ್ದಾಳಂತೆ.

ಕಳೆದ 10 ವರ್ಷಗಳಿಂದ ಇದನ್ನೇ ಕಸುಬಾಗಿ ಮಾಡಿಕೊಂಡಿದ್ದ ಮಹಿಳೆಯ ವಿರುದ್ಧ ದೂರುಗಳು ದಾಖಲಾಗಿದ್ದು ಮೋಸಗಾತಿಯ ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Published On - 4:33 pm, Sat, 5 September 20

Click on your DTH Provider to Add TV9 Kannada