ದೆಹಲಿ: ಮಹಾಮಾರಿ ಕೊರೊನಾ ವೈರಸ್ನ ಇಡೀ ವಿಶ್ವಕ್ಕೆ ಹಬ್ಬಿಸಿದ್ದ ಕುತಂತ್ರಿ ಚೀನಾ ಭಾರತದ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸುತ್ತಿದೆ. ಭಾರತದ ಗಣ್ಯರ ಬಗ್ಗೆ ಗೂಢಚಾರಿಕೆ ಮಾಡುತ್ತಿದೆ.
ಝೆನ್‌ಹುವಾ ಡೇಟಾ ಇನ್ಫಾರ್ಮೇಷನ್ ಟೆಕ್ನಾಲಜಿ ಕಂ.ಲಿ. ಎಂಬ ಶೆನ್‌ಝೆನ್ ಮೂಲದ ಈ ಕಂಪನಿಯಿಂದ ಗೂಢಚಾರಿಕೆ ಮಾಡುತ್ತಿದೆ. ಬೇರೆ ದೇಶಗಳ ಮೇಲೆ ಕಣ್ಣಿಡುವುದೇ ಈ ಕಂಪನಿ ಕೆಲಸ. ಈಗಾಗಲೇ ಭಾರತದ ಗಣ್ಯರ ಡೇಟಾ ಸಂಗ್ರಹಿಸುತ್ತಿದೆ.
ಐವರು ಮಾಜಿ ಪ್ರಧಾನಿಗಳು, 24 ಮುಖ್ಯಮಂತ್ರಿಗಳು, 350 ಸಂಸದರು, 700 ನಾಯಕರು, ಗಣ್ಯರ ಸಂಬಂಧಿಗಳು, ಮೇಯರ್, ಉಪಮೇಯರ್‌ಗಳು, ಸೇನೆಯಲ್ಲಿರುವವರು ಸೇರಿದಂತೆ ಸುಮಾರು 10,000 ಜನರು ಮತ್ತು ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಚೀನಾ ಸರ್ಕಾರ ಹಲವರ ಡೇಟಾ ಸಂಗ್ರಹಿಸುತ್ತಿದೆ.
Published On - 7:06 am, Mon, 14 September 20