ತಾರಸಿಯಲ್ಲಿ ಓದುತ್ತಾ ಕುಳಿತಿದ್ದ ವಿದ್ಯಾರ್ಥಿನಿಯನ್ನು ಮಂಗಗಳು ತಳ್ಳಿ ಬೀಳಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿದ್ಯಾರ್ಥಿನಿ 10ನೇ ತರಗತಿ ಓದುತ್ತಿದ್ದಳು, ಪರೀಕ್ಷೆ ಹತ್ತಿರದಲ್ಲಿರುವುದರಿಂದ ತಾರಸಿಯಲ್ಲಿ ಓದುತ್ತಾ ಕುಳಿತಿರುವಾಗ ಮಂಗಗಳ ಗುಂಪೊಂದು ಆಕೆಯನ್ನು ತಳ್ಳಿ ಬೀಳಿಸಿ ಹತ್ಯೆ ಮಾಡಿರುವ ಘಟನೆ ಇದಾಗಿದೆ. ಮೃತಳ ಹೆಸರು ಪ್ರಿಯಾ ಕುಮಾರ್.
ಕೋತಿಗಳ ಗುಂಪು ತಾರಸಿಯಲ್ಲಿ ವಿದ್ಯಾರ್ಥಿನಿಗೆ ಕಾಟ ಕೊಡಲು ಶುರು ಮಾಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಿಯಾ ತುಂಬಾ ಗಾಬರಿಯಾದಳು, ಅವಳು ಓಡಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯವರು ಆಕೆಯನ್ನು ನೋಡಿದ ತಕ್ಷಣ ಕೂಗಲು ಶುರು ಮಾಡಿದರು. ಆಕೆ ಮೆಟ್ಟಿಲುಗಳ ಕಡೆಗೆ ಓಡಿದ್ದಳು. ಆದರೆ ಕೋತಿಗಳು ಆಕೆಯ ಮೇಲೆ ಆಕ್ರಮಣ ಮಾಡಿ ಆಕೆಯನ್ನು ಮೇಲಿಂದ ಕೆಳಗೆ ತಳ್ಳಿದ್ದವು.
ಆಕೆಯ ತಲೆಯ ಹಿಂಭಾಗಕ್ಕೆ ತೀವ್ರ ಪೆಟ್ಟಾಗಿತ್ತು, ಜತೆಗೆ ದೇಹದ ಇತರೆ ಭಾಗಗಳಲ್ಲೂ ಗಂಭೀರ ಗಾಯಗಳಾಗಿದ್ದವು, ತಕ್ಷಣವೇ ಪ್ರಜ್ಞೆ ತಪ್ಪಿದ್ದಳು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಾಲಕಿಯ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ ಎಂದು ಭಗವಾನ್‌ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಜೀತ್ ಕುಮಾರ್ ಚೌಧರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ:
ಹುಕ್ಕೇರಿ: ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು, ತಾಯಿಯ ಆಕ್ರಂದನ: ಸ್ಥಳೀಯರಿಂದ ಆರೈಕೆ
ನಾವು ತನಿಖೆಗಾಗಿ ಅಲ್ಲಿಗೆ ಹೋದೆವು. ಕುಟುಂಬ ಸದಸ್ಯರು ಬಾಲಕಿಯನ್ನು ಸದರ್ ಆಸ್ಪತ್ರೆಗೆ ದಾಖಲಿಸಿದ್ದರು, ಅಲ್ಲಿ ವೈದ್ಯರು ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕುಟುಂಬ ಸದಸ್ಯರು ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದರು ಮತ್ತು ಯಾರ ವಿರುದ್ಧವೂ ಯಾವುದೇ ದೂರು ದಾಖಲಿಸಿಲ್ಲ, ಎಂದು ಚೌಧರಿ ತಿಳಿಸಿದ್ದಾರೆ. ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಮಂಗಗಳು ಅವಾಂತರ ಸೃಷ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ