ಹುಕ್ಕೇರಿ: ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು, ತಾಯಿಯ ಆಕ್ರಂದನ: ಸ್ಥಳೀಯರಿಂದ ಆರೈಕೆ
ಘಟನೆ ನೋಡಿದ ಇನ್ನಿತರೆ ವಾಹನ ಸವಾರರು ಅಪಘಾತ ಮಾಡಿ, ಮರಿ ಕೋತಿಯ ಸಾವಿಗೆ ಮತ್ತು ತಾಯಿ ಕೋತಿ ಗಾಯಗೊಳ್ಳುವಂತೆ ಮಾಡಿದ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತವಾದ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ ಮಂಗನಿಗೆ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಮರಿ ಮಂಗ ಸಾವಿಗೀಡಾಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಇದ ಕಂಡ ದಾರಿಹೋಕರ ಕರುಳು ಹಿಂಡುವಂತಾಗಿದೆ. ಅಪಘಾತ ಮಾಡಿದ (Road Accident) ಕಾರು ಚಾಲಕ ಎಸ್ಕೇಪ್ ಆಗಿಬಿಟ್ಟಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನೂ? ಸ್ಥಳೀಯರು (Localites) ಮತ್ತಿತರ ವಾಹನ ಸವಾರರಿಂದ ದೊಡ್ಡ ಮಂಗನ ರಕ್ಷಣೆ ಮಾಡಿ, ಮರಿ ಮಗನ (Baby Monkey) ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ… ರಸ್ತೆಯಲ್ಲಿ ಶವವಾಗಿ ಬಿದ್ದ ಪುಟ್ಟ ಮಂಗ, ಅದ ಕಂಡು ಶಾಕ್ ನಲ್ಲಿ ಹೆತ್ತ ತಾಯಿ ಮಂಗ, ಸ್ಥಳೀಯರಿಂದ ರಕ್ಷಣೆ ನೀರು ಕುಡಿಸಿ ಆರೈಕೆ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಕ್ರಾಸ್ ಹೊರ ವಲಯದಲ್ಲಿ (Hukkeri, Belagavi).
ಹೌದು ನಿನ್ನೆ ಗುರುವಾರ ಮಧ್ಯಾಹ್ನದ ಹೊತ್ತಿಗೆ ರಸ್ತೆ ದಾಟುತ್ತಿದ್ದ ಕೋತಿಗೆ ಕಾರು ಡಿಕ್ಕಿಯಾಗಿದೆ. ಇದರ ಪರಿಣಾಮ ಮರಿ ಕೋತಿ ಸ್ಥಳದಲ್ಲೇ ಸಾವನ್ನಪ್ಪಿದೆ. ನಿಡಸೋಸಿ ಕಡೆಗೆ ಹೊರಟ್ಟಿದ್ದ ಕಾರು ಡಿಕ್ಕಿ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿದೆ. ಇತ್ತ ರಸ್ತೆಯಲ್ಲೇ ಮರಿ ಕೋತಿ ಒದ್ದಾಡಿ ಜೀವ ಬಿಟ್ಟಿದ್ದರೆ ತಾಯಿ ಕೋತಿ ರಸ್ತೆಯಿಂದ ಒಂದು ಅಡಿಯ ದೂರದಲ್ಲಿ ಹೋಗಿ ಬಿದ್ದಿತ್ತು.
ಇದನ್ನ ಗಮನಿಸಿದ ವಾಹನ ಸವಾರರು ಮತ್ತು ಕೆಲ ಸ್ಥಳೀಯ ಯುವಕರು ಕೂಡಲೇ ಜೀವಂತ ಇದ್ದ ಕಾರಣ ತಾಯಿ ಕೋತಿಯನ್ನ ರಕ್ಷಣೆ ಮಾಡಿದರು. ಅದಕ್ಕೆ ನೀರು ಕುಡಿಸಿ ಕೆಲ ಹೊತ್ತು ಹಿಡಿದುಕೊಂಡು ಕುಳಿತು ಸಮಾಧಾನ ಪಡಿಸಿದರು. ಇದೇ ವೇಳೆ ತನ್ನ ಕರುಳು ಬಳ್ಳಿ ರಸ್ತೆಯಲ್ಲಿ ಸತ್ತು ಬಿದ್ದಿದ್ದನ್ನ ಕಂಡ ತಾಯಿ ಕೋತಿ ಆಕ್ರಂದನ ಮುಗಿಲು ಮುಟ್ಟಿದ್ದು ಎಲ್ಲರ ಕರುಳು ಹಿಂಡುವಂತಿತ್ತು.
ಇನ್ನು ರಸ್ತೆಯಲ್ಲಿ ಸತ್ತು ಬಿದ್ದಿದ್ದ ಕೋತಿಯನ್ನ ತಕ್ಷಣ ರಸ್ತೆಯಿಂದ ಹೊರ ತೆಗೆದು ಓರ್ವ ವಾಹನ ಸವಾರ ಅದನ್ನ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿ ಬೇರೊಂದು ಕಡೆ ಮಣ್ಣು ಮಾಡಿದ್ದಾರೆ. ಇತ್ತ ನೀರು ಕುಡಿಸಿ ರಕ್ಷಣೆ ಮಾಡಿದ ತಾಯಿ ಕೋತಿಯೂ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಬಳಿಕ ಅಲ್ಲಿಂದ ಓಡಿ ಹೋಗಿದೆ.
Also Read: Daily Horoscope – ನಿಮ್ಮ ನಿಷ್ಕಾಳಜಿಯು ಅನೇಕ ವೈಷಮ್ಯಕ್ಕೆ ಕಾರಣವಾಗುವುದು
ಘಟನೆ ನೋಡಿದ ವಾಹನ ಸವಾರರು ಕೂಡ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತ ಆಗಿದೆ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
ಒಟ್ಟಿನಲ್ಲಿ ಬರಗಾಲದ ಸಂದರ್ಭದಲ್ಲಿ ನೀರಿಗಾಗಿ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗ್ತಿರುತ್ತವೆ. ಇದೇ ವೇಳೆ ರಸ್ತೆ ದಾಟಲು ಕೂಡ ಮುಂದಾಗಿ ಸಾಕಷ್ಟು ಪ್ರಾಣಿಗಳು ಸಾವನ್ನಪ್ಪುತ್ತಿವೆ. ವಾಹನ ಸವಾರರು ಜಾಗೃತರಾಗಿ ಗಾಡಿ ಓಡಿಸುವ ಕೆಲಸ ಮಾಡಲಿ. ಅದೇನೆ ಇರಲಿ ಇಂದು ಮಗುವನ್ನ ಕಳೆದುಕೊಂಡ ತಾಯಿ ಕೋತಿಯ ಆಕ್ರಂದನ ಎಲ್ಲರ ಕರುಳು ಚುರ್ ಅನ್ನುವಂತಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ