ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!

International Women’s Day 2024: ಆಕೆಗೆ ಮದುವೆಯಾಗಿ ಆಗಷ್ಟೇ ಏಳು ತಿಂಗಳ ಗರ್ಭಿಣಿ ಈ ಸಂದರ್ಭದಲ್ಲಿ ಗಂಡ ಮೃತಪಡುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಾದ ಮಹಿಳೆ ಜೀವನವೇ ನಿಂತು ಹೋಯ್ತು ಅಂತಾ ಶಾಕ್ ಗೆ ಒಳಗಾಗಿ ಬಿಡ್ತಾಳೆ. ಆದ್ರೇ ಈ ಶಾಕ್ ನಿಂದ ಹೊರ ಬಂದು ಮೂರನೇ ಕ್ಲಾಸ್ ಪಾಸ್ ಆಗಿದ್ದ ಆಕೆ ಶುರು ಮಾಡಿದ್ದು ತಾನೇ ಕಲ್ತಿದ್ದ ಕಸುಬು. ಕೌದಿ ಹೊಲಿಯಲು ಆರಂಭಿಸಿದ ಆಕೆ ಇದೀಗ ವರ್ಷಕ್ಕೆ 50-60 ಲಕ್ಷ ರೂಪಾಯಿ ದುಡಿಯುವ ಹೆಣ್ಣು ಮಗಳು...

ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!
ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು
Follow us
| Updated By: ಗಣಪತಿ ಶರ್ಮ

Updated on:Mar 08, 2024 | 2:25 PM

ಹೌದು ಕಷ್ಟಕಾಲದಲ್ಲಿ ಬದುಕಿನ ಬಂಡಿ ದೂಡಲು ನೆರವಾಗಲೆಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಹಳ್ಳಿಯಲ್ಲಿ ಮಹಿಳೆಯರು ಸಿದ್ಧಪಡಿಸಲು ಆರಂಭಿಸಿದ ‘ಕೌದಿ’ಗಳಿಗೆ ಭಾರತವಷ್ಟೇ ಅಲ್ಲ; ಈಗ ವಿದೇಶದಿಂದಲೂ ಬೇಡಿಕೆ ಬಂದಿದೆ. ಪ್ರಸಕ್ತ ವರ್ಷ 650 ಕೌದಿಗಳು ಮಾರಾಟವಾಗಿವೆ. ಈ ಪೈಕಿ 150 ಕೌದಿಗಳು ಅಮೆರಿಕನ್ನರ ಮನೆ ಸೇರಿವೆ. ರಾಜ್ಯದ ವಿವಿಧೆಡೆ ಸೀರೆ, ಹರಿದ ಅಂಗಿ, ಪ್ಯಾಂಟ್‌, ಧೋತರ ಹೀಗೆ… ವಿವಿಧ ಹಳೆ ಬಟ್ಟೆಗಳನ್ನು ಬಳಸಿ, ಕೌದಿ ತಯಾರಿಸಲಾಗುತ್ತಿದೆ. ಆದರೆ, ಚಿಕ್ಕಾಲಗುಡ್ಡದಲ್ಲಿ ರಾಜಸ್ಥಾನದ ಜೈಪುರ, ಬೆಳಗಾವಿ ತಾಲೂಕಿನ ಹುದಲಿ ಮತ್ತಿತರ ಖಾದಿ ಉತ್ಪಾದನಾ ಸಂಘಗಗಳಿಂದ ಹೊಸ ಕಾಟನ್‌ ಬಟ್ಟೆ ಖರೀದಿಸಿ, ಕೌದಿ ತಯಾರಿಸಲಾಗುತ್ತಿದೆ. ಆಧುನಿಕ ಶೈಲಿಗೆ ತಕ್ಕಂತೆ, ಅವುಗಳ ಮೇಲೆ ವಿವಿಧ ಹೂವುಗಳು, ತೇರು, ಪಗಡೆ ಮನೆ, ನಕ್ಷತ್ರ ಮತ್ತಿತರ ವಿನ್ಯಾಸ ತೆಗೆಯಲಾಗುತ್ತಿದೆ (International Women’s Day 2024).

ಮಾತಾ ಸಾವಿತ್ರಿಬಾಯಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರವ್ವ ಧಾರೋಜಿ ಆರಂಭದಲ್ಲಿ ಬ್ಯಾಂಕ್‌ನಲ್ಲಿ ₹5 ಲಕ್ಷ ಸಾಲ ಪಡೆದು, 10 ವರ್ಷಗಳ ಹಿಂದೆ ಕೌದಿ ತಯಾರಿಕೆ ಆರಂಭಿಸಿದ್ದರು. ತಾವು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಮಾರುತ್ತಿದ್ದರು. ಆದರೆ, ಇನ್ಫೊಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಈ ಕೌದಿಗಳಿಗೆ ಎಲ್ಲಿಲ್ಲದ ಬೇಡಿಕೆ ತಂದುಕೊಟ್ಟರು. ಅಲ್ಲಿಂದ ಕೌದಿಗೆ ವಿದೇಶದಲ್ಲಿಯೂ ಬಂತೂ ಎಲ್ಲಿಲ್ಲದ ಬೇಡಿಕೆ. ಇದರಿಂದ ಶಾರವ್ವನ ಬದುಕು ಬದಲಾಯಿತು…

ಇದನ್ನೂ ಓದಿ: ವಾಸ್ತು ಹೆಸರಿನಲ್ಲಿ, ಬರಗಾಲದ ನಡುವೆ ನೂತನ ಕಛೇರಿಗಾಗಿ ದುಂದು ವೆಚ್ಚ ಮಾಡಿದರಾ ತಹಶೀಲ್ದಾರ್ ಮೇಡಂ?

ಚಿಕ್ಕಾಲಗುಡ್ಡ ಮತ್ತು ಹಂಚಿನಾಳ ಗ್ರಾಮದಲ್ಲಿ 300 ಮಹಿಳೆಯರು ಕೌದಿ ಸಿದ್ಧಪಡಿಸುತ್ತಾರೆ. ಈ ಪೈಕಿ 30 ಮಹಿಳೆಯರು ನಮ್ಮ ಶಾರವ್ವ ಅವರ ಕಾರ್ಯಾಗಾರದಲ್ಲಿ ನಿಯಮಿತವಾಗಿ ಕೆಲಸ ಮಾಡುತ್ತಾರೆ. ಉಳಿದವರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಮನೆಯಿಂದಲೇ ಕೌದಿ ತಯಾರಿಸಿಕೊಡುತ್ತಾರೆ. ಬಹುತೇಕರು ಬಡವರು. ಕೊರೊನಾ, ಬರದಂಥ ಸಂದರ್ಭ ಅವರಿಗೆ ಈ ವೃತ್ತಿ ಕೈಹಿಡಿದಿದೆ. ಇಲ್ಲಿ ತಯಾರಾಗುವ ಕೌದಿಗಳಿಗೆ ಮಹಾರಾಷ್ಟ್ರದ ಕೊಲ್ಹಾಪುರ, ಗೋವಾ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಈ ಹಿಂದೆ ಅಮೆರಿಕದ ಓಂ ಆರ್ಟ್ಸ್‌ ಸಂಸ್ಥೆಯ ಮೂಲಕ ಅಮೆರಿಕಕ್ಕೆ ರಫ್ತು ಮಾಡುತ್ತಿದ್ದರು. ಈಗ ಸ್ವತಃ ತಾವೇ ರಫ್ತು ಪರವಾನಗಿ ತೆಗೆಯಿಸಿ, ನೇರವಾಗಿ ಅಮೆರಿಕಾಕ್ಕೆ ರಫ್ತು ಮಾಡುತ್ತಿರುವುದು ಹೆಮ್ಮೆಯ ಸಂಗತಿ…

ಕೌದಿಗಳ ಮಾರಾಟಕ್ಕಾಗಿ ಬೆಳಗಾವಿಯಲ್ಲಿ ಎರಡು ಮಳಿಗೆಗಳಿವೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯಡಿ ನಡೆಯುವ ಪ್ರದರ್ಶನಗಳಲ್ಲೂ ಮಾರಾಟವಾಗುತ್ತವೆ. ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 500 ಕೌದಿಗಳ ತಯಾರಿಕೆಗೆ ಆರ್ಡರ್‌ ನೀಡಿದ್ದರು. ಅವನ್ನು ತಯಾರಿಸಿಕೊಟ್ಟಿದ್ದಾರೆ. ಪ್ರತಿ ಕೌದಿಯ ಬೆಲೆ ₹5 ಸಾವಿರ ಇದೆ. ಸರಿಯಾಗಿ ಬಳಸಿದರೆ, ಹೆಚ್ಚಿನ ಅವಧಿಗೆ ಬಾಳಿಕೆ ಬರುತ್ತವೆ. ಕೈಯಿಂದಲೇ ಕೌದಿ ಹೆಣೆಯಲಾಗುತ್ತಿದ್ದು ಸಾಕಷ್ಟು ಶ್ರಮವನ್ನ ಮಹಿಳೆಯರು ಹಾಕುತ್ತಾರೆ. ಇನ್ನೂ ಅಚ್ಚುಕಟ್ಟಾಗಿ ತಯಾರಾಗುವ ಕೌದಿಗಳು ದೀರ್ಘಾವಧಿವರೆಗೂ ಬಳಸಬಹುದಾಗಿದೆ…

Also Read: ಅಧಿಕಾರಿಗಳ ಅನುಮತಿಯಿಲ್ಲದೆ 6 ತಿಂಗಳ ಹಿಂದೆ ಮಾಡಿದ್ದ ಸಮಾಧಿ ಶಿಫ್ಟ್​​ ಮಾಡಲು ಯತ್ನ! ಹೀಗ್ಯಾಕೆ? ಈಗ್ಯಾಕೆ?

ಇಲ್ಲಿ ಕೆಲಸ ಮಾಡುವ ಸ್ವಸಹಾಯ ಸಂಘದ ಮಹಿಳೆಯರು ಬರೀ ಕೌದಿಳನ್ನ ಮಾತ್ರ ತಯಾರು ಮಾಡುತ್ತಿಲ್ಲ. ಅದರ ಜತೆಗೆ ಇನ್ನೂ ಅನೇಕ ಸಾಮಾಗ್ರಿಗಳನ್ನ ತಯಾರು ಮಾಡುತ್ತಾ ಬದಕು ಕಟ್ಟಿಕೊಳ್ಳುತ್ತಿದ್ದಾರೆ. ಕೌದಿ ಜತೆಗೆ ಬಾಳೆನಾರಿನ ಉತ್ಪನ್ನಗಳು, ಕಾಟನ್‌ ಬ್ಯಾಗ್‌, ಪ್ಲಾಸ್ಟಿಕ್‌ ವೈಯರ್‌ ಬ್ಯಾಗ್‌, ಮಹಿಳೆಯರ ಪರ್ಸ್‌ ಕೂಡ ಸಿದ್ಧಪಡಿಸುತ್ತಾರೆ. ಇದರಿಂದಲೂ ಸಾಕಷ್ಟು ಸಂಪಾದನೆಯನ್ನ ಮಹಿಳೆಯರು ಮಾಡುತ್ತಿದ್ದಾರೆ…

ಇಂದಿನ ಸಮಾಜದಲ್ಲಿ ನೌಕರರಿಗಾಗಿ ಬಹಳಷ್ಟು ಪೈಪೋಟಿಯಿದೆ. ಹೀಗಿರುವಾಗ, ಗ್ರಾಮೀಣ ಕಲೆ ಇಲ್ಲಿನ ಮಹಿಳೆಯರ ಕೈಹಿಡಿದಿದೆ. ಹಲವು ಕುಟುಂಬಗಳನ್ನು ಸಲಹುತ್ತಿದೆ. ಶಾರವ್ವ ಧಾರೋಜಿ, ಅಧ್ಯಕ್ಷೆ, ಮಾತಾ ಸಾವಿತ್ರಿಬಾಯಿ ಸ್ವಸಹಾಯ ಸಂಘ. ಇನ್ನೂ ಶಾರವ್ವ ಅವರ ಕಾರ್ಯವನ್ನ ಕಂಡು ಸ್ವತಃ ಪ್ರೇರಣೆಗೊಂಡ ಕೊಪ್ಪಳದ ಗವಿಸಿದ್ದಪ್ಪ ಮಠದ ಸ್ವಾಮೀಜಿ ಅವರ ಮಠದಿಂದ ಕೊಡುವ ಪ್ರಶಸ್ತಿಯನ್ನ ಶಾರವ್ವ ಅವರಿಗೆ ನೀಡಿ ಗೌರವಿಸಿ ಹರಸಿ ಹಾರೈಸಿದ್ದಾರೆ. ಅಷ್ಟೆ ಅಲ್ಲದೇ ಮಹಿಳೆಯಿಂದ ಪ್ರೇರಣೆ ಪಡೆದುಕೊಂಡು ಹೋಗುವಂತೆ ನೆರದಿದ್ದ ಭಕ್ತರಿಗೂ ಹೇಳಿದ್ದರು..

ಹೌದು ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ಅನುಕೂಲವಾಗಲೆಂದು ಸುಧಾಮೂರ್ತಿ ಅವರು, ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಒಂದು ಸಾವಿರ ಕೌದಿ ತಯಾರು ಮಾಡಿಸಿದ್ದರು. ಅಲ್ಲಿನ ಮಹಿಳೆಯರು ಕೌದಿಯ ಹೊಲಿದುಕೊಟ್ಟರೆ, ನಾವು ಅವುಗಳ ಮೇಲೆ ವೈವಿಧ್ಯಮಯವಾದ ವಿನ್ಯಾಸ ಮಾಡಿಕೊಟ್ಟಿದ್ದೆವು. ಆ ವಿನ್ಯಾಸ ಬಹಳ ಮಂದಿಗೆ ಹಿಡಿಸಿತು. ನಂತರ ನಮ್ಮ ಕೌದಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು ಎಂದು ಮಾತಾ ಸಾವಿತ್ರಿಬಾಯಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರವ್ವ ಧಾರೋಜಿ ಹೆಮ್ಮೆಯಿಂದ ಟಿವಿ9ಗೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Fri, 8 March 24