ವಾಸ್ತು ಹೆಸರಿನಲ್ಲಿ, ಬರಗಾಲದ ನಡುವೆ ನೂತನ ಕಛೇರಿಗಾಗಿ ದುಂದು ವೆಚ್ಚ ಮಾಡಿದರಾ ತಹಶೀಲ್ದಾರ್ ಮೇಡಂ?

ಒಂದೆಡೆ ಬರಗಾಲ ಮತ್ತೊಂದೆಡೆ ಕಂದಾಯ ಕೆಲಸಗಳ ವಿಳಂಬದಿಂದ ದೊಡ್ಡಬಳ್ಳಾಪುರ ಜನರು ಪರದಾಡ್ತಿದ್ರೆ ಇತ್ತ ಅಧಿಕಾರಿಗಳು ಮಾತ್ರ ಕಛೇರಿ ಬದಲಾವಣೆ ಮಾಡಿಕೊಂಡು ಜನರ ಕೈಗೆ ಸಿಗದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಸಚಿವರು ಇತ್ತ ಗಮನಹರಿಸಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಸಬೇಕಿದೆ.

ವಾಸ್ತು ಹೆಸರಿನಲ್ಲಿ, ಬರಗಾಲದ ನಡುವೆ ನೂತನ ಕಛೇರಿಗಾಗಿ ದುಂದು ವೆಚ್ಚ ಮಾಡಿದರಾ ತಹಶೀಲ್ದಾರ್ ಮೇಡಂ?
ಬರಗಾಲದ ನಡುವೆ ನೂತನ ಕಛೇರಿಗಾಗಿ ದುಂದು ವೆಚ್ಚ ಮಾಡಿದರಾ ತಹಶೀಲ್ದಾರ್ ಮೇಡಂ?
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Mar 08, 2024 | 10:16 AM

ಅದು ದಶಕಗಳಿಂದ ಆ ತಾಲೂಕಿನ ಜನರ ಸಮಸ್ಯೆಗೆ ಸ್ವಂದಿಸುತ್ತಿದ್ದ ತಾಲೂಕು ದಂಡಾಧಿಕಾರಿಗಳ ನಾಡ ಕಛೇರಿ. ಆದ್ರೆ ದಶಕಗಳಿಂದ ಇದ್ದ ಆ ಕಛೇರಿಯನ್ನ ಇತ್ತೀಚೆಗಷ್ಟೆ ಬಂದ ತಹಶೀಲ್ದಾರ್ ವಾಸ್ತು ಹೆಸರಲ್ಲಿ ಶಿಫ್ಟ್​​ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಬರಗಾಲದ ನಡುವೆ ಸಾರ್ವಜನಿಕರ ಹಣವನ್ನ ತಹಶೀಲ್ದಾರ್ ದುಂದುವೆಚ್ಚ ಮಾಡಿಸಿದ್ರಾ ಅನ್ನೂ ಶಂಕೆ ವ್ಯಕ್ತವಾಗಿದೆ. ಅದು ಎಲ್ಲಿ ಅನ್ನೂ ವಿವರ ಇಲ್ಲಿದೆ.

ಎಸಿ, ವುಡ್ ವರ್ಕ್, ರೆಸ್ಟ್ ರೂಂ ಅಂತೆಲ್ಲ ಸುಸಜ್ಜಿತವಾಗಿಯೇ ಇದೆ ಆ ಕೊಠಡಿ. ಇಷ್ಟು ಸುಸಜ್ಜಿತ ಕೊಠಡಿಯಿದ್ದರೂ ಇಲ್ಲಿ ಕೆಳ ಹಂತದ ಸಿಬ್ಬಂದಿ ಟೇಬಲ್ ಹಾಕಿಕೊಂಡು ಕೆಲಸ ಮಾಡ್ತಿದ್ರೆ ಇತ್ತ ತಹಶೀಲ್ದಾರ್ ನೂತನ ಕೊಠಡಿಯಲ್ಲಿ ತಮ್ಮ ಕಛೇರಿ ತೆರೆದಿದ್ದಾರೆ. ಹೊಸ ಕಛೇರಿ ಹೊಸ ತಹಶೀಲ್ದಾರ್ ಅಂತ ಹೊಸ ಕಛೇರಿ ಮುಂದೆ ಜನ ಗಂಟೆಗಟ್ಟಲೆ ಕಾದು ಕೂರುತ್ತಿದ್ರೆ ಇತ್ತ ತಹಶೀಲ್ದಾರ್ ಮೇಡಂ ಮಾತ್ರ ಮೊದಲನೆ ಮಹಡಿಯಲ್ಲಿ ಸಿಬ್ಬಂದಿ ಜೊತೆ ಕೂತು ಕೆಲಸ ಮಾಡ್ತಿದ್ದಾರೆ. ಅರೇ ಇದೇನಪ್ಪ ತಹಶಿಲ್ದಾರ್ ಇಲ್ಯಾಕೆ ಬಂದ್ರು ಅಂತ ಅವರನ್ನೆ ಕೇಳಿದ್ರೆ ಅವರು ಹೇಳೋದು ಡ್ರೈನೇಜ್ ಕಥೆಯನ್ನ.

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ತಾಲೂಕು ಕಛೇರಿಯಲ್ಲಿ ಕಳೆದ ಹಲವು ದಶಕಗಳಿಂದ ಕಛೇರಿ ಒಳಗಡೆ ಬಂದ ಜನರಿಗೆ ಆರಂಭದಲ್ಲೆ ತಹಶೀಲ್ದಾರ್ ಸಿಗುವಂತೆ ಬಲ ಭಾಗದಲ್ಲಿ ತಹಶೀಲ್ದಾರ್ ಕಛೇರಿಯನ್ನ ಮಾಡಿದ್ರು. ಜೊತೆಗೆ ಕಳೆದ ಹಲವು ದಶಕಗಳಿಂದ ಇದೇ ತಹಶಿಲ್ದಾರ್ ಕಛೇರಿಯಲ್ಲಿ ಹತ್ತಾರು ಜನ ತಹಶೀಲ್ದಾರ್ಗಳು ಕರ್ತವ್ಯವನ್ನ ನಿರ್ವಹಿಸಿ ಜನರ ಕಷ್ಟಕ್ಕೆ ಸ್ವಂದಿಸುತ್ತಿದ್ರು.

ಆದ್ರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ದೊಡ್ಡಬಳ್ಳಾಪುರಕ್ಕೆ ನೂತನ ತಹಶೀಲ್ದಾರ್ ಆಗಿ ಬಂದ ವಿಭಾ ವಿದ್ಯಾ ರಾಥೋಡ್ ಎಂಬುವವರು ಕೆಲ ದಿನಗಳಷ್ಟೆ ಹಳೆ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ಹಳೆ ಕಛೇರಿಯಲ್ಲಿ ಡ್ರೈನೇಜ್ ಪ್ರಾಬ್ಲಂ ಆಗಿದೆ ಅನ್ನೂ ನೆಪದಲ್ಲಿ ಕಳೆದ ನಾಲ್ಕು ತಿಂಗಳಿಂದ ಬೇರೆ ಕೊಠಡಿಗೆ ಕಛೇರಿಯನ್ನ ಸ್ಥಳಾಂತರ ಮಾಡಿದ್ದಾರೆ.

ಇನ್ನು ಸ್ಥಳಾಂತರ ಮಾಡಿದ ಹಳೆ ಕಛೇರಿ ಮುಂದೆ ಯಾವುದೇ ಬೋರ್ಡ್ ಸಹ ಹಾಕದಿರುವುದು ಹೊಸ ಕಛೇರಿಯಲ್ಲಿಯೂ ತಹಶೀಲ್ದಾರ್ ಕೂರುತ್ತಿಲ್ಲ. ಹೀಗಾಗಿ ನಿತ್ಯ ಕಛೇರಿಗೆ ಬರುವ ಸಾರ್ವಜನಿಕರು ತಹಶೀಲ್ದಾರ್ ಇಲ್ಲ ಅಂತ ವಾಪಸ್ ಆಗ್ತಿದ್ದು ಜನರ ಸಮಸ್ಯೆಗೆ ಸ್ವಂದಿಸುತ್ತಿಲ್ಲ ಅಂತ ಆಕ್ರೋಶ ಹೊರ ಹಾಕ್ತಿದ್ದಾರೆ.

Also Read: ಅಧಿಕಾರಿಗಳ ಅನುಮತಿಯಿಲ್ಲದೆ 6 ತಿಂಗಳ ಹಿಂದೆ ಮಾಡಿದ್ದ ಸಮಾಧಿ ಶಿಫ್ಟ್​​ ಮಾಡಲು ಯತ್ನ! ಹೀಗ್ಯಾಕೆ? ಈಗ್ಯಾಕೆ?

ಸಾವಿರಾರು ರೂಪಾಯಿ ಸಾರ್ವಜನಿಕರ ಹಣವನ್ನ ಖರ್ಚು ಮಾಡಿ ತಹಶಿಲ್ದಾರ್ ನೂತನ ಕಛೇರಿ ಮಾಡಿಕೊಂಡಿದ್ದು ಹೊಸ ಕಛೇರಿಯಲ್ಲು ಅವರು ಕೂರುತ್ತಿಲ್ಲ. ಜೊತೆಗೆ ಹಳೆ ಕಛೇರಿಯಲ್ಲಿ ಕೆಳ ಹಂತದ ಸಿಬ್ಬಂದಿ ಕೆಲಸ ಮಾಡಲು ಅವಕಾಶ ನೀಡಿ ತಹಶೀಲ್ದಾರ್ ಮಾತ್ರ ದಿನಕ್ಕೊಂದು ಕಛೇರಿಯಲ್ಲಿ ಕೂರುತ್ತಿದ್ದಾರಂತೆ.

ಹೀಗಾಗಿ ಜನರು ಸಮಸ್ಯೆ ಹೇಳಿಕೊಳ್ಳೋಣ ಅಂತ ಕಛೇರಿಗೆ ಬಂದ್ರೆ ತಹಶೀಲ್ದಾರ್ ಕಾಣಿಸುತ್ತಲೆ ಇಲ್ಲ ಅಂತ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಈ ಬಗ್ಗೆ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರನ್ನೆ ಕೇಳಿದ್ರೆ ಅಲ್ಲಿ ಕಳೆದ ಮಳೆಗಾಲದಲ್ಲಿ ಡ್ರೈನೇಜ್ ಸಮಸ್ಯೆಯಾಗಿತ್ತು. ಹೀಗಾಗಿ ಕಛೇರಿ ಶಿಫ್ಟ್​​ ಮಾಡಿದ್ದೇನೆ. ಜೊತೆಗೆ ನಾನು ಬೇರೆ ಕಡೆ ಕುಳಿತು ಕೆಲಸ ಮಾಡ್ತಿದ್ದೀನಿ. ವಾಸ್ತು ದೋಷ ಅಂತೇನೂ ಇಲ್ಲ ಅಂತಿದ್ದಾರೆ.

ಒಂದೆಡೆ ಬರಗಾಲ ಮತ್ತೊಂದೆಡೆ ಕಂದಾಯ ಕೆಲಸಗಳ ವಿಳಂಬದಿಂದ ಸಾರ್ವಜನಿಕರು ಪರದಾಡ್ತಿದ್ರೆ ಇತ್ತ ಅಧಿಕಾರಿಗಳು ಮಾತ್ರ ಕಛೇರಿ ಬದಲಾವಣೆ ಮಾಡಿಕೊಂಡು ಜನರ ಕೈಗೆ ಸಿಗದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಜಿಲ್ಲಾಡಳಿತ ಹಾಗೂ ಸಚಿವರು ಇತ್ತ ಗಮನಹರಿಸಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ವಂದಿಸುವ ಕೆಲಸ ಮಾಡಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್