PM Modi PRASHAD gift: ಅರಮನೆ ನಗರಿ ಮೈಸೂರು ಪ್ರವಾಸೋದ್ಯಮಕ್ಕೆ ಪ್ರಧಾನಿ ಮೋದಿ ಬಂಪರ್ ಪ್ರಸಾದ್ ಕೊಡುಗೆ

ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ 45.70 ಕೋಟಿ ವೆಚ್ಚದಲ್ಲಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಅದಕ್ಕಾಗಿ ಪ್ರಧಾನಿ ಮೋದಿ ನಿನ್ನೆ ವರ್ಚುಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ರು. ನಾಡ ಅಧಿದೇವತೆ ಚಾಮುಂಡೇಶ್ವರಿ... ಚಾಮುಂಡಿ ನೆಲಸಿರುವ ಬೆಟ್ಟವನ್ನ ಮತ್ತಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು ಅಂತ ಹಲವು ದಿನಗಳ ಕನಸಾಗಿತ್ತು. ಇದೀಗ ಈ ಕನಸು ಸಾಕಾರಗೊಂಡಿದ್ದು, ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಅಡಿಗಲ್ಲು ಇಡಲಾಗಿದೆ.

PM Modi PRASHAD gift: ಅರಮನೆ ನಗರಿ ಮೈಸೂರು ಪ್ರವಾಸೋದ್ಯಮಕ್ಕೆ ಪ್ರಧಾನಿ ಮೋದಿ ಬಂಪರ್ ಪ್ರಸಾದ್ ಕೊಡುಗೆ
ಮೈಸೂರು ಪ್ರವಾಸೋದ್ಯಮಕ್ಕೆ ಪ್ರಸಾದ್, ಪ್ರಧಾನಿ ಮೋದಿ ಬಂಪರ್ ಕೊಡುಗೆ
Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on:Mar 08, 2024 | 9:40 AM

ಮೈಸೂರು ಅಂದ್ರೆ ಅರಮನೆ ಜೊತೆ (Mysore tourism) ಥಟ್ ಅಂತ ನೆನಪಾಗೋದು ಚಾಮುಂಡಿಬೆಟ್ಟ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲಸಿರುವ ಕ್ಷೇತ್ರಕ್ಕೆ (chamundeshwari hill) ಇದೀಗಾ ಕಾಯಕಲ್ಪ ಸಿಗುತ್ತಿದೆ. ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ 45.70 ಕೋಟಿ ವೆಚ್ಚದಲ್ಲಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಅದಕ್ಕಾಗಿ ಪ್ರಧಾನಿ ಮೋದಿ (PM narendra modi) ನಿನ್ನೆ ಗುರುವಾರ ವರ್ಚುಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ರು. ನಾಡ ಅಧಿದೇವತೆ ಚಾಮುಂಡೇಶ್ವರಿ… ಚಾಮುಂಡಿ ನೆಲಸಿರುವ ಬೆಟ್ಟವನ್ನ ಮತ್ತಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು ಅಂತ ಹಲವು ದಿನಗಳ ಕನಸಾಗಿತ್ತು. ಇದೀಗ ಈ ಕನಸು ಸಾಕಾರಗೊಂಡಿದ್ದು, ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ (PRASHAD – Pilgrimage Rejuvenation And Spiritual, Heritage Augmentation Drive scheme) ಅಡಿಗಲ್ಲು ಇಡಲಾಗಿದೆ. ಹೌದು, ಚಾಮುಂಡಿ ಬೆಟ್ಟವನ್ನ ಪ್ರಸಾದ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರಕ್ಕೆ 2021 ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಆ ಯೋಜನೆಗೆ ಅನುಮೋದನೆ ಸಿಕ್ಕಿ‌ ಶಂಕುಸ್ಥಾಪನೆ‌ ನೆರವೇರಿಸಲಾಯಿತು.‌ ಪ್ರಧಾನಿ ಮೋದಿ ಶ್ರೀನಗರದಲ್ಲಿ ವರ್ಚೂಲ್ ಮೂಲಕ‌ ಕಾರ್ಯಕ್ರಮದಲ್ಲಿ ಭಾಗಿಯಾದ್ರೆ‌ ಇಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ‌‌ ಶ್ರೀವತ್ಸ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಸದ್ಯ ಒಂದಡೆ ಲೋಕಸಭಾ ಚುನಾವಣೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಮೈಸೂರಿನ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ.

ಪ್ರಸಾದ್ ಯೋಜನೆಯಡಿ ಬೆಟ್ಟಕ್ಕೆ ಬರುವಂತಹ ಭಕ್ತರಿಗೆ ಸರದಿ ಸಾಲಿನಲ್ಲಿ ಸಾಗುವ ಮಾರ್ಗ, ನಂದಿ, ಮಹಿಷಾ ಮೂರ್ತಿಯ ಬಳಿ ವೃತ್ತ, ಕಾರಂಜಿ, ಸ್ವಾಗತ ಕಮಾನು, ಕಂಟ್ರೋಲ್ ರೂಂ, ಕುಡಿಯುವ ನೀರು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಇದಕ್ಕಾಗಿ 45.70 ಕೋಟಿ ಮಂಜೂರಾಗಿದ್ದು, ಇದೀಗ ಕೆಲಸ ಪ್ರಾರಂಭವಾಗಲಿದೆ ಎಂದು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಅದೇ ರೀತಿ ಸ್ವದೇಶಿ ದರ್ಶನ್ ಅಡಿ 80 ಕೋಟಿ ರೂ ವೆಚ್ಚದಲ್ಲಿ ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿಯಾಗುತ್ತಿದೆ. ಟಾಂಗಾ ರೈಡ್, ಹೆರಿಟೇಜ್ ಎಕ್ಸ್​ಪೀರಿಯನ್ಸ್ , ಮೃಗಾಲಯ ಕಾರಂಜಿ ಕೆರೆಯನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಬಸ್ ನಿಲ್ದಾಣ, ಆಟೋ ನಿಲ್ದಾಣ ಗಳಂತೆ ಟಾಂಗಾಗಳಿಗೆ ಮೈಸೂರಿನಲ್ಲಿ 2 ರಿಂದ 3 ಕಡೆ ಟಾಂಗಾ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.

ಮೈಸೂರನ್ನು ವೀಕ್ಷಿಸಲು ಬರುವ ಪ್ರವಾಸಿಗರು ಟಾಂಗಾ ಸವಾರಿಯನ್ನು ಬಯಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸವಾರಿಯ ಶುಲ್ಕವನ್ನು ನಿಗದಿಪಡಿಸಿ, ಯಾವುದೇ ಪ್ರವಾಸಿಗರು ಹಾಗೂ ಟ್ರಾಫಿಕ್ ಗೆ ತೊಂದರೆಯಾಗದಂತೆ ಸವಾರಿಯ ಮಾರ್ಗವನ್ನು ನಿಯೋಜನೆ ಮಾಡಲಾಗುತ್ತಿದೆ.

Also Read: Daily Horoscope – ನಿಮ್ಮ ನಿಷ್ಕಾಳಜಿಯು ಅನೇಕ ವೈಷಮ್ಯಕ್ಕೆ ಕಾರಣವಾಗುವುದು

ಇದಷ್ಟೆ ಅಲ್ಲದೆ ಇಕೋಲಾಜಿಕಲ್ ಎಕ್ಸೀರಿಯನ್ಸ್ ಅಡಿ ಮೃಗಾಲಯ ಮತ್ತು ಕಾರಂಜಿ ಕೆರೆ ನ್ಯಾಷನಲ್ ಮ್ಯೂಸಿಯಂ ನಡುವೆ ಸಂಪರ್ಕ ಕಲ್ಪಿಸಿ ಬಂದಂತಹ ಪ್ರವಾಸಿಗರು ಒಮ್ಮೆಲೆ ಎರಡು ಸ್ಥಳಗಳ ಪರಿಸರ ಅನುಭವವನ್ನು ಪಡೆಯುವಂತೆ ಮಾಡಲಾಗುತ್ತದೆ. ಅದೇ ರೀತಿ ಮೃಗಾಲಯದ ಒಳಗಡೆ ಜಿಪ್ ವಾಕ್ ಇನ್ನಿತರ ಆಟಗಳು ಆಡಲು ಯೋಜನೆ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Fri, 8 March 24